ಶೃಂಗೇರಿ: ನವರಾತ್ರಿಯ ಪ್ರಯುಕ್ತ ಸೋಮವಾರ ಅಶ್ವಯುಜ ಶುಕ್ಲ ಷಷ್ಠಿಯಂದು ಶೃಂಗೇರಿ ಶ್ರೀ ಶಾರದೆ ವೈಷ್ಣವೀಯಾಗಿಕಂಗೊಳಿಸಿದಳು.ಕೈಯಲ್ಲಿ ಶಂಖ,ಚಕ್ರ,ಗದೆ ಇತ್ಯಾದಿ ಆಯುಧಗಳನ್ನು ಧರಿಸಿ,ಗರುಡನನ್ನು ಆರೋಹಿಸಿ ಶ್ರೀ ಮಹಾವಿಷ್ಣುವಿನ ಶಕ್ತಿಯಾಗಿ ಭಕ್ತರನ್ನು ಅನುಗ್ರಹಿಸಿದಳು.
ಜಗದ್ಗುರು ಶ್ರೀಭಾರತೀತೀರ್ಥ ಮಹಾಸ್ವಾಮೀಜಿ ಹಾಗೂ ಶ್ರೀ ವಿಧುಶೇಖರಭಾರತೀ ಸ್ವಾಮೀಜಿ ಅವರು ಬೆಳಿಗ್ಗೆ ಶ್ರೀಮಠದ ಶ್ರೀ ತೋರಣಗಣಪತಿ,ಜನಾರ್ಧನಸ್ವಾಮಿ,ಶ್ರೀ ಶಂಕರಾಚಾರ್ಯ ದೇವಾಲಯಗಳನ್ನು ದರ್ಶಿಸಿದರು. ಬಳಿಕ ಜಗನ್ಮಾತೆ ಅವಾಸಸ್ಥಾನವೆಂದು ಶಾಸ್ತ್ರದಲ್ಲಿ ತಿಳಿಸಿರುವ ಶ್ರೀ ಚಕ್ರಕ್ಕೆ ನವಾವರಣಪೂಜೆ ಸಲ್ಲಿಸಲಾಯಿತು.
ಮಂದಾರ,ಪಾರಿಜಾತ ಪತ್ರೆಗಳು, ಸೇವಂತಿಗೆ,ಮಲ್ಲಿಗೆ ಇತ್ಯಾದಿ ಪುಷ್ಟಗಳಿಂದ ಅರ್ಚಿಸಿ, ನಾಮಾವಳಿಗಳನ್ನು ಪಠಿಸಿ ದೂಫ-ದೀಪಗಳನ್ನು ಬೆಳಗಿ,ನೈವೇದ್ಯವನ್ನು ಸಮರ್ಪಿಸಿ ಯತಿಗಳು ಶ್ರೀ ಶಾರದೆಗೆ ವಿಶೇಷಪೂಜೆ ಸಲ್ಲಿಸಿದರು.ಶ್ರೀಮಠದಲ್ಲಿ ನಾಲ್ಕು ವೇದಗಳ ಪಾರಾಯಣ,ವಾಲ್ಮೀಕಿ ರಾಮಾಯಣ,ಮಾಧವೀಯ ಶಂಕರ ದಿಗ್ವಿಜಯ,ದುರ್ಗಾಸಪ್ತಶತಿ ಪಾರಾಯಣಗಳು,ದುರ್ಗಾ ಜಪಗಳನ್ನು ಪುರೋಹಿತರು ನೆರವೇರಿಸಿದರು.ಸುವಾಸಿನೀ ಹಾಗೂ ಕುಮಾರೀ ಪೂಜೆ ನೆರವೇರಿತು.
ರಾತ್ರಿ ನಡೆದ ದರ್ಬಾರು ಕಾರ್ಯಕ್ರಮದಲ್ಲಿ ಕಿರಿಯಶ್ರೀ ಜಗದ್ಗುರು ಶ್ರೀ ವಿಧುಶೇಖರಭಾರತೀ ಅವರು ಭಾಗಿಯಾದರು. ವ್ಯಾಖ್ಯಾನ ಸಿಂಹಾಸನದಲ್ಲಿ ಇರಿಸಿದ ಉತ್ಸವ ಮೂರ್ತಿಯನ್ನು ಸ್ವರ್ಣರಥದಲ್ಲಿ ಇರಿಸಿ, ದೇವಾಲಯದಲ್ಲಿ ಮೂರು ಸುತ್ತಿನ ರಥೋತ್ಸವ ನಡೆಯಿತು.ಜಗನ್ಮಾತೆಗೆ ಮಹಾಮಂಗಳಾರತಿ ನೆರವೇರಿದ ಬಳಿಕ ವೇದಗಳ ಪಾರಾಯಣ,ಪಂಚಾಂಗ ಶ್ರವಣ ಇತ್ಯಾದಿ ಧಾರ್ಮಿಕ ಕಾರ್ಯಕ್ರಮ ನೆರವೇರಿತು.

























Discussion about this post