ಚಿಕ್ಕಮಗಳೂರು: ಮೂಡಿಗೆರೆ ಸಮೀಪ ಕೆ.ಎಂ ರಸ್ತೆಯಲ್ಲಿ ಇಂದು ಬೆಳಿಗ್ಗೆ ಸುಮಾರು ೮ಗಂಟೆಗೆ ಒಂದು ಹಸುವಿಗೆ ಪೆಟ್ಟಾದ ಸಂಗತಿ ತಿಳಿದು ಬರುತ್ತದೆ. ಈ ವಿಷಯ ತಿಳಿದ ಕೂಡಲೇ ಕೆಲವು ಸ್ವಯಂ ಸೇವಕರು ಗುಂಪುಗೂಡಿ ಹಸುವಿಗೆ ಚಿಕಿತ್ಸೆ ಕೊಡಿಸಿದ ಘಟನೆ ನಡೆದಿದೆ.
ಸಂಯೋಜಕ ಪ್ರವೀಣ್ ಪೂಜಾರಿ ಮಂಜುನಾಥ ಪೆಟ್ರೋಲ್ ಬ್ಯಾಂಕ್ ಹರೀಶ್ ಗೌಡ ಹಾಗೂ ಬಜರಂಗದಳದ ಕಾರ್ಯಕರ್ತರು ಒಟ್ಟಾಗಿ ಸೇರಿ ಒಂದು ಗಾಡಿ ಸಿದ್ದ ಮಾಡಿ ಹಸುವನ್ನು ಎತ್ತಿಹಾಕಿಕೊಂಡು ಮೂಡಿಗೆರೆಯ ಪಶು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಲಾಯಿತು
ಪ್ರವೀಣ್ ಅಚ್ಚು ಸಂತೋಷ್ ರಘು ಗೌಡ ಹಾಗೂ ಬಜರಂಗದಳದ ಕಾರ್ಯಕರ್ತರಾದ ಮನೋಜ್ ಪ್ರಣಿತ್ ಪ್ರಸನ್ನ ನಿತಿನ್ ಹೇಮಂತ್ ಸತೀಶ್ ಅರಣ್ಯ ಇಲಾಖೆಯ ವಾಹನ ಚಾಲಕರಾದ ಸುಮಂತ್ ಕೆ.ಎಸ್. ಹಾಗೂ ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಈ ಒಂದು ಕಾರ್ಯದಲ್ಲಿ ಭಾಗಿಯಾಗಿದ್ದರು
ಚಿಕಿತ್ಸೆಯನ್ನು ಕೊಡಿಸಿದ ಮೇಲೆ ಬಾಳೆಹೊನ್ನೂರಿನ ಮಠಕ್ಕೆ ಕಳುಹಿಸಿಕೊಡಲಾಯಿತು. ರಾತ್ರಿ 10 ಗಂಟೆಗೆ ಸುಮಾರಿಗೆ ಗಾಯಗೊಂಡ ಹಸುವನ್ನು ಇಲ್ಲಿ ಚಿಕಿತ್ಸೆ ನೀಡಲು ಸಾಧ್ಯವಿಲ್ಲ ಎಂದು ನಿರಾಕರಿಸಿದಾಗ ಮತ್ತೆ ಮೂಡಿಗೆರೆಗೆ ತರಲಾಯಿತು ಎಂದು ಮೂಲಗಳು ತಿಳಿಸಿದೆ.
ವರದಿ: ನಂದಿಶ್ ಬಣಕಲ್

























Discussion about this post