ನವದೆಹಲಿ: ಸೂಪರ್ ಸ್ಟಾರ್ ರಜನಿಕಾಂತ್ ಅವರ ಮಗಳು ಸೌಂದರ್ಯ ವಿಶಾಖನ್ ಅವರು ಧ್ವನಿ ಆಧಾರಿತ ಸಾಮಾಜಿಕ ಮಾಧ್ಯಮ ಆ್ಯಪ್ ಅಭಿವೃದ್ಧಿಪಡಿಸಿದ್ದಾರೆ. ಇದಕ್ಕೆ ರಜನಿಕಾಂತ್ ಅವರು ಸೋಮವಾರ ಚಾಲನೆ ನೀಡಲಿದ್ದಾರೆ ಎನ್ನಲಾಗಿದೆ.
ಚಿತ್ರರಂಗದ ಅತ್ಯುನ್ನತ ದಾದಾಸಾಹೇಬ್ ಪಾಲ್ಕೆ 2020ನೇ ಸಾಲಿನ ಪ್ರಶಸ್ತಿಗೆ ಆಯ್ಕೆಯಾಗಿ ರಜನಿಕಾಂತ್ ಅವರು ಸೋಮವಾರ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಅದೇ ವೇಳೆ ಸಾಮಾಜಿಕ ಮಾಧ್ಯಮ ಆ್ಯಪ್ಗೆ ಚಾಲನೆ ನೀಡಲಿದ್ದಾರೆ ಎಂದು ವರದಿಯಾಗಿದೆ.
‘ಎರಡು ಕಾರಣಗಳಿಗಾಗಿ ನನಗೆ ನಾಳೆ ಮಹತ್ವದ ಕ್ಷಣವಾಗಿದೆ. ಜನರ ಪ್ರೀತಿ ಮತ್ತು ಬೆಂಬಲದ ಫಲವಾಗಿ ಭಾರತ ಸರ್ಕಾರ ನನಗೆ ದಾದಾಸಾಹೇಬ್ ಪಾಲ್ಕೆ ಪ್ರಶಸ್ತಿಯನ್ನು ಪ್ರದಾನಿಸುತ್ತಿದೆ. ಮತ್ತೊಂದು ಮಹತ್ವದ ವಿಚಾರವೇನೆಂದರೆ, ಮಗಳು ಸೌಂದರ್ಯ ಸ್ವ ಪ್ರಯತ್ನದಿಂದ ಹೂಟ್ (Hoote) ಎಂಬ ಉಪಯುಕ್ತ ಆ್ಯಪ್ ತಯಾರಿಸಿದ್ದಾರೆ. ಇದು ದೇಶದ ಮೊದಲ ಧ್ವನಿ ಆಧಾರಿತ ಸಾಮಾಜಿಕ ಮಾಧ್ಯಮ ವೇದಿಕೆಯಾಗಿದ್ದು ನಾಳೆ ಅನಾವರಣಗೊಳ್ಳಲಿದೆ’ ಎಂದು ರಜನಿಕಾಂತ್ ತಿಳಿಸಿದ್ದಾರೆ.
ದಾದಾಸಾಹೇಬ್ ಪಾಲ್ಕೆ ಪ್ರಶಸ್ತಿ ಸ್ವೀಕರಿಸುವುದಕ್ಕಾಗಿ ಅವರು ಈಗಾಗಲೇ ದೆಹಲಿ ತಲುಪಿದ್ದಾರೆ.
ಓದಿ: ಶಾರುಖ್ ಖಾನ್ ಬಿಜೆಪಿ ಸೇರಿದರೆ ಸಕ್ಕರೆ ಪುಡಿಯಾಗುತ್ತದೆ ಡ್ರಗ್ಸ್ ಎಂದ ಎನ್ಸಿಪಿ ನಾಯಕ ಛಗನ್ ಭುಜಬಲ್
Discussion about this post