ಮುಂಬೈ: ಇತ್ತೀಚಿನ ಕೆಲ ವಾರಗಳಿಂದ ಸತತ ಏರುಗತಿಯಲ್ಲಿ ಸಾಗುತ್ತಿರುವ ಪೆಟ್ರೋಲ್ ಹಾಗೂ ಡೀಸಲ್ ದರಗಳು ಇಂದೂ ಅದೇ ಪೃವೃತ್ತಿಯನ್ನು ಮುಂದುವರೆಸಿದ್ದು ಸತತ 5ನೇ ದಿನವಾದ ಇಂದೂ (ಅ.24) ಏರಿಕೆ ಕಂಡಿವೆ. ಅಂತರರಾಷ್ಟ್ರೀಯ ತೈಲ ದರಗಳಲ್ಲಿ ಸತತ ಏರಿಕೆಯಾಗುತ್ತಿರುವುದೇ ಇದಕ್ಕೆ ಕಾರಣವಾಗಿದ್ದು ದೇಶದಲ್ಲೂ ಬೆಲೆಗಳನ್ನು ಕೊಂಚ ಮಟ್ಟಿಗೆ ಏರಿಸಲಾಗಿದೆ. ಪೆಟ್ರೋಲ್ ದರವನ್ನು ಲೀಟರ್ಗೆ 0.35 (ಮೂವತ್ತೈದು ಪೈಸೆ) ಏರಿಸಲಾಗಿದ್ದು ಲೀಟರ್ಗೆ 107.59 ರೂಪಾಯಿಗಳಾಗಿದ್ದರೆ ಡೀಸಲ್ ಬೆಲೆಯಲ್ಲೂ ಅಷ್ಟೇ ಏರಿಕೆಯಾಗಿದ್ದು ಲೀಟರ್ಗೆ 96.32 ರೂಪಾಯಿಗೆ ಏರಿಕೆಯಾಗಿದೆ.
ವಿವಿಧ ರಾಜ್ಯಗಳು ವಿಧಿಸುವ ಸ್ಥಳೀಯ ತೆರಿಗೆಗಳ ದರಗಳ ವ್ಯತ್ಯಾಸದಿಂದಾಗಿ ಮಹಾನಗರಗಳಲ್ಲಿನ ಪೆಟ್ರೋಲ್ ಹಾಗೂ ಡೀಸಲ್ ದರಗಳು ಕ್ರಮವಾಗಿ ಹೀಗಿವೆ: ಮುಂಬೈ 113.46 ರೂಪಾಯಿ ಹಾಗೂ 104.38 ರೂಪಾಯಿಗಳು; ಕೋಲ್ಕತ್ತಾ 108.11 ರೂಪಾಯಿಗಳು ಹಾಗೂ 99.43 ರೂಪಾಯಿಗಳು; ಚೆನ್ನೈ 104.52 ರೂಪಾಯಿಗಳು ಹಾಗೂ 100.59 ರೂಪಾಯಿಗಳು; ಬೆಂಗಳೂರಿನಲ್ಲಿ 111.34 ರೂಪಾಯಿಗಳು ಹಾಗೂ 102.23 ರೂಪಾಯಿಗಳು; ಮತ್ತು ಹೈದರಾಬಾದ್ 111.91 ರೂಪಾಯಿಗಳು ಹಾಗೂ 105.08 ರೂಪಾಯಿಗಳು.
ಇಡೀ ದೇಶದಲ್ಲೇ ರಾಜಾಸ್ಥಾನದ ಗಂಗಾನಗರದಲ್ಲಿ ಅತಿ ಹೆಚ್ಚಿನ ಬೆಲೆಗಳು ದಾಖಲಾಗಿದ್ದು ಕ್ರಮವಾಗಿ ಪೆಟ್ರೋಲ್ ಹಾಗೂ ಡೀಸಲ್ಗಳ ದರಗಳು ಲೀಟರ್ಗೆ ಕ್ರಮವಾಗಿ 119.79 ರೂಪಾಯಿಗಳು ಹಾಗೂ 110.63 ರೂಪಾಯಿಗಳು.
ಕೇಂದ್ರ ಸರಕಾರವು ಕಳೆದ ಮೇ 5ರಂದು ಅಬಕಾರಿ ಸುಂಕವನ್ನು ಗರಿಷ್ಠ ಮಿತಿಗೆ ಏರಿಸಿದ ಪರಿಣಾಮವಾಗಿ ಇಲ್ಲಿಯವರೆಗೆ ಪೆಟ್ರೋಲ್ ದರಗಳಲ್ಲಿ ಲೀಟರ್ಗೆ ಒಟ್ಟು 35.98 ರೂಪಾಯಿಗಳ ಏರಿಕೆಯಾಗಿದ್ದು ಡೀಸಲ್ ದರಗಳಲ್ಲಿ ಇದೇ ಅವಧಿಯಲ್ಲಿ ಲೀಟರ್ಗೆ 26.58 ರೂಪಾಯಿಗಳ ಏರಿಕೆಯಾಗಿದೆ. ಅಂತರರಾಷ್ಟ್ರೀಯ ತೈಲ ದರಗಳಲ್ಲಿ ಬಹಳಷ್ಟು ಇಳಿಕೆಯಾದರೂ ಕೇಂದ್ರ ಸರಕಾರವು ಅದರ ಸೌಲಭ್ಯವನ್ನು ಜನರಿಗೆ ವಿಸ್ತರಿಸದೇ ಅಬಕಾರಿ ಸುಂಕವನ್ನು ಏರಿಸಿದ್ದು ಜನಸಮಾನ್ಯರಿಗೆ ದೊಡ್ಡ ಹೊರೆಯಾಗಿ ಪರಿಣಮಿಸಿದೆ. ಸದ್ಯ ಅಂತರರಾಷ್ಟ್ರೀಯ ತೈಲ ದರಗಳು ಮತ್ತೆ ಬ್ಯಾರಲ್ಗೆ 85 ಅಮೆರಿಕನ್ ಡಾಲರ್ ತಲುಪಿದ್ದು ದೇಶದಲ್ಲಿ ಅಬಕಾರಿ ಸುಂಕವು ಲೀಟರ್ಗೆ ಕ್ರಮವಾಗಿ ಪೆಟ್ರೋಲ್ಗೆ 32.9 ರೂಪಾಯಿಗಳು ಹಾಗೆ ಡೀಸಲ್ಗೆ 31.8 ರೂಪಾಯಿಗಳ ದರದಲ್ಲೇ ಮುಂದುವರೆದಿವೆ.
Petrol and diesl prices continue to go up for the 5th concecutive day on Sunday
ಇದನ್ನೂ ಓದಿ: ಕರುಳಿನ ಕಿರಿಕಿರಿ: ಏನಿದು ಇರಿಟೇಬಲ್ ಬೊವೆಲ್ ಸಿಂಡ್ರೋಮ್? ಲಕ್ಷಣಗಳೇನು?
ಇದನ್ನೂ ಓದಿ: Viral Video: ಪ್ರಶ್ನಿಸಿದ ಯುವಕನನ್ನು ಥಳಿಸಿದ ಪಂಜಾಬ್ನ ಶಾಸಕ
Discussion about this post