ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಆಯ್ದ ನಾಗರಿಕರನ್ನು ಗುರಿಯಾಗಿರಿಸಿಕೊಂಡು ಉಗ್ರರು ದಾಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ಶನಿವಾರ ಕಾರ್ಯಾಚರಣೆ ಬಿರುಸುಗೊಳಿಸಿವೆ. ಕಳೆದ ಗುರುವಾರ ಸಂಜೆ ಫೂಂಛ್-ರಾಜೌರಿ ಅರಣ್ಯದಲ್ಲಿ ನಡೆದಿದ್ದ ಶೋಧ ಕಾರ್ಯದ ವೇಳೆ ಇಬ್ಬರು ಯೋಧರು ಹುತಾತ್ಮರಾಗಿದ್ದರು. ಓರ್ವ ಕಿರಿಯ ಸೇನಾಧಿಕಾರಿ (ಜೆಸಿಒ) ಮತ್ತು ಸಿಪಾಯಿ ಕಣ್ಮರೆಯಾಗಿದ್ದಾರೆ. ಈ ಪೈಕಿ ಯೋಧ ಮರಣಹೊಂದಿದ್ದು, ಜೆಸಿಒ ಅವರನ್ನು ಹುಡುಕಲಾಗುತ್ತಿದೆ.
ಫೂಂಛ್ ಜಿಲ್ಲೆಯ ಮೆಂಧರ್ ಉಪವಿಭಾಗದಲ್ಲಿ ನರ್ ಖಾಸ್ ಅರಣ್ಯದಲ್ಲಿ ಉಗ್ರರ ಜತೆ ಭಾರಿ ಗುಂಡಿನ ಚಕಮಕಿ ನಡೆಯುತ್ತಿದೆ. ಇದೇ ಪ್ರದೇಶದಲ್ಲಿ ಕಳೆದ ಗುರುವಾರ ಓರ್ವ ಅಧಿಕಾರಿ ಮತ್ತು ಓರ್ವ ಸಿಪಾಯಿ ನಾಪತ್ತೆಯಾಗಿದ್ದರು. ಈಗ ಯೋಧನ ಶವ ಸಿಕ್ಕಿದೆ. ಆದರೆ ಜೆಸಿಒ ಸ್ಥಿತಿ ಏನಾಗಿದೆ ಎಂಬುದು ತಿಳಿದುಬಂದಿಲ್ಲ ಎಂದು ಸೇನೆ ಹೇಳಿಕೆಯಲ್ಲಿ ತಿಳಿಸಿದೆ.
ಶೋಪಿಯಾನ್ ಜಿಲ್ಲೆಯಲ್ಲಿ ಸೋಮವಾರ ರಾತ್ರಿ ನಡೆದ ಎನ್‌ಕೌಂಟರ್‌ನಲ್ಲಿ ಮೂವರು ಉಗ್ರರನ್ನು ಸದೆಬಡಿಯಲಾಗಿತ್ತು. ಹತನಾದ ಉಗ್ರನಲ್ಲಿ ಓರ್ವ ಕಳೆದ ವಾರ ನಾಗರಿಕರನ್ನು ಹತ್ಯೆ ಮಾಡಿದ್ದ.
ಹತರಾದ ಉಗ್ರರು ಲಷ್ಕರ್-ಎ-ತೊಯ್ಬಾ ಸಂಘಟನೆಯ ದಿ ರಿಸಿಸ್ಟೆನ್ಸ್ ಫ್ರಂಟ್‌ಗೆ ಸೇರಿದವರು. ಇವರಲ್ಲಿ ಗಂದೆರ್‌ಬಾಲ್ ಜಿಲ್ಲೆಯ ಮುಖ್ತರ್ ಶಾ ಎಂಬಾತನು ಕಳೆದ ವಾರ ಬಿಹಾರದ ಮೂಲದ ವೀರೇಂದ್ರ ಪಾಸ್ವಾನ್ ಎನ್ನುವವರನ್ನು ಹತ್ಯೆ ಮಾಡಿದ್ದ. ಸೋಮವಾರ ಬಂಡಿಪುರ್ ಜಿಲ್ಲೆಯ ಹಾಜಿನ್‌ನಲ್ಲಿ ಇಮ್ತಿಯಾಜ್ ಅಹ್ಮದ್ ದರ್ ಸಾವನ್ನಪ್ಪಿದ್ದು, ದರ್ ಟ್ಯಾಕ್ಸಿ ಚಾಲಕ ಮೊಹಮ್ಮದ್ ಶಫಿ ಲೋನ್‌ರನ್ನು ಇಮ್ತಿಯಾಜ್ ಹತ್ಯೆ ಮಾಡಿದ್ದ. ಅನಂತನಾಗ್ ವೆರಿನಾಗ್ ಖಗುಂಡ್‌ನಲ್ಲಿ ಇನ್ನೊಬ್ಬ ಉಗ್ರನನ್ನು ಹೊಡೆದುರುಳಿಸಲಾಗಿದೆ. ಮಂಗಳವಾರ ನಸುಕಿನಲ್ಲಿ ಶೋಪಿಯಾನ್‌ನಲ್ಲಿ ನಡೆದ ಕಾರ್ಯಚರಣೆಯಲ್ಲಿ ಲಷ್ಕರ್-ಎ-ತೊಯ್ಬಾದ ಕಮಾಂಡರ್ ಶಾಮ್ ಸೋಫಿ ಹತ್ಯೆ ಮಾಡಲಾಗಿತ್ತು. ಅಲ್ಪಸಂಖ್ಯಾತರನ್ನು ಗುರಿಯಾಗಿಟ್ಟುಕೊಂಡು ಭಾನುವಾರ ನಡೆದ ದಾಳಿ ಸಂಬಂಧ 48 ತಾಸಿನಲ್ಲಿ 700ಕ್ಕೂ ಹೆಚ್ಚು ಶಂಕಿತರನ್ನು ಬಂಧಿಸಲಾಗಿದೆ.
ಫೂಂಛ್ ಜಿಲ್ಲೆಯ ಸೂರನಕೋಟೆಯಲ್ಲಿ ಸೋಮವಾರ ನಡೆದ ಕಾರ್ಯಾಚರಣೆ ವೇಳೆ ಕಿರಿಯ ಅಧಿಕಾರಿ (ಜೆಸಿಒ) ಸೇರಿ ಐವರು ಯೋಧರು ಹುತ್ಮಾತರಾಗಿದ್ದರು.
Army Launched major combing operation In Jammu and Kashmir
ಇದನ್ನು ಓದಿ: ಜಮ್ಮು ಕಾಶ್ಮೀರದಲ್ಲಿ ಹೆಚ್ಚುತ್ತಿರುವ ಭಯೋತ್ಪಾದನೆ: ಹೆಚ್ಚಿದ ಆತಂಕ
ಇದನ್ನು ಓದಿ: ಉಗ್ರ ನಂಟಿನ ಶಂಕೆ: ಜಮ್ಮು–ಕಾಶ್ಮೀರದಲ್ಲಿ ಒಂದೇ ವಾರದಲ್ಲಿ 700 ಮಂದಿ ಪೊಲೀಸ್ ವಶಕ್ಕೆ
Discussion about this post