ಚಿಕ್ಕಮಗಳೂರು : ಬಾಳೆಹೊನ್ನೂರಿನ ರಂಭಾಪುರಿ ಪೀಠದಲ್ಲಿ ೫೧ ಅಡಿ ಎತ್ತರದ ರೇಣುಕಾಚಾರ್ಯ ಪ್ರತಿಮೆ ಪ್ರತಿಷ್ಠಾಪನೆಗೊಳ್ಳಲಿದ್ದು ಪ್ರತಿಮೆ ಕೆತ್ತನೆಗೆ ಆಂದ್ರಪ್ರದೇಶದಿAದ ೧೦೦ ಟನ್ ತೂಕದ ಭಾರೀ ಶಿಲೆ ಹೊತ್ತು ಬಂದ ಲಾರಿ ಪೀಠವನ್ನು ಪ್ರವೇಶಿಸಿದೆ.
ಭಾರೀ ಗಾತ್ರದ ಶಿಲೆ ಹೊತ್ತು ತಂದ ಲಾರಿಯನ್ನು ಭಕ್ತರು ಸಂಭ್ರಮದಿAದ ಸ್ವಾಗತಿಸಿದ್ದಾರೆ. ಮೂರ್ತಿ ಕೆತ್ತನೆಗೆ ಬಳಸುವ ಇನ್ನೂ ೨ ಬೃಹತ್ ಶಿಲೆಗಳನ್ನು ಹೊತ್ತ ಲಾರಿಗಳು ಆಂದ್ರ ಪ್ರದೇಶದಿಂದ ಬಾಳೆಹೊನ್ನೂರಿಗೆ ಬರಬೇಕಾಗಿದೆ.
ಮಳೆ ಹಿನ್ನಲೆಯಲ್ಲಿ ನರಸಿಂಹರಾಜಪುರದ ಮಡಬೂರು ಬಳಿ ಲಾರಿ ಬಂದಾಗ ರಸ್ತೆಯ ಪಕ್ಕಕ್ಕೆ ಸಿಲುಕಿ ಹೊರಬರಲಾಗದೆ ೨ ದಿನ ಅಲ್ಲೆ ಉಳಿದಿತ್ತು. ಬೆಂಗಳೂರಿನಿAದ ಕ್ರೇನನ್ನು ತರಿಸಿ ಲಾರಿಯನ್ನು ಮೇಲಕ್ಕೆ ಎತ್ತಿ ಪ್ರಯಾಣ ಮುಂದುವರಿಸಲಾಯಿತು. ಸದ್ಯದಲ್ಲೇ ಶುಭಮುಹೂರ್ತದಲ್ಲಿ ಮೂರ್ತಿ ಕೆತ್ತನೆ ಕೆಲಸ ಆರಂಭವಾಗಲಿದೆ ಎಂದು ರಂಭಾಪುರಿ ಶ್ರೀಗಳು ತಿಳಿಸಿದ್ದಾರೆ.
ಭಾರೀ ಗಾತ್ರದ ಶಿಲೆಯನ್ನು ಹೊತ್ತ ೫೦ ಚಕ್ರದ ಲಾರಿಯನ್ನು ಮಲೆನಾಡಿನ ರಸ್ತೆಗಳಲ್ಲಿ ಸಾಗುತ್ತಿದ್ದಂತೆ ಜನ ಕುತೂಹಲದಿಂದ ವೀಕ್ಷಿಸಿದರು.

























Discussion about this post