ಚಿಕ್ಕಮಗಳೂರು: ನಗರದ ಮಲ್ಲೇಗೌಡ ಜಿಲ್ಲಾ ಆಸ್ಪತ್ರೆಗೆ ಮುತ್ತಿಗೆ ಹಾಕಿ ಮಗುವಿನ ಸಾವಿಗೆ ಕಾರಣರಾದ ವೈದ್ಯರ ವಿರುದ್ಧ ಪ್ರತಿಭಟನೆ ನಡೆಸಲಾಗಿದೆ.
ಮಗು ಜನಿಸಿದಾಗ ಚೆನ್ನಾಗಿತ್ತು, ಆದರೆ ಮೃತಪಟ್ಟಿದೆ. ಬಳಿಕವೇ ಮಗುವನ್ನು ಆಸ್ಪತ್ರೆ ಸಿಬ್ಬಂದಿ ಪಾಲಕರಿಗೆ ನೀಡಿದ್ದಾರೆ. ಮಗುವನ್ನು ಮನೆಗೆ ಕೊಂಡೊಯ್ದಾಗ, ಮಗುವಿನ ಮೈ ಮೇಲೆ ಚಾಕುವಿನಿಂದ ಕುಯ್ದ ಗಾಯ ಕಂಡುಬಂದಿದೆ.
ಇದಕ್ಕೆ ಆಕ್ರೋಶಗೊಂಡ ಪಾಲಕರು ವೈದ್ಯರ ಮೇಲೆ ತಿರುಗಿಬಿದ್ದಿದ್ದು, ವೈದ್ಯರ ನಿರ್ಲಕ್ಷ್ಯದಿಂದ ಮಗು ಸತ್ತಿದೆ ಎಂದು ಆರೋಪಿಸಿ ಆಸ್ಪತ್ರೆ ಮುತ್ತಿಗೆ ಹಾಕಿದ್ದಾರೆ.
ಬಡವರು ಆಸ್ಪತ್ರೆಗೆ ಬಂದಾಗ ಈ ರೀತಿ ಅನ್ಯಾಯ ನಡೆಸುವುದು ಸರಿಯಲ್ಲ, ಆದ್ರೆ ಈ ರೀತಿಯ ಮೂರು ಮಕ್ಕಳ ಸಾವಿನ ಪ್ರಕರಣ ನಡೆದಿದೆ ಎಂದು ಪಾಲಕರು ಆರೋಪಿಸಿದ್ದು, ಹರೀಶ್ ದಂಪತಿ ಮತ್ತು ಕುಟುಂಬದವರು ಆಸ್ಪತ್ರೆ ಮುಂದೆ ಕಣ್ಣೀರ ಕೋಡಿ ಹರಿಸಿದ್ದಾರೆ.

























Discussion about this post