ಚಿಕ್ಕಮಗಳೂರು : ವಾಹನವೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ, ಮಲೆನಾಡಿನ ಭಾಗದಲ್ಲಿ ವಿರಳವಾಗಿ ಕಂಡುಬರುವ ಹುಲಿ ಬೆಕ್ಕೊಂದು ಸಾವನ್ನಪ್ಪಿರುವ ಘಟನೆ ನಡೆದಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ.
ದಟ್ಟ ಅರಣ್ಯ ಪ್ರದೇಶವಾದ ಮಲೆನಾಡಿನ ಭಾಗಗಳಲ್ಲಿ ಹೆಚ್ಚಾಗಿ ಪ್ರಾಣಿಗಳು ಒಂದೆಡೆ ಇಂದ ಇನ್ನೊಂದೆಡೆಗೆ ರಸ್ತೆ ದಾಟುತ್ತಿರುತ್ತದೆ. ಈ ಸಮಯದಲ್ಲಿ ವೇಗವಾಗಿ ವಾಹನ ಚಾಲನೆ ಮಾಡುವ ಸವಾರರಿಗೆ ಪ್ರಾಣಿಗಳು ಕಾಣದೆ ಇಂಥಾ ಅರಣ್ಯರೋಧನದ ಘಟನೆ ನಡರಯುತ್ತಿರುತ್ತವೆ. ಹಲವರು ಹುಲಿಬೆಕ್ಕನ್ನು ಚಿರತೆ ಮರಿ ಎಂದು ತಿಳಿದಿದ್ದರು. ಈ ವಿಶೇಷ ಬೆಕ್ಕನ್ನು ಮರಣೋತ್ತರ ಪರೀಕ್ಷೆ ನಡೆಸಿದ, ಅರಣ್ಯ ಇಲಾಖೆಯ ಅಧಿಕಾರಿಗಳು ಹುಲಿಬೆಕ್ಕೆಂದು ಸ್ಪಷ್ಟನೆ ನೀಡಿದ್ದಾರೆ.
ಹುಲಿ ಬೆಕ್ಕು ಅಳಿವಿನ ಅಂಚಿನಲ್ಲಿರುವ ಅಪರೂಪದ ಸಂತತಿ. ಇದು ಪಶ್ಚಿಮ ಘಟ್ಟದ ಭಾಗದಲ್ಲಿ ಮಾತ್ರ ಕಂಡುಬರುತ್ತದೆ. ಇದರ ಜೀವತಾವಧಿಯು ಕೇವಲ ಏಳರಿಂದ ಎಂಟು ವರ್ಷ, ಕಾಡು ಕೋಳಿ, ಮೊಲ, ಅಳಿಲು, ಪಕ್ಷಿಗಳನ್ನು ಬೇಟೆಯಾಡುವ ಈ ಪ್ರಾಣಿ ಹೆಚ್ಚಾಗಿ ಮರದ ಮೇಲೆ ವಾಸ ಮಾಡುತ್ತದೆ.
ಈ ರೀತಿಯ ಅಳಿವಿನಂಚಿನಲ್ಲಿರುವ ಪ್ರಾಣಿ ಪ್ರಭೇದಗಳನ್ನು ಕಾಪಾಡಲು ಎಲ್ಲರಿಗೂ ಆಗದಿದ್ದರೂ ಸಹ, ಮಲೆನಾಡು ಭಾಗದಲ್ಲಿ ಅತಿವೇಗದ ಚಾಲನೆ ನಡೆಸದೆ ಸ್ವಲ್ಪ ವನ್ಯ ಜೀವಿಗಳ ಕಾಳಜಿಯಿಂದ ವಾಹನ ಓಡಿಸುವುದು ಉತ್ತಮ ಎಂದು ಸ್ಥಳೀಯರು ಹೇಳಿದರು.

























Discussion about this post