ಚಿಕ್ಕಮಗಳೂರು : ದೇಶದಲ್ಲಿ ಬೆಲೆ ಏರಿಕೆ ಹಾಗೂ ಜನವಿರೋಧಿ ಕೃಷಿ ಕಾಯ್ದೆಗಳ ವಿರೋಧಿಸಿ ದಲಿತ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ಸೋಮವಾರ ನಗರದ ಆಜಾದ್ ಪಾರ್ಕ್ ವೃತ್ತದ ಎದುರು ದಿಢೀರ್ ಪ್ರತಿಭಟನೆ ಕೈಗೊಂಡರು.
ಒಕ್ಕೂಟ ಸರ್ಕಾರ ಬೆಲೆ ನಿಯಂತ್ರಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜನಸಾಮಾನ್ಯರ ಬದುಕು ದುಸ್ತರವಾಗಿದೆ ಎಂದು ಪ್ರತಿಭಟನಾಕಾರರ ಆಕ್ರೋಶ ಹೊರಹಾಕಿದರು.
ಬೆಲೆ ಏರಿಕೆಯನ್ನು ತಡೆಗಟ್ಟಲಾಗದೆ ಜನರನು ದಿಕ್ಕುತಪ್ಪಿಸುವ ಕೆಲಸಗಳನ್ನು ಸರ್ಕಾರ ಮಾಡುತ್ತಿವೆ. ಬೆಲೆ ಏರಿಕೆ ಹಾಗೂ ಕೇಂದ್ರದ ಕೃಷಿ ಕಾಯ್ದೆಗಳನ್ನು ಬೆಂಬಲಿಸುವ ಮೂಲಕ ಕೆಲವರು ಸರ್ಕಾರದ ಏಜೆಂಟ್ಗಳAತೆ ವರ್ತಿಸುತ್ತಿದ್ದಾರೆ ಎಂದು ಟೀಕಿಸಿದರು.
ಪ್ರತಿಭಟನೆಯಲ್ಲಿ ಡಿಪಿಎಸ್ಒ ಒಕ್ಕೂಟದ ಶ್ರೀನಿವಾಸ್, ಉಮೇಶ್ಕುಮಾರ್, ಸುರೇಶ್, ಮಂಜುನಾಥ್, ಅಂಗಡಿ ಚಂದ್ರು, ಉದ್ದಪ್ಪ, ಗುರುಶಾಂತಪ್ಪ, ಹೊನ್ನೇಶ್, ಗಂಗಾಧರಪ್ಪ, ರವೀಶ್ ಬಸಪ್ಪ, ಸೇರಿದಂತೆ ಅನೇಕರು ಭಾಗಹಿಸಿದ್ದರು.

























Discussion about this post