ಚಿಕ್ಕಮಗಳೂರು: ಕೊಪ್ಪ ತಾಲೂಕಿನ ಅರಣ್ಯ ಪ್ರದೇಶದಲ್ಲಿ ಕಡವೆಯೊಂದನ್ನು ಕೊಂದು, ವಾಹನ ಸೇರಿದಂತೆ ಕಡವೆಯನ್ನು ಬಿಟ್ಟು ಕಳ್ಳರು ಪರಾರಿಯಾಗಿರುವ ಘಟನೆ ನಡೆದಿದೆ.
ನಾಪತ್ತೆಯಾಗಿರುವ ಆರೋಪಿಗಳಾದ ದಿನೇಶ್, ಪ್ರಶಾಂತ್, ಪೂರ್ಣೇಶ್, ಸುಗಂದ್, ಸುರೇಶ್ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದೆ. ಅರಣ್ಯ ಇಲಾಖೆ ಆರೋಪಿಗಳು ಬಳಸಿದ್ದ ಜೀಪ್ ಸೇರಿದಂತೆ ಸತ್ತ ಕಡವೆಯನ್ನು ವಶಪಡಿಸಿಕೊಂಡಿದ್ದಾರೆ.
ಕೊಪ್ಪ ತಾಲೂಕಿನ ನುಗ್ಗಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೊಸೂರ ಸಮೀಪದ ಎಸ್ಟೇಟ್ ಬಳಿ ಕೆಲವರು ಕಡವೆ ಬೇಟೆಯಾಡಿದ ಬಗ್ಗೆ ಖಚಿತ ಮಾಹಿತಿ ಪಡೆದಿದ್ದ ಅರಣ್ಯ ಇಲಾಖೆ ಸ್ಥಳ ಪರಿಶೀಲನೆ ನಡೆಸಿತ್ತು. ಈ ವೇಳೆ ಕಡವೆ ಕೊಂದು ಪರಾರಿಯಾಗಿದ್ದರು ಆರೋಪಿಗಳು. ಸಮಯ ಸಾಧಕರಂತೆ ಮತ್ತೊಮ್ಮೆ ಕಡವೆ ದೇಹ ಹೊತ್ತೊಯ್ಯಲು ಪಿಕಪ್ ವಾಹನ ತಂದಾಗ ಮತ್ತೊಮ್ಮೆ ಅರಣ್ಯ ಇಲಾಖೆ ದಾಳಿ ನಡೆಸಿದ್ದು ಈ ಸಲ ಪಿಕಪ್ ವಾಹನ ವಶಪಡಿಸಿಕೊಂಡಿದ್ದಾರೆ.
ಕಾರ್ಯಾಚರಣೆ ಯಲ್ಲಿ ಕೊಪ್ಪ ಡಿಎಫ್ ಒ ನೀಲೇಶ್ ಶಿಂಧೆ ಮಾರ್ಗದರ್ಶನದಲ್ಲಿ ಆರ್ ಎಫ್ ಒ ಪ್ರವೀಣ್, ರಘು, ಪ್ರಕಾಶ್ , ಕಿರಣ್, ದಿವಾಕರ್ ಪಾಲ್ಗೊಂಡಿದ್ದರು. ಚಿಕ್ಕಮಗಳೂರಿನಲ್ಲಿ ಬೇಟೆಯಾಡುವ ಪ್ರಕರಣ ಇದೇ ಮೊದಲಲ್ಲ. ಆದರೂ ಸ್ಥಳೀಯರ ಬೆಂಬಲದಿಂದಷ್ಟೇ ಕಾಡುಪ್ರಾಣಿಗಳನ್ನು ಕಾಪಾಡಲು ಸಾಧ್ಯ.

























Discussion about this post