ತೆಹರಾನ್: ಇರಾನ್ ದೇಶದ ಮೇಲೆ ಸೈಬರ್ ದಾಳಿಯಾಗಿರುವುದರಿಂದ ಅಲ್ಲಿನ ತೈಲ ಪೂರೈಕೆ ವ್ಯವಸ್ಥೆ ಅಸ್ತವ್ಯಸ್ಥಗೊಂಡಿದೆ. ಪೆಟ್ರೋಲ್ ಬಂಕ್ಗಳಲ್ಲಿ ತೈಲ ಮರುಭರ್ತಿಗೆ ತೊಂದರೆಯಾಗಿದೆ. ತಜ್ಞರು ಈಗಾಗಲೇ ಸಮಸ್ಯೆಯ ಮೂಲವನ್ನು ಕಂಡು ಹಿಡಿದಿದ್ದು, ವ್ಯವಸ್ಥೆ ತಹಬಂದಿಗೆ ಬರಲಿದೆ ಎಂದು ಸರ್ಕಾರ ಹೇಳಿದೆ.
ಈ ದಾಳಿಯಲ್ಲಿ ಅಮೇರಿಕ, ಇಸ್ರೇಲ್, ಪಾಶ್ಚಿಮಾತ್ಯ ದೇಶಗಳ ಕೈವಾಡವಿದೆ ಎಂದು ಇರಾನ್ ಆರೋಪಿಸಿದೆ.
ಕಾರ್ಡ್ಗಳ ಮೂಲಕ ತೈಲ ತುಂಬಿಸಿಕೊಳ್ಳುತ್ತಿದ್ದ ಗ್ರಾಹಕರಿಗೆ ಬರೆ ಬಿದ್ದಿದೆ. ಅನಿವಾರ್ಯವಾಗಿ ಅವರ ಹೆಚ್ಚಿನ ಬೆಲೆಗೆ ತೈಲ ಕೊಂಡು ಕೊಳ್ಳುವ ಸ್ಥಿತಿ ಎಂದುರಾಗಿದೆ.
ಈ ಸೈಬರ್ ದಾಳಿಯ ಹಿಂದೆ ವಿದೇಶಿ ಶಕ್ತಿಯ ಕೈವಾಡವಿದೆ. ಅದು ಯಾವ ದೇಶ ಎನ್ನುವುದನ್ನು ಅತಿ ಶೀಘ್ರದಲ್ಲೇ ಪ್ರಕಟಮಾಡುತ್ತೇವೆ ಎಂದು ಸೈಬರ್ ಮಂಡಳಿಯ ಕಾರ್ಯದರ್ಶಿ ಅಬೊಲ್ಲಾಸನ್ ಫಿರೋಜಾಬಾದಿ ಹೇಳುವ ಮೂಲಕ ಸೈಬರ್ ದಾಳಿಕೋರರಿಗೆ ಎಚ್ಚರಿಕೆ ನೀಡಿದ್ದಾರೆ.
Discussion about this post