ದಕ್ಷಿಣ ಭಾರತದ ತಾರಾ ಜೋಡಿ ಸಮಂತಾ ಹಾಗೂ ನಾಗಚೈತನ್ಯ ವಿವಾಹ ವಿಚ್ಛೇದನಕ್ಕೆ ಸಂಬಂಧಿಸಿದ ವದಂತಿಗಳಿಗೆ ಇನ್ನೂ ತೆರೆ ಬಿದ್ದಿಲ್ಲ. ವಿಚ್ಛೇದನಕ್ಕೆ ಏನೇನು ಕಾರಣಗಳಿರಬಹುದು ಎಂಬ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ, ಸುದ್ದಿ ತಾಣಗಳಲ್ಲಿ ಸದಾ ಒಂದಿಲ್ಲೊಂದು ವಿಚಾರಗಳು ಚರ್ಚೆಯಾಗುತ್ತಿವೆ. ಇಂಥ ಪರಿಸ್ಥಿತಿಯಲ್ಲಿ ತಮ್ಮ ವಿರುದ್ಧ ಕೇಳಿಬಂದಿರುವ ಆರೋಪಗಳ ಬಗ್ಗೆ ನೊಂದಿರುವ ಸಮಂತಾ ರುತ್ ಪ್ರಭು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಭಾವುಕ ಸಂದೇಶ ಪ್ರಕಟಿಸಿದ್ದಾರೆ.
ಈ ಸಂದೇಶದ ಮೂಲಕ ತಮ್ಮ ವಿರುದ್ಧ ಕೇಳಿಬಂದಿರುವ ಸುಳ್ಳು ಆರೋಪಗಳಿಗೆ ಮತ್ತು ವದಂತಿಗಳಿಗೆ ತೆರೆ ಎಳೆಯಲು ಪ್ರಯತ್ನಿಸಿದ್ದಾರೆ. ಅಲ್ಲದೇ, ಆರೋಪಗಳೆಲ್ಲವೂ ಸುಳ್ಳು ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.
ಸಮಂತಾ ಸಂದೇಶದಲ್ಲೇನಿದೆ?
‘ಇಂಥ ಸನ್ನಿವೇಶದಲ್ಲಿ ನನ್ನ ವಿರುದ್ಧ ಅನೇಕ ಆರೋಪಗಳು ಕೇಳಿಬಂದಿವೆ. ಈ ವಿಷಯದಲ್ಲಿ ನನ್ನ ಬಗ್ಗೆ ಕಾಳಜಿ ವಹಿಸಿದ, ನನ್ನನ್ನು ಸಮರ್ಥಿಸಿದ, ಪ್ರೀತಿ ತೋರಿದ ನಿಮಗೆಲ್ಲರಿಗೂ ನನ್ನ ಹೃದಯಾಂತರಾಳದ ಧನ್ಯವಾದಗಳು. ನನಗೆ ಬೇರೆ ಸಂಬಂಧವಿತ್ತು, ಮಕ್ಕಳಾಗುವುದು ಬೇಕಿರಲಿಲ್ಲ, ಅವಕಾಶವಾದಿ, ಗರ್ಭಪಾತ ಮಾಡಿಸಿಕೊಂಡಿದ್ದೆ ಎಂದೆಲ್ಲಾ ನನ್ನ ವಿರುದ್ಧ ಆರೋಪ ಮಾಡಿದ್ದರು.
ವಿಚ್ಛೇದನದ ನೋವೇ ದೀರ್ಘವಾದದ್ದು. ಅದರಿಂದ ಹೊರಬರಲು ನನಗೆ ಸಮಯವಕಾಶ ನೀಡಿ. ಇಂಥ ಆರೋಪಗಳನ್ನು ಮಾಡುವ ಮೂಲಕ ನನ್ನ ಮನಸ್ಸನ್ನು ಘಾಸಿಗೊಳಿಸಲು ಯತ್ನಿಸಲಾಗುತ್ತಿದೆ. ಆದರೆ ಇವುಗಳಿಗೆಲ್ಲ ನಾನು ಅವಕಾಶ ಕೊಡುವುದಿಲ್ಲ’ ಎಂದು ಇನ್‌ಸ್ಟಾಗ್ರಾಂ ಸಂದೇಶದಲ್ಲಿ ಸಮಂತಾ ಉಲ್ಲೇಖಿಸಿದ್ದಾರೆ.

ತೆಲುಗು ನಟ ನಾಗಚೈತನ್ಯ ಜೊತೆ 2017ರಲ್ಲಿ ಸಮಂತಾ ವಿವಾಹವಾಗಿದ್ದರು. ಹಲವು ವರ್ಷಗಳ ಕಾಲ ಪರಸ್ಪರ ಪ್ರೀತಿಸಿದ್ದ ಈ ಜೋಡಿ ಬಳಿಕ ವಿವಾಹ ಬಂಧನಕ್ಕೆ ಒಳಗಾಗಿತ್ತು. ಕಳೆದ ಕೆಲವು ವಾರಗಳಿಂದ ಇವರ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ. ಇಬ್ಬರೂ ವಿಚ್ಛೇದನದ ತೀರ್ಮಾನ ಕೈಗೊಂಡಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಇದರ ಬೆನ್ನಲ್ಲೇ ಸಮಂತಾ, ಇನ್‌ಸ್ಟಾಗ್ರಾಂನಲ್ಲಿ ಹೆಸರು ಬದಲಾಯಿಸಿಕೊಂಡಿದ್ದು ಚರ್ಚೆಗೆ ಗ್ರಾಸವಾಗಿತ್ತು. ಇದಾದ ಕೆಲವೇ ದಿನಗಳಲ್ಲಿ ಇಬ್ಬರೂ ವಿವಾಹ ಬಂಧನದಿಂದ ಬೇರ್ಪಡುತ್ತಿರುವುದಾಗಿ ಅಧಿಕೃತವಾಗಿ ಘೋಷಿಸಿಕೊಂಡಿದ್ದರು.
Samantha Ruth Prabhu Instagram post on allegations against her says they say I had abortions and affairs
ಇದನ್ನೂ ಓದಿ: 200 ಕೋಟಿ ಜೀವನಾಂಶಕ್ಕೆ ಸಮಂತಾ ತಿರಸ್ಕಾರ
ಇದನ್ನೂ ಓದಿ: ನಾಗ ಚೈತನ್ಯ – ಸಮಂತಾ ಅಕ್ಕಿನೇನಿ ದಾಂಪತ್ಯ ವಿಚ್ಛೇದನದಲ್ಲಿ ಕೊನೆ
























Discussion about this post