ಸೊಳ್ಳೆ ಕಡಿತದ ಮೂಲಕ ಹರಡುವ ಡೆಂಗ್ಯೂ ಸೋಂಕು ಪ್ರಕರಣಗಳು ದೇಶದಾದ್ಯಂತ ಕಳೆದ ಕೆಲವು ದಿನಗಳಿಂದ ತೀವ್ರವಾಗಿ ಏರಿಕೆಯಾಗುತ್ತಿವೆ.
ಸಾಮಾನ್ಯವಾಗಿ ಸೋಂಕು ತಗಲಿದ ಆರರಿಂದ ಏಳು ದಿನಗಳ ಬಳಿಕ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ತೀವ್ರ ಜ್ವರ, ತಲೆನೋವು, ಗಂಟು ನೋವು, ಕಣ್ಣುಗಳಲ್ಲಿ ನೋವು, ವಾಂತಿ ಇತ್ಯಾದಿಗಳು ಡೆಂಗ್ಯೂ ಸೋಂಕಿನ ಪ್ರಮುಖ ಲಕ್ಷಣಗಳಾಗಿವೆ. ದೇಶದಾದ್ಯಂತ ಡೆಂಗ್ಯೂ ಪ್ರಕರಣಗಳು ಏರಿಕೆಯಾಗುತ್ತಿರುವ ಈ ಸಂದರ್ಭದಲ್ಲಿ ಸೋಂಕಿನಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಏನೇನು ಮಾಡಬಹುದು? ಇಲ್ಲಿವೆ ಕೆಲವು ಟಿಪ್ಸ್;
· ಸಮರ್ಪಕವಾಗಿ ತ್ಯಾಜ್ಯ ನಿರ್ವಹಣೆ ಮಾಡಬೇಕು. ಇಲ್ಲವಾದಲ್ಲಿ ಮನೆ ಹಾಗೂ ಸುತ್ತಲ ಪ್ರದೇಶಗಳಲ್ಲಿ ಬಿದ್ದಿರುವ ತ್ಯಾಜ್ಯಗಳಲ್ಲಿ ನೀರು ನಿಂತು ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗಬಹುದು.
· ಮನೆಯ ಗಾರ್ಡನ್ ಅಥವಾ ತಾರಸಿಯ ಮೇಲಿರುವ ಎಲ್ಲ ಪ್ರದೇಶಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಎಲ್ಲಿಯೂ ನೀರು ತುಂಬಿಕೊಳ್ಳದಂತೆ ಗಮನಹರಿಸಬೇಕು.
· ನೀರಿನ ಟ್ಯಾಂಕ್ಗಳನ್ನು ಆಗಾಗ ಸ್ವಚ್ಛಗೊಳಿಸುತ್ತಿರಬೇಕು.
· ಸೊಳ್ಳೆ ಕಡಿಯದಂತೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕು.
· ಸೊಳ್ಳೆ ಪರದೆ, ಸೊಳ್ಳೆ ನಿವಾರಕ ಔಷಧ ಇತ್ಯಾದಿಗಳನ್ನು ಬಳಸಿಕೊಂಡು ಸೊಳ್ಳೆಗಳಿಂದ ರಕ್ಷಣೆ ಪಡೆಯಬೇಕು.
· ಸೊಳ್ಳೆಗಳು ಹೆಚ್ಚಿರುವ ಪ್ರದೇಶಗಳಲ್ಲಿ ಮೈತುಂಬಾ ಬಟ್ಟೆ ಧರಿಸುವುದು ಒಳ್ಳೆಯದು.
· ಡೆಂಗ್ಯೂ ಸೋಂಕಿತರು ಹೆಚ್ಚಿರುವ ಪ್ರದೇಶಗಳಿಗೆ ವಿನಾಕಾರಣ ಪ್ರಯಾಣ ಮಾಡದಿರುವುದು ಒಳ್ಳೆಯದು.
ಡೆಂಗ್ಯೂ ಜ್ವರದ ಸಮಸ್ಯೆಗಳು…
ಡೆಂಗ್ಯೂ ಜ್ವರ ತೀವ್ರಗೊಂಡರೆ ಸೋಂಕಿತರ ದುಗ್ಧರಸ ಗ್ರಂಥಿಗೆ ಹಾನಿಯಾಗುವ ಸಾಧ್ಯತೆ ಇದೆ. ಚರ್ಮ ಹಾಗೂ ಶರೀರದ ಒಳಾಂಗಗಳಲ್ಲಿ ರಕ್ತಸ್ರಾವವಾಗುವ, ಆಯಾಸ ಹಾಗೂ ಚಡಪಡಿಕೆ ಸಾಧ್ಯತೆ ಇದೆ. ಇಂಥ ಸಂದರ್ಭಗಳಲ್ಲಿ ರೋಗಿಗೆ ತುರ್ತು ವೈದ್ಯಕೀಯ ನೆರವು ಅಗತ್ಯ.
ವೈದ್ಯಕೀಯ ಪರಿಣತರ ಅಭಿಪ್ರಾಯಗಳನ್ನು ಆಧರಿಸಿ ಈ ಸಾಮಾನ್ಯ ಸಲಹೆಗಳನ್ನು ನೀಡಲಾಗಿದೆ. ಹೆಚ್ಚಿನ ಮಾಹಿತಿಗೆ ಹಾಗೂ ತುರ್ತು ಸಂದರ್ಭಗಳಲ್ಲಿ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.
ಇನ್ನಷ್ಟು…
Heart attack: ಯುವ ಜನರಲ್ಲಿ ಹೆಚ್ಚುತ್ತಿರುವ ಹೃದಯಾಘಾತ ತಡೆಯುವುದು ಹೇಗೆ ?
Discussion about this post