ರಾಯಪುರ: ಬ್ರಾಹ್ಮಣ ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಕಾರಣಕ್ಕಾಗಿ ಛತ್ತೀಸಗಡ ಸಿಎಂ ಭೂಪೇಶ್ ಬಘೇಲ್ ಅವರ ತಂದೆ ನಂದಕುಮಾರ್ (೭೫) ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.
ರಾಯಪುರ ಪೊಲೀಸರು ನಂದಕುಮಾರ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸರ್ವ ಬ್ರಾಹ್ಮಣ ಸಮಾಜದ ದೂರಿನ ಹಿನ್ನೆಲೆಯಲ್ಲಿ ದೂರು ದಾಖಲಾಗಿದೆ. ಬ್ರಾಹ್ಮಣರು ವಿದೇಶಿಯರು. ಹೀಗಾಗಿ ಬ್ರಾಹ್ಮಣರನ್ನು ಹಳ್ಳಿಗಳಲ್ಲಿ ಬಹಿಷ್ಕರಿಸಬೇಕು ಹಾಗೂ ಪ್ರವೇಶ ನೀಡಬಾರದು ಎಂದು ನಂದಕುಮಾರ್ ಹೇಳಿದ್ದಾರೆ ಎಂದು ಸರ್ವ ಬ್ರಾಹ್ಮಣ ಸಮಾಜ ದೂರಿನಲ್ಲಿ ಹೇಳಿದೆ.
ಇದರ ಜೊತೆಗೆ ಭಗವಾನ್ ರಾಮನ ವಿರುದ್ಧವೂ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂಬ ಆರೋಪ ನಂದಕುಮಾರ್ ವಿರುದ್ಧ ಬಂದಿದೆ. ಹೀಗಾಗಿ ಸಿಎಂ ತಂದೆ ವಿರುದ್ಧ ಭಾರತೀಯ ದಂಡ ಸಂಹಿತೆ 153ಎ, 505(1)ಬಿ ಸಾರ್ವಜನಿಕರಲ್ಲಿ ಭಯ ಮೂಡಿಸುವ ಉದ್ದೇಶದಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಸಿಎಂ ಭೂಪೇಶ್ ಬಘೇಲ್ ತಮ್ಮ ತಂದೆ ವಿರುದ್ಧ ಪ್ರಕರಣ ದಾಖಲಿಸಿರುವುದನ್ನು ಸ್ವೀಕರಿಸಿದ್ದು, ಪೊಲೀಸರ ಕ್ರಮದ ಬಗ್ಗೆ ಯಾವುದೇ ಚಕಾರ ಎತ್ತಿಲ್ಲ ಎಂದು ಮೂಲಗಳು ತಿಳಿಸಿದೆ.

























Discussion about this post