ಅಪಾರ್ಟ್ಮೆಂಟ್ನಲ್ಲಿ ನಡೆಯುವ ವಿದ್ಯಮಾನಗಳನ್ನು ಆಧರಿಸಿದ ಕನ್ನಡ ಚಿತ್ರ ಅಮೃತಾ ಅಪಾರ್ಟ್ಮೆಂಟ್ಸ್ ಬಿಡುಗಡೆಗೆ ಸಜ್ಜಾಗಿದೆ. ಸಿನಿಮಾದ ಝಲಕ್ ಕೊಡುವ ಟೀಸರ್ ಹಾಗೂ ಪೋಸ್ಟರ್ಗಳು ಯುಟ್ಯೂಬ್ ಮತ್ತು ಇತರ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡಿವೆ.
ಉತ್ತರ ಕರ್ನಾಟಕದ ಬನಹಟ್ಟಿ ಮೂಲದವರಾದ ಪ್ರೊ.ಬಿ.ಆರ್.ಪೊಲೀಸ್ ಪಾಟೀಲ ರಚನೆಯ ‘ನಾವು ಬಂದೇವಾ’ ಹಾಡು ಈ ಚಿತ್ರದ ಪ್ರಮುಖ ಆಕರ್ಷಣೆ. ಹಾಡಿನ ಬಗ್ಗೆ ಚಿತ್ರತಂಡ ಅಪಾರ ನಿರೀಕ್ಷೆ ಇಟ್ಟುಕೊಂಡಿದೆ. ಬದುಕು ಕಟ್ಟಿಕೊಳ್ಳಲು ಬೆಂಗಳೂರಿಗೆ ಬರುವ ವಲಸಿಗರ ಕುರಿತ ಈ ಹಾಡನ್ನು ರಾಜ್ಯ ಪ್ರಶಸ್ತಿ ವಿಜೇತ ಗಾಯಕ ತೇಜಸ್ವಿ ಹರಿದಾಸ ಹಾಡಿದ್ದಾರೆ. ಉತ್ತರ ಕರ್ನಾಟಕದ ಮಣ್ಣಿನ ಸೊಗಡು ಹೊತ್ತ ಈ ಹಾಡಿಗಾಗಿ ಹಲವು ಶಬ್ದಗಳನ್ನು ಕಷ್ಟಪಟ್ಟು ಅಭ್ಯಾಸ ಮಾಡಬೇಕಾಯಿತು ಎನ್ನುತ್ತಾರೆ ತೇಜಸ್ವಿ.
ಮೈಸೂರಿನ ಹುಡುಗ, ಉತ್ತರ ಭಾರತದ ಹುಡುಗಿ ಈ ಸಿನಿಮಾದ ಮುಖ್ಯ ಪಾತ್ರಗಳು. ಈ ಚಿತ್ರದ ಕಥೆ, ನಿರ್ದೇಶನ ಮತ್ತು ನಿರ್ಮಾಣ ಗುರುರಾಜ ಕುಲಕರ್ಣಿ ಅವರದು. ತಾರಕ್ ಪೊನ್ನಪ್ಪ, ಊರ್ವಶಿ ಗೋವರ್ಧನ್, ಮಾನಸ ಜೋಶಿ ಪ್ರಧಾನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಎಸ್.ಡಿ.ಅರವಿಂದ್ ಸಂಗೀತವಿದೆ. ಗುರುರಾಜ್ ಬಿ ಕುಲಕರ್ಣಿ ಈ ಮೊದಲು ಆಕ್ಸಿಡೆಂಟ್ ಮತ್ತು ಲಾಸ್ಟ್ ಬಸ್ ಹೆಸರಿನ ಸಿನಿಮಾಗಳನ್ನು ನಿರ್ಮಿಸಿದ್ದರು.
Kannada Movie Amruth Aparments Ready to Release
ಇದನ್ನೂ ಓದಿ: Jai Bhim Teaser: ಅಸ್ಪೃಶ್ಯತೆಯ ವಿರುದ್ಧ ಸಿಡಿದೆದ್ದ ವಕೀಲನ ಪಾತ್ರದಲ್ಲಿ ಸೂರ್ಯ
ಇದನ್ನೂ ಓದಿ: Viral: ನನಗೆ ಅಫೇರ್ ಇತ್ತು, ಅಬಾರ್ಶನ್ ಮಾಡಿಸಿದ್ದೆ ಎಂದೆಲ್ಲಾ ದೂರಿದ್ದರು: ಸಮಂತಾ ಭಾವುಕ ಪೋಸ್ಟ್
Discussion about this post