ಚಿಕ್ಕಮಗಳೂರು: ಕೋವಿಡ್ ಸೋಂಕಿಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದ 30ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಮಂಗಳವಾರ ಜಿಲ್ಲೆಯ 17 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಚಿಕಿತ್ಸೆ ಫಲಕಾರಿಯಾಗದೆ ಓರ್ವ ವ್ಯಕ್ತಿ ಮೃತಪಟ್ಟಿದ್ದಾನೆ.
ಚಿಕ್ಕಮಗಳೂರು ತಾಲ್ಲೂಕಿನ ೪, ಕಡೂರು ೧, ಮೂಡಿಗೆರೆ ೨, ನರಸಿಂಹರಾಜಪುರ ೨, ಕೊಪ್ಪ ತಾಲ್ಲೂಕಿನ ೭ ಹಾಗೂ ಶೃಂಗೇರಿ ತಾಲ್ಲೂಕಿನ ಓರ್ವ ವ್ಯಕ್ತಿಯಲ್ಲಿ ಸೋಂಕು ಕಾ ಣಿಸಿಕೊಂಡಿದೆ. ಇವರಲ್ಲಿ ೧೬ಮಂದಿಯನ್ನು ಹೋಮ್ ಐಸೋಲೇಶನ್ಗೆ ಒಳಪಡಿಸಲಾ ಗಿದೆ. ಓರ್ವ ವ್ಯಕ್ತಿ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದಾನೆ.
ಸೋಂಕಿಗೆ ಒಳಗಾಗಿ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಡೂರು ತಾಲ್ಲೂಕಿನ ೬೫ವರ್ಷದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಜಿಲ್ಲೆಯಲ್ಲಿ ಇದುವರೆಗೂ ೫೦,೭೮೪ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ೪೯,೯೨೮ಮಂದಿ ಗುಣ ಮುಖರಾಗಿದ್ದಾರೆ. ೪೩೧ಮಂದಿಯಲ್ಲಿ ಸೋಂಕು ಸಕ್ರೀಯವಾಗಿದ್ದು, ೩೯೫ಮಂದಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

























Discussion about this post