ಕನ್ನಡನಾಡಿ ಸುದ್ದಿಜಾಲ: ಟಾಲಿವುಡ್ನ ಸ್ಟಾರ್ ದಂಪತಿಗಳಾಗಿದ್ದ ನಾಗ ಚೈತನ್ಯ ಮತ್ತು ಸಮಂತಾ ಅಕ್ಕಿನೇನಿ ವಿಚ್ಛೇದನ ಪಡೆದುಕೊಂಡಿದ್ದು, ನಾಲ್ಕು ವರ್ಷದ ತಮ್ಮ ದಾಂಪತ್ಯಕ್ಕೆ ಅಂತ್ಯ ಹಾಡಿದ್ದಾರೆ.
ಸೆಲೆಬ್ರೆಟಿ ಕಪಲ್ಗಳಾದ ನಾಗ ಚೈತನ್ಯ ಮತ್ತು ಸಮಂತಾ ಅವರು ವೈಯಕ್ತಿಕ ಜೀವನದ ವಿಷಯವಾಗಿ ಸುದ್ದಿಯಾಗಿದ್ದರು. ಅವರು ನಾಗ ಚೈತನ್ಯರಿಂದ ವಿಚ್ಛೇದನ ಪಡೆಯಲು ಮುಂದಾಗಿದ್ದಾರೆ ಎಂದು ಹಲವು ವರದಿಗಳು ಹೇಳಿತ್ತು. ಆದಾಗ್ಯೂ, ಸಮಂತಾ ಮತ್ತು ನಾಗ ಇಬ್ಬರೂ ಸುದ್ದಿಯ ಬಗ್ಗೆ ಇದುವರೆಗೆ ಏನನ್ನೂ ಮಾತನಾಡಿರಲಿಲ್ಲ.
ಕುಟುಂಬದ ಯಾರೊಬ್ಬರೂ ಅಧಿಕೃತ ಹೇಳಿಕೆ ನೀಡಿರಲಿಲ್ಲ. ಆದರೆ ಇಂದು (ಅ.2) ನಾಗ ಚೈತನ್ಯ ಮತ್ತು ಸಮಂತಾ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳ ಮೂಲಕ ವಿಚ್ಛೇದನದ ಸುದ್ದಿಯನ್ನು ಬಹಿರಂಗ ಪಡಿಸಿದ್ದಾರೆ.
ಇಲ್ಲಿಯವರೆಗೂ ದಶಕಗಳ ಸ್ನೇಹ ಕಾಪಾಡಿಕೊಂಡು ಬಂದಿದ್ದು ಇನ್ನು ಮುಂದೆಯೂ ವಿಶೇಷ ಸಂಬಂಧ ಕಾಯ್ದುಕೊಂಡು ಹೋಗುವುದಾಗಿಯೂ, ಈ ಕಷ್ಟಕಾಲದಲ್ಲಿ ಇಬ್ಬರ ವೈಯಕ್ತಿಕ ಜೀವನದ ನಿರ್ಧಾರಕ್ಕೆ ಸಹಕಾರ ನೀಡಬೇಕೆಂದು ಸಮಾಂತ ಇನ್ಸ್ಟಾ ದಲ್ಲಿ ಪೋಸ್ಟ್ ಮಾಡಿದ್ದಾರೆ.
Discussion about this post