ಪಂಜಾಬ್: ಪರಿಶಿಷ್ಠ ಜಾತಿ, ರಾಮ್ ದಾಸಿಯಾ (ಚಮಾರ್) ಸಮುದಾಯಕ್ಕೆ ಸೇರಿದ ನಾಯಕನ ಪಂಜಾಬ್ ನಲ್ಲಿ ಮೊಟ್ಟಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಕಾಂಗ್ರೆಸ್ ನಿಂದ ಆಯ್ಕೆ ಮಾಡಲಾಗಿದೆ.
ಚಮಕೌರ್ ಸಾಹಿಬ್ ವಿಧಾನಸಭೆ ಕ್ಷೇತ್ರವನ್ನು ಪ್ರತಿನಿಧಿಸುವ ಚನ್ನಿ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ೨೦೧೫-೧೬ರಲ್ಲಿ ಪಂಜಾಬ್ ವಿಧಾನಸಭೆಯ ವಿರೋಧ ಪಕ್ಷದ ನಾಯಕರೂ ಆಗಿದ್ದರು. ಮಾರ್ಚ್ ೨೦೧೭ರಲ್ಲಿ ಸಿಎಂ ಅಮರಿಂದರ್ ಸಿಂಗ್ ಸಂಪುಟಕ್ಕೆ ಸೇರಿ, ಮೊದಲ ಬಾರಿಗೆ ಸಚಿವರಾಗಿ ಆಯ್ಕೆಯಾಗಿದ್ದರು.
ಕ್ಯಾಪ್ಟನ್ ಅಮರಿಂದರ್ ಸಿಂಗ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ, ಸುಖ್ ಹಿಂದರ್ ಸಿಂಗ್ ರಂಧಾವಾ ಅವರ ಹೆಸರು ಕೇಳಿಬಂದಿತ್ತು. ಆದರೂ ಕಾಂಗ್ರೆಸ್ ದಿಡೀರ್ ಬೆಳವಣಿಗೆಯಲ್ಲಿ ಚಮಕೌರ್ ಸಾಹಿಬ್ ಅವರನ್ನು ಆಯ್ಕೆ ಮಾಡಿದೆ.
ಮೀಟೂ ವಿವಾದದಲ್ಲೂ ಭಾಗಿ
೨೦೧೮ರಲ್ಲಿ ಅಶ್ಲೀಲ ಸಂದೇಶವನ್ನು IAS ಅಧಿಕಾರಿ ಕಳುಹಿಸಿದ್ದರು ಎಂಬ ಆರೋಪ ಇವರ ಮೇಲಿದ್ದು, ಮಿಟೂ ಅಭಿಯಾನದಲ್ಲಿ ಇವರ ಹೆಸರು ಥಳಕು ಹಾಕಿಕೊಂಡಿತ್ತು. ಮಹಿಳೆ ಲಿಖಿತ ದೂರು ದಾಖಲಿಸದ ಕಾರಣ ಪ್ರಕರಣ ಇತ್ಯರ್ಥವಾಗಿದೆ ಎಂದು ಸಿಎಂ ಅಮರಿಂದರ್ ಸಿಂಗ್ ಉತ್ತರಿಸಿದ್ದರು ಕೂಡಾ, ಪಂಜಾಬ್ ಮಹಿಳಾ ಆಯೋಗ ಇದೇ ೨೦೨೧ರ ಮೇ ತಿಂಗಳಲ್ಲಿ ರಾಜ್ಯ ಸರ್ಕಾರಕ್ಕೆ ಸದರಿ ಆರೋಪದ ಕುರಿತು ಪ್ರತಿಕ್ರಿಯೆ ನೀಡುವಂತೆ ನೋಟಿಸ್ ಜಾರಿಮಾಡಿತ್ತು.

























Discussion about this post