ತಿರುವನಂತಪುರಂ: ಕೇರಳ ಸರಕಾರದ ತಿರುವೋಣಂ (ಓಣಂ) ಲಾಟರಿಯ ಬಂಪರ್ ಬಹುಮಾನ ರಿಕ್ಷಾ ಚಾಲಕನಿಗೆ ಒಲಿದಿದೆ. ಗಣೇಶನ ಹಬ್ಬದ ದಿನವೇ ರಿಕ್ಷಾ ಚಾಲಕ ೩೦೦ ರೂ ಕೊಟ್ಟು ಲಾಟರಿ ಖರೀದಿಸಿದ್ದ ಎನ್ನಲಾಗಿದೆ. ಇದೀಗ ಫಲಿತಾಂಶ ಪ್ರಕಟವಾಗಿದ್ದು ಬಂಪರ್ ಬಹುಮಾನ ಬಂದಿದೆ.
ಕೇರಳದ ಎರ್ನಾಕುಲಂ ಜಿಲ್ಲೆಯ ಕೊಚ್ಚಿಯ ಮರಡು ನಿವಾಸಿ ವರ್ಷದ ಆಟೋ ರಿಕ್ಷಾ ಚಾಲಕ ಜಯಪಾಲನ್ ಪಿ ಆರ್ (೫೮) ಇವರಿಗೆ ಈ ಬಾರಿಯ ಬಂಪರ್ ಬಹುಮಾನ ಒಲಿದಿದೆ. ಸಾಲ ಮಾಡಿ ಆಟೋ ಖರೀದಿಸಿ ಓಡಿಸುತ್ತಿದ್ದ ಜಯಪಾಲನ್ EMI ಕಟ್ಟಲು ಪರದಾಡುವ ಸ್ಥಿತಿ ಇತ್ತು. ಇದೀಗ ತೆರಿಗೆ ಕಳೆದು ಸುಮಾರು 7 ಕೋಟಿ ರೂ. ಅವರ ಕೈ ಸೇರಲಿದೆ.
ಮೊದಲು ಮನೆ ಸಾಲ, ರಿಕ್ಷಾ ಸಾಲ ತೀರಿಸುವೆ. ಉಳಿದ ಹಣವನ್ನು ಕುಟುಂಬದವರೊಂದಿಗೆ ಚರ್ಚಿಸಿ ಬಳಸುತ್ತೇನೆ ಎಂದು ಜಯಪಾಲನ್ ತಿಳಿಸಿದ್ದಾರೆ. ಬಡತನದಲ್ಲಿ ಕಾಲ ಕಳೆಯುತ್ತಿದ್ದ ಜಯಪಾಲನ್ ಇದ್ದಕ್ಕಿದ್ದಂತೆ ಕೊಟ್ಯಾಧಿಪತಿಯಾಗಿದ್ದಾರೆ. ಅದೃಷ್ಟ ಲಕ್ಷ್ಮೀ ಒಲಿದರೆ ಹೀಗೇನೆ ಎಂದು ಜನ ಸೋಜಿಗ ವ್ಯಕ್ತಪಡಿಸಿದ್ದಾರೆ.

























Discussion about this post