ಪಂಜಾಬ್: ಕಾಂಗ್ರೆಸ್ ಪಕ್ಷದ ವಿರುದ್ಧ ದಿಕ್ಕಿನಲ್ಲಿ ನಡೆಯುತ್ತಿರುವ ಅಮರಿಂದರ್ ನಡೆ ಇನ್ನೂ ನಿಗೂಢವಾಗಿದೆ.
ಪಂಜಾಬ್ ಸಿಎಂ ವಿರುದ್ಧ ಪಂಜಾಬ್ ಕಾಂಗ್ರೆಸ್ನ ಹಲವರು ಬಂಡೆದ್ದ ಪರಿಣಾಮ ಕ್ಯಾಪ್ಟನ್ ಅಮರಿಂದರ್ ಸಿಂಗ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ಆ ಬಳಿಕ ಅಮರಿಂದರ್ ನಡೆ ನಿಗೂಢವಾಗಿತ್ತು. ಅಷ್ಟೇ ಅಲ್ಲ ಕಾಂಗ್ರೆಸ್ ವಿರುದ್ಧ ಬಂಡೆದಿದ್ದಾರೆ.
ತಮ್ಮದೇ ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಲು ಅಮರಿಂದರ್ ಸಜ್ಜಾಗಿದ್ದಾರೆ. ಆದರೆ ಬಿಜೆಪಿ ಕಡೆ ಹೋಗುವುದಿಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.
ಅಮರಿಂದರ್ ಯಾವ ಪಕ್ಷ ಸೇರುತ್ತಾರೆ ಅನ್ನವುದು ಕೂಡ ಕುತೂಹಲ ಮೂಡಿಸಿದೆ. ಮಾಜಿ ಸಿಎಂ ಅಮರೀಂದರ್ ಸಿಂಗ್ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರನ್ನು ಭೇಟಿಯಾದ ಹಿನ್ನೆಲೆಯಲ್ಲಿ ಬಿಜೆಪಿ ಸೇರುವುದು ಪಕ್ಕಾ ಎನ್ನಲಾಗಿತ್ತು. ವೈಯಕ್ತಿಕ ಕೆಲಸದ ನಿಮಿತ್ತ ದೆಹಲಿಗೆ ಬಂದಿರುವುದಾಗಿ ಹೇಳಿದ್ದು ಈ ಬಗ್ಗೆ ಸ್ಪಷ್ಟನೆ ನೀಡಿ ಬಿಜೆಪಿಗೆ ಸೇರ್ಪಡೆಯಾಗುತ್ತಿಲ್ಲ ಎಂದಿದ್ದಾರೆ.
ಆದರೆ ಕಾಂಗ್ರೆಸ್ನಲ್ಲಿ ಆಗಿರುವ ಅವಮಾನವನ್ನು ಸಹಿಸಲಾಗದೆ ಕಾಂಗ್ರೆಸ್ಗೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಸಹ ಹೇಳಿದ್ದಾರೆ.
ಚುನಾವಣೆ ಸಮೀಪಿಸುತ್ತಿರುವಾಗಲೇ ಅಮರಿಂದರ್ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ ಬಗ್ಗೆ ಬೇಸರಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಒಂದು ಕಡೆ ಅಮರಿಂದರ್ ಕೇಸರಿ ಪಕ್ಷ ಸೇರುತ್ತಾರೆ ಅನ್ನುವ ಗುಮಾನಿ ಇದೆ. ಮತ್ತೊಂದು ಕಡೆಯಲ್ಲಿ ಆಪ್ ಕೂಡ ಅಮರಿಂದರ್ ಕಡೆಗೆ ದೃಷ್ಟಿ ನೆಟ್ಟಿದೆ ಎನ್ನಲಾಗಿದೆ.

























Discussion about this post