ತುರ್ತಾಗಿ ಹಣ ಬೇಕು, ಹಣ ಹೊಂದಿಸುವ ಯಾವುದೇ ದಾರಿಗಳು ಕಾಣುತ್ತಿಲ್ಲ ಅಂದರೆ ಎಲ್ಲರ ಕಣ್ಣಿಗೆ ಬೀಳೋದು ವೈಯುಕ್ತಿ ಸಾಲದ ಹಾದಿ. ಸಣ್ಣ ಪ್ರಮಾಣದ ಸಾಲ ಬೇಕಾದರೆ, ಯಾವ ಕಾರಣಕ್ಕೂ ವೈಯುಕ್ತಿಕ ಸಾಲಕ್ಕೆ ಕೈ ಹಾಕಬೇಡಿ. ಪಿಪಿಎಫ್ ಬೆಸ್ಟ್ ಅನ್ನೋದು ತಜ್ಞರ ಉವಾಚ.
ದೊಡ್ಡ ಮೊತ್ತದ ಸಾಲಬೇಕು ಅನ್ನುವುದಾದರೆ ವೈಯುಕ್ತಿಕ ಸಾಲವೇ ಮೇಲು. ನಿಮ್ಮ ಆದಾಯ ಜಾಸ್ತಿ ಇದ್ದು, ಅಕಾಲಿಕವಾಗಿ ಹಣದ ಅವಶ್ಯಕತೆ ಎದುರಾಯಿತು ಅನ್ನಿ. ಆಗ, ವೈಯುಕ್ತಿಕ ಸಾಲವೇ ಬೆಸ್ಟ್. ಏನೇ ಹೇಳಿ, ನಿಮಗೆ ದೀರ್ಘವೋ, ಅಲ್ಪಾವಧಿ ಸಾಲವೋ ಎನ್ನುವುದರ ಮೇಲೆ ಸಾಲದ ಹಾದಿ ತೀರ್ಮಾನ ಮಾಡಬಹುದು. ಈಗ ಸಾಲ ಬೇಕು ಅಂದಾಗ ವೈಯುಕ್ತಿಕ ಸಾಲವೋ, ನಾವು ಹೂಡಿಕೆ ಮಾಡಿದ ಪಿಪಿಎಫ್ ಮೇಲಿನ ಸಾಲ ಒಳ್ಳೆಯೆದೋ- ಎರಡರ ವ್ಯತ್ಯಾಸಗಳನ್ನು ತಿಳಿಯೋಣ ಬನ್ನಿ.
1) ವೈಯುಕ್ತಿಕ ಸಾಲವನ್ನು ಬ್ಯಾಂಕ್ ಸುಮ್ಮನೆ ಕೊಡೋದಿಲ್ಲ. ನಿಮ್ಮ ಆರ್ಥಿಕ ಸ್ಥಿತಿಗತಿ, ಹಿಂದಿರುಗಿಸುವ ನಿಮ್ಮ ಸಾಮರ್ಥ್ಯ, ಕ್ರೆಡಿಟ್ ಸ್ಕೋರ್ ಇವೆಲ್ಲ ನೋಡ್ತವೆ. ಆದರೆ, ಪಿಪಿಎಫ್ ಹಾಗಲ್ಲ. ನೀವು ಆ ಖಾತೆಯಲ್ಲಿ ಎರಡು ವರ್ಷದ ತನಕ ತುಂಬಿದ ಒಟ್ಟು ಹಣದಲ್ಲಿ ಶೇ.25ರಷ್ಟನ್ನು ಮುರಿದು, ಸಾಲವಾಗಿ ಪಡೆಯುವ ಅವಕಾಶವಿದೆ. ಆದರೆ, ಗೊತ್ತಿರಲಿ, ನೀವು ಪಿಪಿಎಫ್ ನಿಂದ ಸಾಲ ಎತ್ತಬೇಕಾದರೆ ಖಾತೆಯ ವಯಸ್ಸು 3ರಿಂದ 6 ವರ್ಷಗಳಾಗಿರಬೇಕು. ಅಂದರೆ, ಅಷ್ಟು ವರ್ಷ ಪ್ರಾಮಾಣಿಕವಾಗಿ ಹಣ ಹೂಡಿರಬೇಕು.
2) ಇನ್ನು ವೈಯುಕ್ತಿಕ ಸಾಲ ಕೊಟ್ಟರೂ, ಅದಕ್ಕೆ ವಿಧಿಸುವ ಬಡ್ಡಿ ಅಬ್ಬಬ್ಬಾ, ಶೇ.10ರಿಂದ 20ರಷ್ಟಿರುತ್ತದೆ. ಸರಿಯಾದ ಸಮಯಕ್ಕೆ ಕಟ್ಟದೇ ಇದ್ದರೆ ದುಭಾರಿ ದಂಡವೂ ಇರುತ್ತದೆ ಅನ್ನೋದು ಮರೆಯಬಾರದು. ಆದರೆ, ಪಿಪಿಎಫ್ ಸಾಲಕ್ಕೆ ಶೇ.7.1 +ರಷ್ಟು ಮಾತ್ರ ಬಡ್ಡಿಯಂತೆ.
3) ಹೇಗೆ ಲೆಕ್ಕ ಹಾಕಿದರೂ, ಪಿಪಿಎಫ್ ಬಡ್ಡಿಗೆ ವೈಯುಕ್ತಿಕ ಸಾಲದ ಬಡ್ಡಿಯನ್ನು ಹೋಲಿಸಲು ಆಗದು. ಒಂದು ಅಪಾಯ ಏನೆಂದರೆ, ನೀವು ಪಿಪಿಎಪ್ ನಲ್ಲಿ ಸಾಲ ಪಡೆದು, ಅಸಲು-ಬಡ್ಡಿ ಕಟ್ಟದೆ ಗುಳಮ್ಮಂತ ಕೂತರೆ, ನೀವು ಸಾಲು ಮುರಿದು ಉಳಿದಿರುವ ಹಣಕ್ಕೂ ಬಡ್ಡಿಸಿಗುವುದಿಲ್ಲ. ಯಾವತ್ತು, ನೀವು ಸಾಲ+ಬಡ್ಡಿ ತುಂಬುತ್ತೀರೋ ಆಗ ನಿಮ್ಮ ಲೆಕ್ಕಚುಪ್ತ ಆಗುತ್ತದೆ. ಇದರ ಜೊತೆಗೆ ಪೂರ್ವ ನಿಗಧಿಯಾದ ಬಡ್ಡಿಗೆ ಮತ್ತಷ್ಟು ಬಡ್ಡಿ ಸೇರುವ ಇತರೆ ಪ್ರಯೋಜನಗಳು ಕೂಡ ಕಳೆದುಕೊಳ್ಳಬಹುದು.
ಹೀಗಾಗಿ, ನಿಮ್ಮ ಅವಶ್ಯಕತೆ, ಸಾಲದ ಸ್ವರೂಪ, ಸಾಲ ತೆಗೆದುಕೊಂಡ ಮೇಲೆ ಅದನ್ನು ಹಿಂತಿರುಗಿಸಲು ತೆಗೆದುಕೊಳ್ಳುವ ಅವಧಿ- ಇವೆಲ್ಲದರ ಆಧಾರದ ಮೇಲೆ ಯಾವ ಸಾಲ ಬೆಸ್ಟ್ ಅಂತ ತೀರ್ಮಾನಿಸಬಹುದು.
Which loan is best Personal loan OR Loan against PPF
ಇದನ್ನೂ ಓದಿ: Save Electricity: ವಿದ್ಯುತ್ ಉಳಿತಾಯಕ್ಕೆ, ಯುಪಿಎಸ್ ದೀರ್ಘ ಬಾಳಿಕೆಗೆ ಹೀಗೆ ಮಾಡಿ
ಇದನ್ನೂ ಓದಿ: ತಮಿಳುನಾಡು ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆ: ಸದ್ದಿಲ್ಲದೇ ರಾಜಕೀಯಕ್ಕಿಳಿದರೇ ನಟ ವಿಜಯ್?
Discussion about this post