ಚಿಕ್ಕಮಗಳೂರು: ಜಮ್ಮು ಕಾಶ್ಮೀರದ ಗಡಿಯಲ್ಲಿ ಹಿಂದೂಗಳ ಹತ್ಯೆ ಖಂಡಿಸಿ ವಿಶ್ವ ಹಿಂದೂ ಪರಿಷತ್ ಭಜರಂಗದಳ ನಗರದ ಹನುಮಂತಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ವಿಶ್ವ ಹಿಂದೂ ಪರಿ?ತ್ ಜಿಲ್ಲಾ ಸಹ ಕಾರ್ಯದರ್ಶಿ ರಂಗನಾಥ್ ಮಾತನಾಡಿ ಕಾಶ್ಮೀರದ ಗಡಿಯಲ್ಲಿ ಹಿಂದುಗಳನ್ನ ಗುರಿಯಾಗಿಸಿಕೊಂಡು ಹತ್ಯೆ ಮಾಡಲಾಗಿದೆ. ಇದೆಲ್ಲವನ್ನೂ ಗಡಿಯಾಚೆಗಿನ ಪಾಕಿಸ್ತಾನ ಪ್ರೇರಿತ ಭಯೋತ್ಪಾದಕರು ಸ್ಥಳೀಯ ಮುಸ್ಲಿಮರ ಸಹಯೋಗದೊಂದಿಗೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಜಮ್ಮು ಮತ್ತು ಕಾಶ್ಮೀರದಿಂದ ಆರ್ಟಿಕಲ್ ೩೭೦ ಮತ್ತು ೩೫ ಎ ಅನ್ನು ತೆಗೆದುಹಾಕಿದ ನಂತರ.ಮತ್ತು ಈಗ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಳ್ವಿಕೆಯಿಂದಾಗಿ ಭಯೋತ್ಪಾದಕ ಘಟನೆಗಳಲ್ಲಿ ಹಠಾತ್ ಹೆಚ್ಚಳವಾಗಿದೆ ಇದು ಇಸ್ಲಾಮಿಕ್ ಭಯೋತ್ಪದಕರು ಮಾಡುತ್ತಿರುವ ಬೆದರಿಕೆ ತಂತ್ರವಾಗಿದೆ.
ಹಿಂದೂ ದೇವಸ್ಥಾನದ ಒಳಗೆ ನುಗ್ಗಿದ ಭಯೋತ್ಪದಕರು ಅಲ್ಲಿನ ಪೂಜಾರಿಯನ್ನ ಕೊಂದು ಹಾಕಿದ್ದಾರೆ. ಪ್ರಾಂಶುಪಾಲ ದೀಪಕ್ ಚಂದ್ ಕಾಶ್ಮೀರಿ ಪಂಡಿತ್ ಮತ್ತು ಶಿಕ್ಷಕಿ ಸತಿಂಧರ್ ಕೌರ್ ಪಂಜಾಬಿ ಎಂದು ನೋಡಿ ಅವರನ್ನ ಅಮಾನು?ವಾಗಿ ಗುಂಡಿಟ್ಟು ಕೊಂದಿದ್ದಾರೆ. ಪಾಕಿಸ್ತಾನ ಮತ್ತು ಮುಸ್ಲಿಂ ಭಯೋತ್ಪಾದನೆಯಿಂದಾಗಿ ಇಡೀ ಕಾಶ್ಮೀರ ತತ್ತರಿಸಿಹೋಗಿದೆ ಭಯೋತ್ಪದಕರು ತಮ್ಮ ಅಟ್ಟಹಾಸ ಮೇರಿಯುತ್ತ ಹಿಂದುಗಳನ್ನ ಪಲಾಯನ ಮಾಡುವಂತೆ ಬೆದರಿಸುವ ?ಡ್ಯಂತ್ರವನ್ನ ಮಾಡುತ್ತಿದ್ದಾರೆ ಇದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಭಜರಂಗದಳವು ಕಾಶ್ಮೀರದ ಹಿಂದೂ ಸಮಾಜದೊಂದಿಗೆ ಪೂರ್ಣ ಬಲದಿಂದ ನಿಂತಿದೆ. ಭಯೋತ್ಪದನೆ ವಿರುದ್ಧ ಜನಜಾಗೃತಿ ಅಗತ್ಯ ಇದ್ದು ಹಿಂದೂ ಜಾತಿ ಮತ ಪಂಥ ಬಿಟ್ಟು ಸಂಘಟಿತರಾಗಬೇಕಿದೆ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿ?ತ್ ಜಿಲ್ಲಾಧ್ಯಕ್ಷ ಶ್ರೀಕಾಂತ ಪೈ, ಉಪಾಧ್ಯಕ್ಷರು ಯೋಗೀಶ್ ರಾಜ್ ಅರಸ್. ಜಿಲ್ಲಾ ಸಹ ಕಾರ್ಯದರ್ಶಿ ರಂಗನಾಥ್, ಜಿಲ್ಲಾ ಸಹ ಸಂಯೋಜಕ ಅಮಿತ್ ಗೌಡ, ಬಜರಂಗದಳ ಜಿಲ್ಲಾ ವಿದ್ಯಾರ್ಥಿ ಪ್ರಮುಖ್ ಗುರು, ದೀಪಕ್, ನಗರ ಅಧ್ಯಕ್ಷ ಶಿವಣ್ಣ, ದೇವು, ನಗರ ಸಂಯೋಜಕ ಶ್ಯಾಮ್ ಗೌಡ, ಮಂಜು, ಸುನಿಲ್ ಆಚಾರ್, ಪ್ರಸಾದ್ ಕೋಟೆ ಸೇರಿದಂತೆ ಮತ್ತಿತರರು ಇದ್ದರು.

























Discussion about this post