ನವದೆಹಲಿ: ಕೇಂದ್ರ ಸರ್ಕಾರವು ಹಳೆಯ ವಾಹನ ಹೊಂದಿರುವವರಿಗೆ ಶಾಕಿಂಗ್ ನ್ಯೂಸ್ ಕೊಟ್ಟಿದ್ದು, ೧೫ ವರ್ಷ ಹಳೆಯ ವಾಹನ ಗುಜರಿಗೆ ಹಾಕುವ ನೀತಿ ಇರುವುದರಿಂದ ಹಳೆ ವಾಹನಗಾಳ ನೋಂದಣಿ ನವೀಕರಣ ಶುಲ್ಕ ಬರೊಬ್ಬರಿ ೮ ಪಟ್ಟು ಏರಿಸಿಬಿಟ್ಟಿದೆ.
ಕೇಂದ್ರ ರಸ್ತೆ ಮತ್ತು ಹೆಚ್ಚಾರಿ ಸಚಿವಾಲಯ ಈ ಕುರಿತು ಅಧಿಸೂಚನೆ ಹೊರಡಿಸಿದ್ದು, ೧೫ ವರ್ಷ ಹಳೆಯ ವಾಹನ ನೋಂದಣಿ ನವೀಕರಣಕ್ಕೆ ಕಟ್ಟುವ ಶುಲ್ಕ ಈಗಿರುವ ರೂ. ೬೦೦ ರಿಂದ ೫೦೦೦ ರೂ. ಏರಿಕೆ ಆಗಲಿದೆ.
ಸದರಿ ನಿಯಮವು ೨೦೨೨ರ ಏಪ್ರಿಲ್ ನಿಂದ ಜಾರಿಗೆ ಬರಲಿದೆ. ದ್ವಿಚಕ್ರ ವಾಹನಗಳ ನೋಂದಣಿ ನವೀಕರಣ ದರ ರೂ. ೩೦೦ರಿಂದ ರೂ. ೧೦೦೦ ವರೆಗೆ ಏರಿಕೆಯಾಗಲಿದೆ. ೧೫ ವರ್ಷ ಮೇಲ್ಪಟ್ಟ ಬಸ್, ಟ್ರಕ್ ಗಳಿಗೆ ಫಿಟ್ನೆಸ್ ಪ್ರಮಾಣಪತ್ರ ನವೀಕರಣ ಶುಲ್ಕ ರೂ. ೧,೫೦೦ ನಿಂದ ೧೨,೫೦೦ ವರೆಗೆ ಏರಿಕೆಯಾಗಲಿದೆ.
೧೫ ವರ್ಷ ಹಳೆಯ ವಾಹನಗಳ ಬಳಕೆ ಮುಂದುವರೆಸಿದರೆ ೫ ವರ್ಷಗಳವರೆಗೆ ಒಮ್ಮೆ ನೋಂದಣಿ ನವೀಕರಿಸತಕ್ಕದ್ದು.
ವಾಣಿಜ್ಯ ವಾಹನಗಳಿಗೆ ೮ ವರ್ಷಗಳಿಗೆ ಫಿಟ್ನೆಸ್ ಪ್ರಮಾಣ ಪತ್ರ ನವೀಕರಿಸಲು ಸೂಚಿಸಲಾಗಿದೆ.
ಖಾಸಗಿ ವಾಹನಗಳ ನೊಂದಣಿ ನವೀಕರಣದಲ್ಲಿ ವಿಳಂಬವು ಪ್ರತಿ ತಿಂಗಳೂ ೩೦೦ ರೂ. ಹಾಗೂ ವಾಣಿಜ್ಯ ವಾಹನಗಳಿಗೆ ರೂ. ೫೦೦ ರೂ. ದಂಡಕ್ಕೆ ಆಹ್ವಾನ ನೀಡಲಿದೆ.
ವಾಣಿಜ್ಯ ವಾಹನಗಳ ಫಿಟ್ನೆಸ್ ಪ್ರಮಾಣಪತ್ರ ನವೀಕರಣ ವಿಳಂಬವಾದರೆ ಪ್ರತಿ ದಿನಕ್ಕೆ ರೂ. ೫೦ ದಂಡ ಕಟ್ಟತಕ್ಕದ್ದು ಎಂದು ಕೇಂದ್ರ ಹೆದ್ದಾರಿ ಸಚಿವಾಲಯ ನಿಯಮಾವಳಿ ರೂಪಿಸಿದೆ.

























Discussion about this post