ನವದೆಹಲಿ : ಜನಪ್ರಿಯ ಜಾಲತಾಣಗಳಾದ ಫೇಸ್ ಬುಕ್, ವಾಟ್ಸಾಪ್ ಸೇರಿದಂತೆ ಹಲವು ಜಾಲತಾಣಗಳ ಸರ್ವರ್ ಡೌನ್ ಆಗಿ ಸೇವೆಯಲ್ಲಿ ಅಡಚಣೆಯಾಗಿ ಬಳಕೆದಾರರು ಗಂಟೆಗಟ್ಟಲೆ ತೊಂದರೆ ಅನುಭವಿಸಿದ್ದಾರೆ. 6 ಗಂಟೆಯ ಬಳಿಕ ಸಾಮಾಜಿಕ ಜಾಲತಾಣಗಳು ಮತ್ತೆ ಸೇವೆ ಆರಂಭಿಸಿವೆ. ಈ ನಡುವಲ್ಲೇ ಫೇಸ್ಬುಕ್ ಗ್ರಾಹಕರಲ್ಲಿ ಕ್ಷಮೆ ಕೋರಿದೆ.
ಕಳೆದ ರಾತ್ರಿ 9 -10 ಗಂಟೆ ಸುಮಾರಿಗೆ ಈ ಅಡಚಣೆ ಉಂಟಾಗಿದ್ದು, ಬಳಕೆದಾರರು ತಮಗೆ ಆದ ತೊಂದರೆಯಾಗಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಫೇಸ್ ಬುಕ್, ವಾಟ್ಸಾಪ್, ಇನ್ ಸ್ಟಾಗ್ರಾಂ ಸೇರಿದಂತೆ ಹಲವು ಜಾಲತಾಣಗಳ ಸೇವೆಯಲ್ಲಿ ವ್ಯತ್ಯಯವಾಗಿದೆ. ಹೊಸ ಸಂದೇಶಗಳನ್ನು ಕಳುಹಿಸಲು ಮತ್ತು ಸ್ವೀಕರಿಸಲು ಸಾಧ್ಯವಾಗಿಲ್ಲ.
ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್, ವಾಟ್ಸಾಪ್, ಇನ್ಸ್ಟಾಗ್ರಾಂ, ಮೆಸೆಂಜರ್ ಸೇವೆ ನಿನ್ನೆ ರಾತ್ರಿ ವ್ಯತ್ಯಯವಾಗಿತ್ತು. ಜಾಗತಿಕವಾಗಿ ಕೋಟ್ಯಾಂತರ ಗ್ರಾಹಕರು ಸೇವೆ ಸಿಗದೆ ಪರದಾಡಿದ್ದರು. ನಿನ್ನೆ ರಾತ್ರಿ 9 ಗಂಟೆಯ ಸುಮಾರಿಗೆ ವಾಟ್ಸಾಪ್, ಫೇಸ್ಬುಕ್, ಇನ್ಸ್ಟಾಗ್ರಾಂ ಹಾಗೂ ಮೆಸೇಂಜರ್ ತಮ್ಮ ಸೇವೆಯನ್ನು ಸ್ಥಗಿತಗೊಳಿಸಿದ್ದವು.
ಗ್ರಾಹಕರು ತಮ್ಮದೇ ಇಂಟರ್ನೆಟ್ ಸಮಸ್ಯೆ ಆಗಿದೆ ಅಂತಾನೇ ಭಾವಿಸಿಕೊಂಡಿದ್ದರು. ಫೇಸ್ಬುಕ್ ಹೊಸ ಪೇಜ್ ಲೋಡ್ ಆಗದೇ ಇದ್ರೆ, ವಾಟ್ಸಾಪ್ ಯಾವುದೇ ಮೆಸೇಜ್ ಸೆಂಡ್ ಹಾಗೂ ರಿಸೀವ್ ಮಾಡುವುದನ್ನೇ ನಿಲ್ಲಿಸಿ ಬಿಟ್ಟಿತ್ತು. ಇನ್ನು ಮಸೇಂಜರ್ ಹಾಗೂ ಇನ್ಸ್ಟಾ ಗ್ರಾಂ ಕೂಡ ಬಳಕೆದಾರರಿಗೆ ಲಭ್ಯವಾಗುತ್ತಿರಲಿಲ್ಲ.
ಫೇಸ್ಬುಕ್ ಟ್ವೀಟರ್ ಮೂಲಕ ತಾಂತ್ರಿಕ ದೋಷವಾಗಿರುವುದನ್ನು ಖಚಿತ ಪಡಿಸಿದೆ. ಮಾತ್ರವಲ್ಲ ತನ್ನ ಗ್ರಾಹಕರಿಗೆ ಸೇವೆಯಲ್ಲಿ ವ್ಯತ್ಯಯವಾಗಿರುವುದಕ್ಕೆ ಕ್ಷಮೆಯಾಚನೆ ಮಾಡಿದೆ. ಆದರೆ ಫೇಸ್ ಬುಕ್, ವಾಟ್ಸಪ್ ಮತ್ತು ಇನ್ ಸ್ಟಾಗ್ರಾಮ್ ಕನಿಷ್ಠ 6 ಗಂಟೆಗಳ ಸ್ಥಗಿತದ ನಂತರ ಜಾಗತಿಕ ಇಂಟರ್ನೆಟ್ ಗೆ ಭಾಗಶಃ ಮರುಸಂಪರ್ಕಹೊಂದಿವೆ.
ಫೇಸ್ ಬುಕ್ ಮಾಲೀಕತ್ವದ ಮೂರು ಪ್ಲಾಟ್ ಫಾರ್ಮ್ ಗಳು ವಿಶ್ವದ ಹಲವು ರಾಷ್ಟ್ರಗಳಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿತ್ತು ಎಂದು ಬಳಕೆದಾರರು ಟ್ವೀಟರ್ ಮೂಲಕ ಸಮಸ್ಯೆ ಯನ್ನು ತಿಳಿಸಿದ್ದಾರೆ. ಸುಮಾರು ೪೦೦ ಮಿಲಿಯನ್ ಜನರು ಭಾರತದಲ್ಲಿ ಈ ಸಾಮಾಜಿಕ ಜಾಲತಾಣಗಳನ್ನು ಬಳಸುತ್ತಿದ್ದಾರೆ.
ಫೇಸ್ ಬುಕ್ ಸಂವಹನ ಕಾರ್ಯನಿರ್ವಾಹಕ ಆಂಡಿ ಸ್ಟೋನ್ ಸ್ವತಃ ಟ್ವಿಟರ್ ನಲ್ಲಿ ಈ ಸಂದೇಶವನ್ನು ಭಾರತ ಸಮಯ ರಾತ್ರಿ 9.37 ಕ್ಕೆ ಪೋಸ್ಟ್ ಮಾಡಿದ್ದಾರೆ. ಕೆಲವರು ನಮ್ಮ ಅಪ್ಲಿಕೇಶನ್ ಗಳು ಮತ್ತು ಉತ್ಪನ್ನಗಳನ್ನು ಪ್ರವೇಶಿಸಲು ತೊಂದರೆ ಅನುಭವಿಸುತ್ತಿದ್ದಾರೆ ಎಂದು ನಮಗೆ ತಿಳಿದಿದೆ. ನಾವು ಸಾಧ್ಯವಾದಷ್ಟು ಬೇಗ ವಿಷಯಗಳನ್ನು ಸಾಮಾನ್ಯ ಸ್ಥಿತಿಗೆ ತರಲು ಕೆಲಸ ಮಾಡುತ್ತಿದ್ದೇವೆ, ಮತ್ತು ಯಾವುದೇ ಅನಾನುಕೂಲತೆಗಾಗಿ ನಾವು ಕ್ಷಮೆಯಾಚಿಸುತ್ತೇವೆ ಎಂದಿದ್ದಾರೆ

























Discussion about this post