ಮುಂಬೈ: ಗೋವಾದಿಂದ ಮುಂಬೈಗೆ ಹೋಗುತ್ತಿದ್ದ ಐಷಾರಾಮಿ ಹಡಗಿನಲ್ಲಿ ಅಕ್ಟೋಬರ್ 2ರಂದು ರೇವ್ ಪಾರ್ಟಿ ನಡೆಸಿ ಮಾದಕವಸ್ತು ಸೇವನೆ ಆರೋಪದಲ್ಲಿ ಆರ್ಯನ್ ಖಾನ್ ಬಂಧಿತನಾಗಿರುವ ಹಿನ್ನೆಲೆಯಲ್ಲಿ ಆತನ ತಂದೆ ಮತ್ತು ಬಾಲಿವುಡ್ನ ಖ್ಯಾತ ನಟ ಶಾರುಖ್ ಖಾನ್ ಅವರ ಮನೆ “ಮನ್ನತ್’ಗೆ ಮಾದಕವಸ್ತು ನಿಯಂತ್ರಣ ಬ್ಯೂರೊ (ಎನ್ಸಿಬಿ) ತಂಡ ಗುರುವಾರ ಭೇಟಿ ಕೊಟ್ಟಿತ್ತು. ಆದರೆ, ಅನೇಕ ಮಾಧ್ಯಮಗಳಲ್ಲಿ ಶಾರುಖ್ ಮನೆ ಮೇಲೆ ಎನ್ಸಿಬಿ ದಾಳಿ ನಡೆಸಿದೆ ಎಂಬ ವರದಿ ಬಿತ್ತರವಾದ ಹಿನ್ನೆಲೆಯಲ್ಲಿ, ಇದು ದಾಳಿಯಲ್ಲ. ದಾಖಲಾತಿ ಪ್ರಕ್ರಿಯೆ ಸಂಬಂಧದ ಭೇಟಿ ಎಂದು ಎನ್ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ಹೇಳಿಕೆಯಲ್ಲಿ ಸ್ಪಷ್ಟಡಿಸಿದ್ದಾರೆ.
ವಿಶೇಷ ಕೋರ್ಟ್ನಲ್ಲಿ ಆರ್ಯನ್ ಅರ್ಜಿ ಬುಧವಾರ ಎರಡನೇ ಸಲವೂ ತಿರಸ್ಕೃತವಾದ ಹಿನ್ನೆಲೆಯಲ್ಲಿ ಆರ್ಯನ್ ವಕೀಲರು ಈಗ ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದಾರೆ. ಈ ಅರ್ಜಿ ಮಂಗಳವಾರದ ವಿಚಾರಣೆಯ ಪಟ್ಟಿ ಯಲ್ಲಿ ಇದೆ.
ಡ್ರಗ್ಸ್ ಸೇವನೆ ಪ್ರಕರಣ ಸಂಬಂಧ ಆರ್ಯನ್ ಖಾನ್ ಸೇರಿ ಎಂಟು ಆರೋಪಿಯನ್ನು ಎನ್ಸಿಬಿ ಅ. 2ರಂದು ಬಂಧಿಸಿತ್ತು. ನಂತರ 12 ಮಂದಿಯನ್ನು ಅರೆಸ್ಟ್ ಮಾಡಿದೆ.
20 ದಿನದ ನಂತರ ಮಗನನ್ನು ಕಂಡ ಖಾನ್
ಶಾರುಖ್ ಖಾನ್ ಅರ್ಥರ್ ರೋಡ್ ಜೈಲಿಗೆ ಗುರುವಾರ ಬೆಳಗ್ಗೆ ಭೇಟಿ ನೀಡಿದ್ದರು. ತಮ್ಮ ಮಗ ಆರ್ಯನ್ ಬಂಧಿತನಾಗಿ 20 ದಿನದ ನಂತರ ಆತನನ್ನು ಅವರು ಮುಖಾಮುಖಿಯಾದರು. ಜೈಲಿನ ಸಂದರ್ಶಕರ ಕೋಣೆಯಲ್ಲಿದ್ದ 20 ನಿಮಿಷ ಇದ್ದ ಶಾರುಖ್, ಮಗನನ್ನು ದೂರದಿಂದಲೇ ಕಂಡು ಇಂಟರ್ಕಾಂನಲ್ಲಿ ಮಾತನಾಡಿದರು. ಶಾರುಖ್ ಮತ್ತು ಗೌರಿ ದಂಪತಿ ಕಳೆದ ಶುಕ್ರವಾರ ವಿಡಿಯೋ ಕಾಲ್ನಲ್ಲಿ ಆರ್ಯನ್ ಜತೆ ಮಾತನಾಡಿದ್ದರು. ಶಾರುಖ್ ಜೈಲಿಗೆ ಭೇಟಿ ನೀಡಿ ವಾಪಸಾದ ಕೆಲವು ಗಂಟೆ ಬಳಿಕ ಅವರ ಮನೆಗೆ ಎನ್ಸಿಬಿ ತಂಡ ಭೇಟಿ ನೀಡಿತ್ತು.
ನಟಿ ಅನನ್ಯ ಪಾಂಡೆ ಲ್ಯಾಪ್ಟಾಪ್, ಮೊಬೈಲ್ ವಶ
ಡ್ರಗ್ಸ್ ಸೇವನೆ ಪ್ರಕರಣ ಆರೋಪಿಗಳ ವಾಟ್ಸ್ಆ್ಯಪ್ ಚಾಟ್ನಲ್ಲಿ ಬಾಲಿವುಡ್ ಹಿರಿಯ ನಟ ಚುಂಕಿ ಪಾಂಡೆ ಪುತ್ರಿ ಅನನ್ಯ ಪಾಂಡೆ ಹೆಸರು ಮೇಲಿಂದ ಮೇಲೆ ಕಾಣಿಸಿರುವ ಕಾರಣ ಎನ್ಸಿಬಿ ತಂಡ ನಟಿ ಅನನ್ಯ ಪಾಂಡೆ ಮನೆಯಲ್ಲಿ ಶೋಧ ನಡೆಸಿದೆ. ಆಕೆಯ ಲ್ಯಾಪ್ಟಾಪ್, ಮೊಬೈಲ್ಗಳನ್ನು ಜಪ್ತಿ ಮಾಡಿ ಕೊಂಡೊಯ್ದಿದೆ. ಜತೆಗೆ ಅನನ್ಯಳನ್ನು ತನ್ನ ಕಚೇರಿಯಲ್ಲಿ ವಿಚಾರಣೆ ನಡೆಸಿದೆ. ಮಗಳ ಜತೆಗೆ ಚುಂಕಿ ಪಾಂಡೆ ಕೂಡ ಎನ್ಸಿಬಿ ಕಚೇರಿಗೆ ಬಂದಿದ್ದರು.
NCB Says no raid on Sharukh Khan House






















Discussion about this post