ಕನ್ನಡನಾಡಿ ಸುದ್ದಿ ಜಾಲ: ಚಿಕ್ಕಮಗಳೂರು ಹಾಗೂ ಕರಾವಳಿ ಭಾಗಕ್ಕೆ ಸಂಪರ್ಕ ಕಲ್ಪಿಸುವ ಚಾರ್ಮುಡಿ ಘಾಟ್ ತಿರುವಿನಲ್ಲಿ ಭಾರಿ ಗಾತ್ರದ ಹತ್ತು ಚಕ್ರದ ಲಾರಿ ಸಿಕ್ಕಿಹಾಕಿಕೊಂಡಿದ್ದು, ಒಂದು ಗಂಟೆಗೂ ಹೆಚ್ಚು ಕಾಲ ಪ್ರಯಾಣಿಕರು ಪರದಾಟ ನಡೆಸಿದ ಘಟನೆ ನಡೆದಿದೆ.
ಚಾರ್ಮುಡಿ ಘಾಟ್ ನ ಎರಡನೇ ತಿರುವಿನಲ್ಲಿ ಸದರಿ ಘಟನೆ ನಡೆದಿದೆ.
ಈಗಾಗಲೇ ಭಾರಿ ವಾಹನ ಗಳ ಓಡಾಟಕ್ಕೆ ನಿರ್ಬಂಧ ವಿಧಿಸಿದ್ದರೂ ಸಹ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಕಳ್ಳಾಟದಿಂದ ಓಡಾಡುವ ಇಂಥ ವಾಹನಗಳು ಪ್ರಯಾಣಿಕರಿಗೆ ಸಮಸ್ಯೆ ಉಂಟು ಮಾಡುತ್ತಿದೆ.
ಸಾರ್ವಜನಿಕರು ಇಂಥ ಸಮಸ್ಯೆಗಳಿಗೆ ಬೇಸರ ವ್ಯಕ್ತಪಡಿಸಿದ್ದಾರೆ.

























Discussion about this post