ನವದೆಹಲಿ: ಆ. ೨೬ ರಂದು ಕರ್ತವ್ಯ ನಿರ್ವಹಣೆ ಮಾಡಿ ಮನೆಗೆ ಮರಳಲಿದ್ದ ಪೊಲೀಸ್ ಅಧಿಕಾರಿ ಸಬಿಹಾ ಸೈಫಿ, ಆ ದಿನ ರಾತ್ರಿ ಮನೆಗೆ ಬರದೇ ಇರುವುದಕ್ಕೆ ಕಚೇರಿಯಿಂದ ಸಬೂಬು ಸಿಗತ್ತೆ. ಬೆಳಿಗ್ಗೆ ಹತ್ಯೆಯಾದ ಆಕೆಯ ದೇಹವನ್ನು ಗುರುತಿಸಲು ಪೊಲೀಸರು ಮನೆಯವರಿಗೆ ಕರೆ ಮಾಡುತ್ತಾರೆ.. ಹೀಗೆ ಕಾಣೆಯಾಗಿ ಬರ್ಬರವಾಗಿ ಹತ್ಯೆಯಾದ ಸಬಿಹಾಗೆ ನ್ಯಾಯ ಒದಗಿಸಬೇಕೆಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ದೇಶದಾದ್ಯಂತ ಹಲವೆಡೆ ಇಂಥಾ ಘೋರ ಹತ್ಯೆಯ ಕುರಿತು ಸಾರ್ವಜನಿಕರು ಆಕ್ರೋವ್ಯಕ್ತಪಡಿಸಿ ಖಂಡನೆ ಮಾಡಿದ್ದಾರೆ.
ರಾಜಧಾನಿಯಲ್ಲಿ ಪೊಲೀಸ್ ಅಧಿಕಾರಿಯಾಗಿದ್ದ ಯುವತಿಯ ಕೊಲೆ ಮಾಡಿದ್ದೆ ಎಂದು ಓರ್ವ ವ್ಯಕ್ತಿ ಪೊಲೀಸರಿಗೆ ಶರಣಾಗಿದ್ದಾನೆ. ಆತ ಸಬಿಹಾ ತನ್ನ ಪತ್ನಿ ಎಂದು ಸಹ ಹೇಳಿಕೊಂಡಿದ್ದಾನೆ.
ಲಜಪತ್ ನಗರ್ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಇವರನ್ನು ತಂಡವೊಂದು ಅಪಹರಿಸಿ ಅಮಾನುಷವಾಗಿ ಕೊಲೆ ಮಾಡಲಾಗಿತ್ತು, ಆಕೆಯ ಶವವನ್ನು ಸೂರಜ್ ಕು ಮಡ್ ಎಂಬಲ್ಲಿ ಚರಂಡಿಯಲ್ಲಿ ಎಸೆದಿದ್ದರು. ಆಕೆಯ ಯೋನಿ ಸೀಳಲಾಗಿತ್ತು, ಕುತ್ತಿಗೆ, ಮೊಲೆ ಕೊಯ್ಯಲಾಗಿತ್ತು, ದೇಹದ ಮೇಲೆ ೫೦ಕ್ಕೂ ಹೆಚ್ಚು ಕಡೆ ಗಾಯಗಳಾಗಿದ್ದುವು ಎಂದು ವರದಿಯಾಗಿದೆ.
ತಾನೇ ಕೊಲೆ ಮಾಡಿರೋದು ಎಂದು ಶರಣಾದಾತ ನಿಜಾಮುದ್ಧೀನ್,ಇಡೀಘಟನೆ ಬಗ್ಗೆ ಸಂಶಯ ವ್ಯಕ್ತವಾಗಿದ್ದು ಸೂರಜ್ ಕುಂದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಕೆ ಅವಿವಾಹಿತೆಯಾಗಿದ್ದಳು ಎಂದು ಕುಟುಂಬಸ್ಥರು ಹೇಳಿದ್ದು, ಆಕೆ ಕೆಲಸ ನಿರ್ವಹಿಸುತ್ತಿದ್ದ ಕಚೇರಿಯವರ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಕಚೇರಿಯ ಅವ್ಯವಹಾರದ ಬಗ್ಗೆ ಸಬಿಹಾ ತಿಳಿದಿದ್ದರಿಂದ ಆಕೆಯನ್ನು ಮುಗಿಸಲಾಗಿದೆ ಎಂದು ಸಹವೆಬ್ ಮ್ಯಾಗಜೀನ್ ಗಳು ವರದಿ ಮಾಡಿದೆ.
#justiceforsabihasaifi ಸವಿಹಾ ಸೈಫಿಗೆ ನ್ಯಾಯಕೊಡಿ ಎಂದು ಸಾಮಾಜಿಕಾ ಜಾಲತಾಣಗಳಲ್ಲಿ ಅಭಿಯಾನ ಶುರುವಾಗಿದೆ. ಪೊಲೀಸ್ ಅಧಿಕಾರಿಯೇ ಈ ರೀತಿ ಅನ್ಯಾಯವಾಗಿ ಕೊಲೆ, ಅತ್ಯಾಚಾರ ನಡೆಸಿದ ಮೇಲೆ ಸಾಮಾನ್ಯರ ಗತಿ ಏನೆಂದು ಸಹ ಆಲೋಚಿಸಬೇಕಿದೆ ಎಂದು ಜನರು ಖಂಡಿಸಿದ್ದಾರೆ.

























Discussion about this post