ವಾಷಿಂಗ್ಟನ್: ಅಮೇರಿಕಾ ಸರ್ಕಾರದ ಉಪಕಾರ್ಯದರ್ಶಿ ವೆಂಡಿ ಆರ್. ಶರ್ಮನ್ ಅ. ೬ರಂದು ಭಾರತಕ್ಕೆ ಭೇಟಿ ನೀಡುತ್ತಾರೆ ಎಂದ ವಿದೇಶಾಂಗ ಇಲಾಖೆ ತಿಳಿಸಿದೆ. ದ್ವಿಪಕ್ಷೀಯ, ಪ್ರಾದೇಶಿಕ ವಿಚಾರಗಳ ಕುರಿತು ಚರ್ಚೆಗಾಗಿ ಅವರು ಆಗಮಿಸಲಿದ್ದಾರೆ.
ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಅಮೇರಿಕಾದ ಅಧ್ಯಕ್ಷ ಜೋ ಬೈಡನ್ ಜಪತೆಗೆ ದ್ವಿಪಕ್ಷೀಯ ಶೃಂಗಸಭೆ ಪೂರೈಸಿದ್ದು ಇದೆ ಮುಂದುವರಿದ ಭಾಗವಾಗಿ ವೆಂಡಿ ಭಾರತದ ಭೇಟಿ ನಿಯೋಜಿತವಾಗಿದೆ ಎಂದು ಊಹಿಸಲಾಗಿದೆ. ಅ.೬ರಂದು ಅವರು ದೆಹಲಿಯಲ್ಲಿ ಸರಣಿ ದ್ವಿಪಕ್ಷೀಯ ಸರಣಿ ಸಭೆಗಳಲ್ಲಿ ಭಾಗವಹಿಸುತ್ತಾರೆ. ನಂತ ಐಡಿಯಾಸ್ ಶೃಂಗಸಭೆಯಲ್ಲಿ ಪಾಲ್ಗೊಳ್ಳುತ್ತಾರೆ.
ಅ. ೭ ರಂದು ಮುಂಬೈ ಗೆ ತೆರಳಿ ವಾಣಿಜ್ಯ ವ್ಯಾಪಾರ ಸಭೆಗಳಲ್ಲಿ ಭಾಗವಹಿಸುತ್ತಾರೆ ಎಂದು ವಿದೇಶಾಂಗ ಇಲಾಖೆ ಪ್ರಕಟಣೆ ತಿಳಿಸಿದೆ. ಮುಂಬೈ ನಿಂದ ಪಾಕಿಸ್ತಾನದ ಭೇಟಿ ಮಾಡಿ, ಇಸ್ಲಾಮಾಬಾದ್ ನಲ್ಲಿ ಹಿರಿಯ ಅಧಿಕಾರಿಗಳ ಜೊತೆ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಸೆ. ೨೯ ರಿಂದ ಉಜ್ಬೇಕಿಸ್ತಾನ ಮತ್ತು ಸ್ವಿಟ್ಜರ್ಲೆಂಡ್ ದೇಶಗಳ ಪ್ರವಾಸದಲ್ಲಿ ವೆಂಡಿ ನಿರತರಾಗಿರುತ್ತಾರೆ.
Discussion about this post