ಚಿಕ್ಕಮಗಳೂರು: ಕೇಂದ್ರಸರ್ಕಾರದ ಕರಾಳ ಕೃಷಿ ಕಾಯಿದೆಗಳ ರದ್ದತಿಗೆ ಒತ್ತಾಯಿಸಿ ಸೆ.27 ರಂದು ಸಂಯುಕ್ತ ಕಿಸಾನ್ ಮೋರ್ಚಾ ಕರೆನೀಡಿರುವ ಭಾರತಬಂದ್‌ಗೆ ಜಿಲ್ಲೆಯಲ್ಲಿ ಬಿಜೆಪಿ ಹೊರತು ಪಡಿಸಿ ವಿವಿಧ ಪಕ್ಷ ಮತ್ತು ಸಂಘಟನೆಗಳು ಜಿಲ್ಲಾಬಂದ್‌ಗೆ ಬೆಂಬಲ ಸೂಚಿಸಿವೆ.
ಕರ್ನಾಟಕ ರಾಜ್ಯ ರೈತಸಂಘ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್, ಬಹುಜನಸಮಾಜ ಪಕ್ಷ, ಭಾರತ ಕಮ್ಯೂನಿಸ್ಟ್ ಪಕ್ಷ, ಸಿಪಿಐ (ಎಂ.ಎಲ್.), ಜಾತ್ಯತೀತ ಜನತಾದಳ, ಆಮ್ ಆದ್ಮಿಪಾರ್ಟಿ, ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್‌ವಾದ), ಕರ್ನಾಟಕ ದಲಿತ ಸಂಘರ್ಷ ಸಮಿತಿ, ಅಖಿಲ ಭಾರತ ಕಿಸಾನ್‌ಸಭಾ, ದಲಿತ ಪ್ರಗತಿಪರ ಸಂಘಟನೆಗಳ ಒಕ್ಕೂಟ, ಕನ್ನಡಸೇನೆ, ಕರ್ನಾಟಕ ರಕ್ಷಣಾವೇದಿಕೆ, ನವಕರ್ನಾಟಕ ಯುವಶಕ್ತಿ, ವಿಶ್ವರತ್ನ ಯುವಸೇನೆ, ಕರ್ನಾಟಕ ಪ್ರಗತಿಪರ ಸಂಘಟನೆ, ಪ್ರಗತಿಪರ ಕಾರ್ಮಿಕ ಸಂಘಟನೆ, ಜಾತಿವಿನಾಶವೇದಿಕೆ, ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘ(ಎಐಟಿಯುಸಿ), ಜನದನಿ ಸಂಘಟನೆ, ಪ್ರಗತಿಪರ ರೈತ ಸಂಘಟನೆ, ಸಂಕೇತ್ ಯುವಸಂಘಗಳು ಸೇರಿದಂತೆ ೨೩ ಸಂಘಟನೆಗಳ ಜಿಲ್ಲಾಬಂದ್‌ಗೆ ಬೆಂಬಲ ವ್ಯಕ್ತಪಡಿಸಿವೆ.
ಸಿಪಿಐ ಮುಖಂಡ ಬಿ.ಅಮ್ಜದ್, ಜಾತ್ಯತೀತ ಜನತಾದಳದ ರಾಜ್ಯ ಉಪಾಧ್ಯಕ್ಷ ಎಚ್.ಎಚ್.ದೇವರಾಜ್, ಬಹುಜನ ಸಮಾಜ ಪಕ್ಷದ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ, ಕಾಂಗ್ರೆಸ್ ಪಕ್ಷದ ಜಿಲ್ಲಾವಕ್ತಾರ ಹಿರೇಮಗಳೂರು, ಕನ್ನಡ ಸೇನೆ ಜಿಲ್ಲಾಧ್ಯಕ್ಷ ಪಿ.ಸಿ.ರಾಜೇಗೌಡ , ರೈತ ಸಂಘದ ಜಿಲ್ಲಾಧ್ಯಕ್ಷ ಎಂ.ಸಿ.ಬಸವರಾಜ್, ಆಮ್‌ಆದ್ಮಿ ಪಕ್ಷದ ಜಿಲ್ಲಾಸಂಚಾಲಕ ಡಾ.ಸುಂದರಗೌಡ ಮಾತನಾಡಿದರು. ದಲಿತ ಸಂಘರ್ಷ ಸಮಿತಿ ಜಿಲ್ಲಾಪ್ರಧಾನ ಸಂಚಾಲಕ ಮರ್ಲೆ ಅಣ್ಣಯ್ಯ, ಕರ್ನಾಟಕ ರಕ್ಷಣಾವೇದಿಕೆ ಜಿಲ್ಲಾಧ್ಯಕ್ಷ ತೇಗೂರುಜಗದೀಶ್‌ಅರಸ್ ಇದ್ದರು.

























Discussion about this post