ದಾವಣಗೆರೆ: ಹೊನ್ನಾಳಿ ತಾಲ್ಲೂಕು ಕ್ರೀಡಾಂಗಣದಲ್ಲಿ ಪುರುಷ-ಮಹಿಳೆಯರಿಗೆಲ್ಲಾ ಅತ್ಯಾಧುನಿಕ ಜಿಮ್ ಅನ್ನು ಶಾಸಕ ಎಂ.ಪಿ ರೇಣುಕಾಚಾರ್ಯ್ ಉದ್ಘಾಟನೆ ಮಾಡಿದ್ದಾರೆ.ವ್ಯಾಯಾಮ ಶಾಲೆಗೆ ೨೦ ಲಕ್ಷ ರೂ. ಮೌಲ್ಯದ ಪರಿಕರಗಳು ಬಂದಿದ್ದು, ೨೫ ಲಕ್ಷ ವೆಚ್ಚದಲ್ಲಿ ಮಹಿಳೆಯರ ಜಿಮ್ ಸಹ ತೆರೆಯಲಾಗಿದೆ.
ಮಹಿಳೆಯರಿಗೆ ಮೇಲಂತಸ್ತಿನ ಕೊಠಡಿಯಲ್ಲಿ ಜಿಮ್ ವ್ಯವಸ್ಥೆ ಮಾಡಿದ್ದು, ಪುರುಷರಿಗೆ ಪ್ರತ್ಯೇಕವಾಗಿ ಕೆಳಗೆ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ೧ ಕೋಟಿ ವೆಚ್ಚ್ಚದಲ್ಲಿ ವ್ಯಾಯಾಮ ಶಾಲೆ, ಕ್ರೀಡಾಂಗಣ ಅಭಿವೃದ್ಧಿ ನಡೆಸಿದ್ದು, ಇನ್ನೂ ಒಂದೂವರೆ ಕೋಟಿ ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಶಾಸಕ ರೇಣುಕಾಚಾರ್ಯ ಹೇಳಿದ್ದಾರೆ.
ಮೋದಿ ಅವರ ಕನಸು ಸಾಕಾರಕ್ಕೆ ಮಹಿಳೆ-ಪುರುಷರಿಗೆ ಜಿಮ್ ತೆರೆಯಲಾಗಿದೆ ಎಂದು ಅವರು ಇದೇ ವೇಳೆ ಹೇಳಿದ್ದಾರೆ. ಇದೇ ಸಂದರ್ಭ, ಜಿಮ್ ಪರಿಕರ ಹಾಳುಮಾಡದೆ ಬಳಸುವಂತೆ ಮನವಿ ಮಾಡಿದ್ದಾರೆ.

























Discussion about this post