ದೆಹಲಿ: ಶತಕೋಟಿ ಲಸಿಕೆ ನೀಡಿಕೆ ಪೂರೈಸಲು ತುದಿಗಾಲಲ್ಲಿ ನಿಂತಿರುವ ಕೇಂದ್ರ ಸರ್ಕಾರ ನಿಮ್ಮ ಬಳಿ ಸಂಗ್ರಹ ಇರುವ ಎರಡನೆ ಡೋಸ್ ಲಸಿಕೆ ನೀಡಲು ಮೊದಲ ಅಧ್ಯತೆ ನೀಡುವಂತೆ ಎಲ್ಲಾ ರಾಜ್ಯ ಸರ್ಕಾರಗಳಿಗೆ ಮನವಿ ಮಾಡಿಕೊಂಡಿದೆ. ಕಳೆದ ಜನವರಿ 16 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದೇಶದ್ಯಾಂತ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿದ್ದರು.
ಇದುವರೆಗೂ ದೇಶದಲ್ಲಿರುವ 99 ಕೋಟಿ ಮಂದಿಗೆ ಲಸಿಕೆ ನೀಡಲಾಗಿದ್ದು, ಕೆಲವೇ ದಿನಗಳಲ್ಲಿ ಶತಕೋಟಿ ಲಸಿಕೆ ನೀಡಿಕೆ ಪೂರೈಸಲು ಸರ್ವ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. 100 ಕೋಟಿ ಲಸಿಕೆ ನೀಡಿದರೂ ಆಯಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳು ಅಂತಾರಾಷ್ಟ್ರೀಯ ಪ್ರವಾಸಕ್ಕೆ ನಿಗಪಡಿಸಿರುವ ಮಾನದಂಡವನ್ನು ಉಲ್ಲಂಘನೆ ಮಾಡಬಾರದು ಎಂದು ಮನವಿ ಮಾಡಿಕೊಂಡಿದೆ.
ದೇಶದ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ನೀಡಲಾಗಿರುವ ಲಸಿಕೆಗಳ ಬಗ್ಗೆ ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಈಗಾಗಲೇ 99 ಕೋಟಿ ಮಂದಿಗೆ ಲಸಿಕೆ ಹಾಕಲಾಗಿದೆ. ಕೆಲವೆ ದಿನಗಳಲ್ಲಿ ನಾವು 100 ಕೋಟಿ ಲಸಿಕೆ ನೀಡಿದ ಸಾಧನೆಗೆ ಮುನ್ನುಡಿ ಬರೆಯಲಿದ್ದೇವೆ.
ನಮ್ಮ ಈ ಕಾರ್ಯಕ್ಕೆ ಬೆಂಬಲ ಸೂಚಿಸಿ ತಮ್ಮ ಪ್ರಜೆಗಳಿಗೆ ಲಸಿಕೆ ನೀಡಿದ ರಾಜ್ಯ ಸರ್ಕಾರಗಳಿಗೆ ಅವರು ಅಭಿನಂದನೆ ಸಲ್ಲಿಸಿದ್ದಾರೆ. ಈಗಾಗಲೆ ಕೆಲವರು ಮೊದಲ ಲಸಿಕೆ ಪಡೆದಿದ್ದರೂ ಇನ್ನು ಎರಡನೆ ಡೋಸ್ ಪಡೆಯಲು ಸಾಧ್ಯವಾಗಿಲ್ಲ. ಹೀಗಾಗಿ ಎಲ್ಲಾ ರಾಜ್ಯ ಸರ್ಕಾರಗಳು ಅವಶ್ಯವಿರುವ ಎಲ್ಲರಿಗೂ ಎರಡನೆ ಡೋಸ್ ಲಸಿಕೆ ನೀಡಲು ಮುಂದಾಗ ಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.

























Discussion about this post