ನವದೆಹಲಿ: ಪಾಲಕರು, ಹೆತ್ತವರಲ್ಲಿ ಶಿಕ್ಷಣದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ದೆಹಲಿ ಸರ್ಕಾರ, ಪಾಲಕರ ಸಂವಾದ ಕಾರ್ಯಕ್ರಮ ಏರ್ಪಡಿಸಿದೆ. ರಾಜ್ಯದ ಸುಮಾರು 18 ಲಕ್ಷ ಪಾಲಕರು ಮುಖಾಮುಖಿಯಾಗಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವ ಅವಕಾಶ ಪಡೆಯಲಿದ್ದಾರೆ ಎಂದು ಕಾರ್ಯಕ್ರಮ ಉದ್ಘಾಟಿಸಿದ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳಿದರು.
ಪಾಲಕರಲ್ಲಿ ಎರಡು ವಿಧ. ಒಂದು ಮಕ್ಕಳ ಬಗ್ಗೆ ಹೆಚ್ಚಿನ ತಲೆಕೆಡಿಸಿಕೊಳ್ಳದೇ ಇರುವವರು. ಅತಿಯಾಗಿ ಮಕ್ಕಳನ್ನು ನೋಡಿಕೊಳ್ಳುವವರು ಎರಡನೇ ವಿಧ. ಇಬ್ಬರೂ ಮಕ್ಕಳ ಬೆಳವಣಿಗೆಗೆ ಮಾರಕ. ಇತ್ತೀಚೆಗೆ ಇನ್ನೊಂದು ಬಗೆ ಶುರುವಾಗಿದೆ. ಮಕ್ಕಳಿ ಬಾಸ್ ರೀತಿ ವರ್ತಿಸುವ ಹೆತ್ತವರಿದ್ದಾರೆ.
ಮಕ್ಕಳ ಜೊತೆ ಸ್ನೇಹಿತರಂತೆ ಇರುವುದು ಹೊಸ ಪೀಳಿಗೆಯ ವರ್ತನೆಯಾಗಿದೆ. ಮಕ್ಕಳಿಗೆ, ಈ ಎರಡೂ ರೀತಿಯ ವರ್ತನೆಗಳು ಅಗತ್ಯವಿಲ್ಲ. ಅವರನ್ನು ಸುಮ್ಮನೆ ನೋಡಿಕೊಂಡರೆ ಸಾಕು ಎಂದು ಉಪಮುಖ್ಯಮಂತ್ರಿಗಳು ಕಿವಿಮಾತು ಹೇಳಿದರು.
ದೆಹಲಿ ಸರ್ಕಾರ, ಖಾಸಗಿ ಶಾಲೆಗಳ ಆಡಳಿತಮಂಡಳಿಗಳು ಮತ್ತು ಹೆತ್ತವರ ನಡುವಿನ ಅಂತರ ಕಡಿಮೆಮಾಡುವ, ಸೇತುಬಂಧದಂತೆ ಕಾರ್ಯನಿರ್ವಹಿಸುವ ಪಾಲಕರನ್ನು ನಿರೀಕ್ಷೆ ಮಾಡುತ್ತಿದೆ ಎಂದು ಇಲ್ಲಿನ ತ್ಯಾಗರಾಜ ಸ್ಟೇಡಿಯಮ್ ನಲ್ಲಿ ಸುದ್ದಿಗಾರರಿಗೆ ಹೇಳಿದರು.
Delhi government starts Parents Samvad Programme

























Discussion about this post