ಲಖನೌ: ಆಫ್ಘಾನಿಸ್ತಾನದಲ್ಲಿ ಸಂಘರ್ಷಕ್ಕೆ ಕಾರಣವಾಗಿರುವ ತಾಲಿಬಾನ್‌ಗಳು ಭಾರತಕ್ಕೆ ಒಳನುಸುಳುವ ಪ್ರಯತ್ನ ಮಾಡಿದರೆ ಅವರಿಗೆ ತಕ್ಕ ಶಾಸ್ತಿ ಮಾಡಲು ವೈಮಾನಿಕ ಕಾರ್ಯಾಚರಣೆಗೆ ನಾವು ಸಿದ್ಧವಾಗಿದ್ದೇವೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಎಚ್ಚರಿಕೆ ನೀಡಿದರು. ಸಾಮಾಜಿಕ ಪ್ರತಿನಿಧಿ ಸಮ್ಮೇಳನದಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ ನಾಯಕತ್ವದಲ್ಲಿ ದೇಶ ಬಲಿಷ್ಠ ಮತ್ತು ಸುಭದ್ರವಾಗಿದೆ. ಯಾವುದೇ ದೇಶ ಭಾರತವನ್ನು ಕೆಣಕುವ ಸಾಹಸ ಮಾಡಲು ಸಾಧ್ಯವಿಲ್ಲ. ಆದರೆ, ತಾಲಿಬಾನ್ಗಳನ್ನು ನಂಬಿಕೊಂಡು ಪಾಕಿಸ್ತಾನ ಭಾರತದ ಮತ್ತೆ ಕಣ್ಣು ಹಾಯಿಸುವ ದುಸ್ಸಾಹಸ ಮಾಡಿದರೆ ಒಳನುಸುಳುಕೋರರನ್ನು ಸದೆಬಡಿಯಲು ನಮ್ಮ ಸೇನಾಪಡೆಗಳು ಸನ್ನದ್ಧವಾಗಿವೆ ಎಂದರು.
ವಿರೋಧ ಪಕ್ಷಗಳನ್ನು ಹಿಗ್ಗಾಮುಗ್ಗ ತರಾಟೆ ತೆಗೆದುಕೊಂಡ ಯೋಗಿ, ಪ್ರತಿಪಕ್ಷಗಳು ತಮ್ಮ ಕುಟುಂಬದ ಅಭಿವೃದ್ಧಿಯನ್ನಷ್ಟೆ ಗುರಿಯಾಗಿಟ್ಟುಕೊಂಡಿವೆ. ರಾಜ್ಯವನ್ನಲ್ಲ ಎಂದರು. ಎಸ್ಬಿಎಸ್ಪಿ ಮುಖ್ಯಸ್ಥ ಓಂ ಪ್ರಕಾಶ್ ರಾಜ್ಭರ್ ಟೀಕೆಗೆ ಪ್ರತಿಕ್ರಿಯಿಸಿದ ಸಿಎಂ, ಅವರ ಚಿಂತನೆಗಳು ಅವರ ಕುಟುಂಬದ ಅಭಿವೃದ್ಧಿಗಷ್ಟೆ ಬದ್ಧ ಎಂಬುದನ್ನು ತೋರುತ್ತವೆ. ಅಪ್ಪನಿಗೆ ಸಚಿವನಾಗಲು ಬಯಕೆ, ಒಬ್ಬ ಮಗನಿಗೆ ಸಂಸದನಾಗುವ ಕನವರಿಕೆ, ಇನ್ನೊಬ್ಬನಿಗೆ ವಿಧಾನಪರಿಷತ್ ಸದಸ್ಯತ್ವದ ಮೇಲೆ ಕಣ್ಣು ಇಂಥ ಆಸೆಬುರಕ ಕುಟುಂಬಗಳ ಬ್ಲಾಕ್ಮೇಲ್ ರಾಜಕಾರಣವನ್ನು ಕೊನೆಗಾಣಿಸಬೇಕು ಎಂದರು.
ರಾಜ್ಭರ್ ಸಮುದಾಯವನ್ನು ಬಿಜೆಪಿ ಸರ್ಕಾರ ಕಡೆಗಣಿಸಿಲ್ಲ ಇಬ್ಬರು ಸಚಿವರು ತಮ್ಮ ಸಂಪುಟದಲ್ಲಿ ಇದ್ದಾರೆ. ಬಹರೈಚ್ನಲ್ಲಿ ಮಹಾರಾಜ ಸುಹೇಲ್ದೇವ್ ಅವರ ಸ್ಮಾರಕ ಭವ್ಯ ಭವನ ನಿರ್ಮಾಣ ಆಗುತ್ತಿದೆ. ಬಹರೈಚನ್‌ನಲ್ಲಿ ವೈದ್ಯಕೀಯ ಕಾಲೇಜನ್ನೂ ತೆರೆಯಲಾಗಿದ್ದು, ಅದಕ್ಕೆ ಸುಹೇಲ್‌ದೇವ್ ಅವರ ಹೆಸರನ್ನೇ ಇರಿಸಲಾಗಿದೆ. ಮಹಾರಾಜ ಸುಹುಲೇದೇವ್‌ರ ಹೆಸರಿನಲ್ಲಿ ವಿರೋಧ ಪಕ್ಷಗಳು ಏನು ಮಾಡಿವೆ ಎಂದು ಯೋಗಿ ಪ್ರಶ್ನಿಸಿದರು.
Will Conduct Air Raids If Taliban Attacks India says Uttar Pradesh CM Yogi Adityanath
ಇದನ್ನೂ ಓದಿ: ರೈತರ ಹತ್ಯೆ ವಿರೋಧಿಸಿ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ- ಬಿಜೆಪಿ ವಿರುದ್ಧ ಉಕ್ಕಿದ ಜನಾಂದೋಳನ ಹೋರಾಟ
ಇದನ್ನೂ ಓದಿ: Modi: ಡಬಲ್ ಇಂಜಿನ್ ಸರ್ಕಾರದಿಂದ ಅಭಿವೃದ್ಧಿ ಕಾರ್ಯವೆಂದ ಪ್ರಧಾನಿ ಮೋದಿ
Discussion about this post