ಚಿಕ್ಕಮಗಳೂರು: ಕೋವಿಡ್ಸೋಂಕಿಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದ 16 ಮಂದಿ ಗುಣ ಮುಖರಾಗಿದ್ದು, ಭಾನುವಾರ ಜಿಲ್ಲೆಯ 11 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.
ಚಿಕ್ಕಮಗಳೂರು ತಾಲ್ಲೂಕಿನ ೯ಮಂದಿ ಹಾಗೂ ಕೊಪ್ಪ ತಾಲ್ಲೂಕಿನ ಇಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದೆ. ೧೧ಮಂದಿಯನ್ನು ಹೋಮ್ ಐಸೋಲೇಶನ್ಗೆ ಒಳಪಡಿಸಲಾಗಿದೆ. ಕೋವಿಡ್ ಸೋಂಕಿನಿಂದ ಇಂದು ಯಾವುದೇ ವ್ಯಕ್ತಿ ಮೃತಪಟ್ಟಿಲ್ಲವೆಂದು ಜಿಲ್ಲಾ ಆರೋ ಗ್ಯ ಇಲಾಖೆ ದೃಢಪಡಿಸಿದೆ.
ಜಿಲ್ಲೆಯಲ್ಲಿ ಇದುವರೆಗೂ ೫೧,೦೨೦ಮಂದಿಯಲ್ಲಿ ಸೋಂಕು ಕಾಣಸಿಕೊಂಡಿದ್ದು, ೫೦,೩೦೩ ಮಂದಿ ಗುಣಮುಖರಾಗಿದ್ದಾರೆ. ೩೦೬ಮಂದಿಯಲ್ಲಿ ಸೋಂಕು ಸಕ್ರೀಯವಾಗಿದ್ದು, ಇದುವ ರೆಗೂ ಚಿಕಿತ್ಸೆ ಫಲಕಾರಿಯಾಗದೆ ೩೯೫ಮಂದಿ ಮೃತಪಟ್ಟಿದ್ದಾರೆ.

























Discussion about this post