ಮಂಗಳೂರು: ಮಂಗಳೂರು ಬಳಿಯ ಮರೋಳಿ ಗ್ರಾಮದಲ್ಲಿ ಚಿರತೆಯೊಂದು ಕಂಡು ಬಂದಿದೆ ಎನ್ನಲಾಗಿದ್ದು, ಈ ಬಗ್ಗೆ ಸ್ಥಳೀಯರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಸಂಜೆ ವೇಳೆ ಮರೋಳಿಯಲ್ಲಿ ಮಕ್ಕಳು ಆಟ ಆಡುತ್ತಿದ್ದಾಗ ಚಿರತೆಯನ್ನು ಹೋಲುವ ಪ್ರಾಣಿಯೊಂದನ್ನು ದೂರದಿಂದ ನೋಡಿದ್ದಾರೆ. ಆ ವೇಳೆ ಕತ್ತಲಾಗುತ್ತ ಬಂದಿದ್ದರಿಂದ ಅಸ್ಪಷ್ಟವಾಗಿ ಗೋಚರವಾಗಿತ್ತು. ಮೊಬೈಲ್ ಫೋನಿನಲ್ಲಿ ಜನರು ಫೋಟೋ ತೆಗೆದಿದ್ದು, ಫೋಟೋದಲ್ಲಿ ಕೂಡಾ ಸರಿಯಾಗಿ ಕಾಣಿಸುತ್ತಿಲ್ಲ.
ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸೋಮವಾರ ಬೆಳಗ್ಗೆ ಪುನಃ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ತೆರಳಿದ್ದು ಪರಿಶೀಲನೆ ನಡೆಸುತಿದ್ದಾರೆ. ಅದು ಚಿರತೆಯೇ ಇರಬಹುದು ಎಂದು ಮಂಗಳೂರು ವಲಯ ಅರಣ್ಯ ಅಧಿಕಾರಿ ಪ್ರಶಾಂತ್ ಪೈ ಅವರು ಅಭಿಪ್ರಾಯ.
ಕಾಡು ಪ್ರಾಣಿಗಳು ಆಹಾರಕ್ಕಾಗಿ ಕಾಡಿನ ಬದಿಯ ಊರುಗಳಲ್ಲಿ ಕಾಣಿಸಿಕೊಳ್ಳುವ ಸಂಗತಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಹ ಕಂಡು ಬಂದಿದೆ. ಈ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸಿ ಅರಣ್ಯ ಇಲಾಖೆಯ ಜೊತೆಗೆ ಸಹಕರಿಸಿದರೆ ಅಪಾಯ ತಪ್ಪಿಸುವ ಸಾಧ್ಯತೆ ಹೆಚ್ಚಿದೆ.

























Discussion about this post