ಚಿಕ್ಕಮಗಳೂರು : ಜಿಲ್ಲೆಯ ಪರಿಭಾವಿತ ಅರಣ್ಯ ಪ್ರದೇಶ (ಡೀಮ್ಡ್ ಫಾರೆಸ್ಟ್)ದಲ್ಲಿನ ಜಮೀನಿನ ಸಮಸ್ಯೆಗಳನ್ನು ಕಂದಾಯ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಜಂಟಿ ಸಮೀಕ್ಷೆ ಕೈಗೊಂಡು ಜನರ ಸಮಸ್ಯೆಗಳನ್ನು ಇತ್ಯರ್ಥಪಡಿಸಬೇಕು ಎಂದು ಕಸ್ತೂರಿ ರಂಗನ್ ಹೋರಾಟ ಸಮಿತಿ ಪ್ರಧಾನ ಸಂಚಾಲಕ ವಿಜಯ್‌ಕುಮಾರ್ ಆಗ್ರಹಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ ರೈತರ ಅಕ್ರಮ ಸಕ್ರಮಕ್ಕಾಗಿ ಕಳೆದ ಬಾರಿ ೫೭ ಅರ್ಜಿ ಸಲ್ಲಿಸಲು ಅವಕಾಶವಿದ್ದರೂ ಚುನಾವಣಾ ಸಂಹಿತೆ ಜಾರಿಯಲ್ಲಿದ್ದರಿಂದ ಅರ್ಜಿ ಪಡೆಯುವುದನ್ನು ನಿಲ್ಲಿಸಲಾಗಿತ್ತು ಇದರಿಂದ ಹಲವಾರು ರೈತರು ಅರ್ಜಿ ಸಲ್ಲಿಸದೆ ವಂಚಿತರಾಗಿದ್ದಾರೆ ಈ ಬಗ್ಗೆ ಕಂದಾಯ ಸಚಿವರು ಗಮನಹರಿಸುವಂತೆ ಮನವಿ ಮಾಡಿದರು.
ಪಾರಂ ೫೭ ರ ನಮೂನೆಯ ಅರ್ಜಿಯನ್ನು ಸಲ್ಲಿಸಲು ರೈತರಿಗೆ ೨ ವರ್ಷಗಳ ಕಾಲಾವಕಾಶ ನೀಡುವುದಾಗಿ ಕಂದಾಯ ಸಚಿವರು ಭರವಸೆ ನೀಡಿದ್ದ ನಿರ್ಧಾರವನ್ನು ಜಾರಿಗೊಳಿಸಲು ಆದೇಶಿಸಬೇಕು. ಈ ಭಾಗದಲ್ಲಿ ಪರಿಭಾವಿತ ಅರಣ್ಯಕ್ಕೆ ಸಂಬAಧಿಸಿದAತೆ ಜನವಸತಿ ಪ್ರದೇಶಗಳಲ್ಲಿ ಇರುವ ಸಮಸ್ಯೆಗಳನ್ನು ಅರಣ್ಯ ಇಲಾಖೆ, ಕಂದಾಯ ಇಲಾಖೆ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಿ ಸಮಸ್ಯೆಗಳನ್ನು ಇತ್ಯರ್ಥಪಡಿಸಬೇಕು ಎಂದು ಒತ್ತಾಯಿಸಿದರು.
ಕಳೆದ ಬಾರಿಯ ರಾಜ್ಯ ಅಧಿವೇಶನದಲ್ಲಿ ಕಂದಾಯ ಸಚಿವರು ಸುಮಾರು ೬ ಲಕ್ಷ ಹೆಕ್ಟೇರ್ ಪ್ರದೇಶವನ್ನು ಡೀಮ್ಡ್ ವ್ಯಾಪ್ತಿಯಿಂದ ಹಿಂದೆ ಪಡೆಯಲು ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸುವುದಾಗಿ ಭರವಸೆ ನೀಡಿದ್ದರು. ಆದರೆ ವಿಚಾರ ಹಲವು ಬಾರಿ ಚರ್ಚೆಗೆ ಬಂದರೂ ಯಾವುದೇ ನಿರ್ಣಯ ಕೈಗೊಂಡಿಲ್ಲ, ರಾಜ್ಯ ಸರ್ಕಾರದ ನಿರ್ಣಯವನ್ನು ಸುಪ್ರಿಂಕೋರ್ಟ್ಗೆ ಸಲ್ಲಿಸದೇ ಚರ್ಚೆಗೆ ಮಾತ್ರ ಸೀಮಿತಗೊಳಿಸಲಾಗಿದೆ ಎಂದು ಅಸಮಾಧಾನ ಹೊರಹಾಕಿದರು.
ಕಸ್ತೂರಿ ರಂಗನ್ ವರದಿ ವಿಚಾರವಾಗಿ ರಾಜ್ಯದ ನಿಲುವಿನ ಬಗ್ಗೆ ಸುಪ್ರಿಂ ಹಸಿರು ನ್ಯಾಯ ಪೀಠಕ್ಕೆ ಪ್ರಮಾಣ ಪತ್ರ ಸಲ್ಲಿಸಲು ಒತ್ತಡ ತಂದಾಗ ರಾಜ್ಯಸರ್ಕಾರ ಅಫಿಡವಿಡ್ ಸಲ್ಲಿಸಲು ನಿರ್ಧಾರ ಕೈಗೊಂಡಿತ್ತು, ಆದರೆ ಯಾವುದೇ ಅಫಿಡವಿಡ್ ಸಲ್ಲಿಸದೇ ವಿಳಂಬ ನೀತಿ ಅನುಸರಿಸುತ್ತಿದೆ ಇದರಿಂದಾಗಿ ಮುಂದಿನ ದಿನಗಳಲ್ಲಿ ಮತ್ತೊಮ್ಮೆ ಗಂಡಾAತರ ಎದುರಿಸುವ ಸ್ಥಿತಿ ನಿರ್ಮಾಣವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ರೈತರಿಗೆ ದರಖಾಸ್ತು ಆಗಿರುವ ಜಮೀನುಗಳಿಗೆ ಪೋಡ್ ಮಾಡಲು ಅಧಿಕಾರಿಗಳು ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಇದರಿಂದಾಗಿ ರೈತರು ತಮ್ಮ ಭೂಮಿಯ ಹಕ್ಕು ಸಾಧಿಸಲು ಸಾಧ್ಯವಾಗುತ್ತಿಲ್ಲ, ಈ ಸಮಸ್ಯೆಯನ್ನು ಸರ್ಕಾರ ಕೂಡಲೇ ಬಗೆಹರಿಸಬೇಕು,
ಡೀಮ್ಡ್ ವ್ಯಾಪ್ತಿಯ ಜನವಸತಿ ಪ್ರದೇಶದಲ್ಲಿ ಶಾಲೆ. ಸ್ಮಶಾನ, ಗೋಮಾಳ ಜಾಗ, ರಸ್ತೆ ಒಳಗೊಂಡAತೆ ಜನವಸತಿ ಪ್ರದೇಶದಲ್ಲಿ ಅಭಿವೃದ್ಧಿಗೆ ಅಗತ್ಯವಿರುವ ಜಾಗವನ್ನು ಗುರುತಿಸಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಹೋರಾಟ ಸಮಿತಿ ಸಂಚಾಲಕರಾದ ಕೆ.ಕೆ. ರಘು, ಶಾಂತಕುಮಾರ್ ಇದ್ದರು.

























Discussion about this post