ನವದೆಹಲಿ: ಭಾರತದಲ್ಲಿ ಭಾನುವಾರ ಬೆಳಗ್ಗೆಗೆ ಕೊನೆಗೊಂಡ 24 ತಾಸಿನ ಅವಧಿಯಲ್ಲಿ 14,146 ಹೊಸ ಪ್ರಕರಣಗಳು ವರದಿಯಾಗಿದೆ. ಇದು ಕಳೆದ ಮಾರ್ಚ್ ನಂತರ ಅಂತ್ಯತ ಕಡಿಮೆ ದೈನಿಕ ಪ್ರಕರಣವಾಗಿದೆ. ಈ 24 ತಾಸಿನಲ್ಲಿ 144 ಸೋಂಕಿತರು ಮರಣಿಸಿದ್ದು, ಒಟ್ಟಾರೆ ಮೃತರ ಸಂಖ್ಯೆ 4,52,124ಕ್ಕೆ ಏರಿದೆ.
ಸಕ್ರಿಯ ಪ್ರಕರಣಗಳ ಸಂಖ್ಯೆ ಒಟ್ಟು ಕೇಸ್ನಲ್ಲಿ ಶೇ. 0.57ಕ್ಕೆ ಇಳಿಕೆಯಾಗಿದೆ. ಒಟ್ಟಾರೆ ರಾಷ್ಟ್ರೀಯ ಚೇತರಿಕೆ ಪ್ರಮಾಣ ಶೇ. 98.10ಕ್ಕೆ ಏರಿದ್ದು, 24 ತಾಸಿನ ಅವಧಿಯಲ್ಲಿ 19,788 ರೋಗಿಗಳು ಚೇತರಿಸಿಕೊಂಡಿದ್ದಾರೆ. ಒಟ್ಟಾರೆ ಚೇತರಿಕೆ ಪ್ರಮಾಣ 3,34,19,749ಕ್ಕೆ ಏರಿದೆ. ದೈನಿಕ ಪಾಸಿಟಿವಿಟಿ ದರ ಶೇ. 1.29 ಇದ್ದು, ಕಳೆದ 48 ದಿನಗಳಿಂದ ಇದು ಶೇ. 3ಕ್ಕಿಂತ ಕಡಿಮೆ ಇದೆ. ಸಾಪ್ತಾಹಿಕ ಪಾಸಿಟಿವಿಟಿ ದರ ಶೇ. 1.42 ಇದೆ. ದೇಶದಲ್ಲಿ ಶನಿವಾರ 11,00,123 ಟೆಸ್ಟ್ಗಳನ್ನು ಮಾಡಲಾಗಿದ್ದು, ಒಟ್ಟಾರೆ 97.65 ಕೋಟಿಗೂ ಹೆಚ್ಚು ಡೋಸ್ ಲಸಿಕೆ ವಿತರಣೆ ಆಗಿದೆ. ಶನಿವಾರ ಸಂಜೆ 7ಗಂಟೆವರೆಗೆ 41,20,772 ಮಂದಿಗೆ ಲಸಿಕೆ ನೀಡಲಾಗಿದೆ.
ಮಾಡೆರ್ನಾ ಲಸಿಕೆಯ ಬೂಸ್ಟರ್ ಡೋಸ್ ನೀಡಲು ಅಮೆರಿಕದ ತಜ್ಞರ ಸಮಿತಿ ಶಿಫಾರಸು ಮಾಡಿದೆ. ಫೈಜರ್ ಲಸಿಕೆಯ 3ನೇ ಡೋಸ್ಗೆ ನೀಡಲು ಒಂದು ತಿಂಗಳ ಹಿಂದೆ ಶಿಫಾರಸು ಮಾಡಿತ್ತು. ಎರಡನೇ ಡೋಸ್ ಪಡೆದ ಆರು ತಿಂಗಳ ನಂತರ ಮೂರನೇ ಡೋಸ್ ನೀಡಬೇಕು.
Coronavirus India Numbers Lowest Numbers After Last March
ಇದನ್ನೂ ಓದಿ: Antibody Cocktail: ಆಂಟಿಬಾಡಿ ಕಾಕ್ಟೈಲ್ ಥೆರಪಿಯಿಂದ ಕರ್ನಾಟಕದ 1068ಕ್ಕೂ ಹೆಚ್ಚು ಕೊರೊನಾ ಸೋಂಕಿತರ ಚೇತರಿಕೆ
ಇದನ್ನೂ ಓದಿ: ಕೊರೊನಾದಿಂದ ಅನಾಥ ಮಕ್ಕಳಿಗೆ 10 ಲಕ್ಷ ರೂ ಸ್ಟೈಫಂಡ್
Discussion about this post