ಚಿಕ್ಕಮಗಳೂರು : ಜೀವನದಲ್ಲಿ ಗುರಿಯ ಜತೆಗೆ ಕಠಿಣ ಪರಿಶ್ರಮವಿದ್ದಾಗ ಸಾಧನೆ ಎಂಬ ಯಶಸ್ಸು ದೊರೆಯಲಿದೆ ಎಂದು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಹೇಳಿದರು.
ನಗರದ ದಂಟರಮಕ್ಕಿಯ ಜ್ಞಾನ ಸಮರ್ಥ ವತಿಯಿಂದ ಶ್ರೀ ಸ್ವಾಮಿ ಸಮರ್ಥ ರಾಮದಾಸ ವಿದ್ಯಾಮಂದಿರದಲ್ಲಿ ಆಯೋಜಿಸಿದ್ದ ನವೋದಯ ಕೋಚಿಂಗ್ ಸೆಂಟರ್‌ನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಗತ್ತಿನಲ್ಲಿ ಎಲ್ಲಾ ದಾನಕ್ಕಿಂತಲೂ ವಿದ್ಯಾದಾನ ಶ್ರೇಷ್ಟವಾದುದು ಎಂಬ ಮಾತಿದೆ. ಗುರುವಿನ ಮಾರ್ಗದರ್ಶನದ ಜತೆಗೆ ಸಾಧಿಸುವ ಗುರಿ ಇದ್ದಾಗ ಸಾಧನೆ ಎಂಬ ಮೆಟ್ಟಿಲು ಏರಲು ಸಾಧ್ಯವಾಗಲಿದೆ ಎಂದು ಕಥೆಯ ಮೂಲಕ ವಿವರಿಸಿ ಹೇಳಿದರು.
ಜೀವನದಲ್ಲಿ ಪ್ರತಿಯೊಬ್ಬರಿಗೂ ಗುರಿ ಎಂಬುದು ಇರಬೇಕು, ಆ ನಿಟ್ಟಿನಲ್ಲಿ ಸಾಧಿಸಲು ಅನುಕೂಲವಾಗುವಂತೆ ಗುರುಕುಲ ಶಿಕ್ಷಣ ಪದ್ದತಿಯು ಸಹಕಾರಿಯಾಗಲಿದೆ ಎಂದು ನವೋದಯ ಕೋಚಿಂಗ್ ಸೆಂಟರ್ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದರು.
ಜ್ಞಾನ ಎಂಬುದು ವಿಸ್ತಾರವಾದುದು ಅದನ್ನು ತಿಳಿಯಲು ಕಠಿಣ ಪರಿಶ್ರಮ, ಶ್ರದ್ದೆ ಅಗತ್ಯವಿದೆ. ಗುರಿಯನ್ನು ಸಾಕಾರಗೊಳಿಸಿಕೊಳ್ಳಲು ಯೋಜಿಸಬೇಕು ಎಂದು ಸಲಹೆ ನೀಡಿದರು.
ಜ್ಞಾನ ಸಮರ್ಥ ಸಂಸ್ಥೆಯ ಟ್ರಸ್ಟಿ, ಹಾಗೂ ಜಂಟಿ ಕಾರ್ಯದರ್ಶಿ ಸುರೇಶ್ ಎಸ್.ಶೆಟ್ಟಿ ಮಾತನಾಡಿ ಸಂಸ್ಥೆಯು ವರ್ಷಗಳಿಂದ ಹಲವು ಸಮಾಜಮುಖಿ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದೆ. ನವೋದಯ ಕೋಚಿಂಗ್ ಸೆಂಟರ್ ಮೂಲಕ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಲು ಮುಂದಾಗಿದೆ ಈ ಹಿಂದೆ ಶೇ ೮೦ ರಷ್ಟು ಫಲಿತಾಂಶ ಪಡೆಯುವಲ್ಲಿ ಸಂಸ್ಥೆಯು ಪರಿಶ್ರಮ ಪಟ್ಟಿತ್ತು ಎಂದು ಸ್ಮರಿಸಿದರು.
ಗೋಶಾಲೆ, ವೃದ್ಧಾಶ್ರಮ, ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ, ಸೇರಿದಂತೆ ಹಲವಾರು ಸಮಾಜಮುಖಿ ಕಾರ್ಯಗಳಲ್ಲಿ ಸಂಸ್ಥೆಯು ತೊಡಗಿಕೊಳ್ಳಲಿದೆ. ನಿರುದ್ಯೋಗಿಗಳಿಗೆ ಜೀವನ ರೂಪಿಸಿಕೊಳ್ಳಲು ಅವಕಾಶ ರೂಪಿಸಲಿದೆ. ಆ ನಿಟ್ಟಿನಲ್ಲಿ ಶ್ರೀ ಸ್ವಾಮಿ ಸಮರ್ಥ ರಾಮದಾಸ ವಿದ್ಯಾಮಂದಿರ ಹಾಗೂ ಜ್ಞಾನ ಸಮರ್ಥ ಟ್ರಸ್ಟ್ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದರು.
ನವೆಂಬರ್ ೧ ರಿಂದ ನವೋದಯ ಎರಡನೇ ಹಂತದ ತರಬೇತಿ ಆರಂಭವಾಗಲಿದ್ದು ಮಹಿಳಾ ಸಬಲೀಕರಣಕ್ಕಾಗಿ ಸಮರ್ಥ ಮಹಿಳಾ ಮಂಡಳಿಯನ್ನು ತೆರೆಯಲಾಗಿದೆ, ವಿದ್ಯಾರ್ಥಿಗಳನ್ನು ದತ್ತುಪಡೆಯುವ ಮೂಲಕ ಉನ್ನತ ಶಿಕ್ಷಣದ ಸಂಪೂರ್ಣ ವೆಚ್ಚವನ್ನು ಟ್ರಸ್ಟ್ಭರಿಸಲಿದೆ ಎಂದರು.
ಇದೇ ವೇಳೆ ನವೋದಯ ಶಾಲೆಯಲ್ಲಿ ಅತ್ಯಧಿಕ ಅಂಕಗಳಿಸುವ ಮೂಲಕ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿರುವ ವಿದ್ಯಾರ್ಥಿನಿ ಪರ್ಣಿಕಾ ಚಂದ್ರಶೇಖರ್ ಅವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು.
ಸಮರ್ಥ ಟ್ರಸ್ಟ್ನ ಟ್ರಸ್ಟಿ ಅಮೃತಾ ಹೆಚ್.ಎಸ್ ಮಾತನಾಡಿ ನವೆಂಬರ್ ೧ ರಿಂದ ನವೊದಯ ಕೋಚಿಂಗ್ ತgಗತಿಗಳು ಆರಂಭವಾಗಲಿದ್ದು ಕಳೆದ ಬಾರಿಗಿಂತ ಈ ಬಾರಿ ಶೇ ೧೦೦ ರಷ್ಟು ಫಲಿತಾಂಶ ಪಡೆಯುವ ಗುರಿ ಹೊಂದಲಾಗಿದೆ. ಜತೆಗೆ ಈ ಬಾರಿ ೨೬ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಮೂವರು ಬಡ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ನೀಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜ್ಞಾನ ಸಮರ್ಥ ಟ್ರಸ್ಟ್ನ ಮುಖ್ಯಸ್ಥ ಡಾ. ಸಂತೋಷ್ ಅಧ್ಯಕ್ಷತೆ ವಹಿಸಿದ್ದರು, ಕಾರ್ಯದರ್ಶಿ ಪ್ರಕಾಶ್, ಖಜಾಂಚಿ ಸುಧಾ, ಉಪಾಧ್ಯಕ್ಷೆ ಶ್ವೇತಾ, ಪವನ್‌ಕುಮಾರ್, ಸೇರಿದಂತೆ ಮತ್ತಿತರರು ಇದ್ದರು.

























Discussion about this post