ಮುಂಬೈ: ಕಟ್ಟುವ ಹಂತದಲ್ಲಿದ್ದ ಮೇಲ್ಸೇತುವೆಯ ಒಂದು ಭಾಗ ಶುಕ್ರವಾರ ಮುಂಜಾನೆ ಇದ್ದಕ್ಕಿಂದಂತೆ ಕುಸಿದು, ೧೪ ಕಾರ್ಮಿಕರು ಗಾಯಗೊಂಡಿರುವ ಘಟನೆ ನಡೆದಿದೆ.
ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ (BKC) ಉಪನಗರ ಎಂಟಿಎನ್ ಎಲ್ ಜಂಕ್ಷನ್ (MTNOVERL JUNCTION) ನಲ್ಲಿ ಇಂದು ಬೆಳಿಗ್ಗೆ ೪:೪೧ರ ಹೊತ್ತಿಗೆ ಘಟನೆ ನಡೆದಿರುವುದಾಗಿ ತಿಳಿದುಬಂದಿದೆ.
ವಿ.ಎನ್. ದೇಸಾಯಿ ಆಸ್ಪತ್ರೆ (V.N. DESAI HOSPITAL)ಗೆ ಗಾಯಾಳು ಕಾರ್ಮಿಕರನ್ನು ದಾಖಲಿಸಲಾಗಿದ್ದು, ಚಿಕಿತ್ಸೆ ಕೊಡಿಸಲಾಗಿದೆ. ಕಾರ್ಮಿಕರ ಆರೋಗ್ಯ ಸರಿಯಾದ ಸ್ಥಿತಿಯಲ್ಲಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿದೆ.
ಘಟನೆ ನಡೆಯುತ್ತಿದ್ದಂತೆ ಪೊಲೀಸರು, ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು ಸಹಾಯ ಮಾಡಿದ್ದಾರೆ.
ಗರ್ಡರ್ ಕುಸಿದು ಬಿದ್ದಿದ್ದರಿಂದ ಘಟನೆ ನಡೆದಿದೆ ಎನ್ನಲಾಗಿದೆ. ಇಲ್ಲಿ ಅತಿಯಾದ ವಾಹನ ದಟ್ಟಣೆ ಕಡಿಮೆ ಮಾಡುವುದಕ್ಕಾಗಿಯೇ ಮೇಲ್ಸೇತುವೆ ನಿರ್ಮಿಸಲಾಗುತ್ತಿದೆ.

























Discussion about this post