ಚಿಕ್ಕಮಗಳೂರು: ಚುಮು ಚುಮು ಚಳಿಯ ನಡುವೆಯೂ ಜಿಲ್ಲೆಯ ಇತಿಹಾಸ ಪ್ರಸಿದ್ದಿ ಹೊಂದಿರುವ ಬಿಂಡಿಗ ಮಲ್ಲೇನಹಳ್ಳಿ ದೇವಿರಮ್ಮನ ಬೆಟ್ಟಕ್ಕೆ ಸಾವಿರಾರು ಭಕ್ತರು ಭೇಟಿ ನೀಡಿ ತಾಯಿಯ ದರ್ಶನ ಪಡೆದರು. ಕೋವಿಡ್ ಹರಡುವ ಕಾರಣದಿಂದಾಗಿ ಜಿಲ್ಲಾಡಳಿತ ಬೇರೆ ಜಿಲ್ಲೆಗಳಿಂದ ಆಗಮಿಸುವ ಪ್ರವಾಸಿಗರಿಗೆ ನಿರ್ಬಂಧ ವಿಧಿಸಿತ್ತು. ಈ ಹಿನ್ನಲೆ ಕಳೆದ ವರ್ಷ ಕ್ಕಿಂತ ಈ ಬಾರಿ ದೇವಿರಮ್ಮನ ಬೆಟ್ಟ ಏರುವ ಭಕ್ತರ ಸಂಖ್ಯೆ ತುಸು ಕಡಿಮೆಯಾಗಿತ್ತು.
ಜಿಲ್ಲೆಯಾದ್ಯಂತ ಸಾವಿರಾರು ಭಕ್ತರು, ಗ್ರಾಮಸ್ಥರು, ಯುವಕರು ಮುಂಜಾನೆಯಿಂದಲೇ ಬೆಟ್ಟ ಹತ್ತುವ ಮೂಲಕ ದೇವಿಯ ದರ್ಶನ ಪಡೆದರು. ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯಿಂದ ಆಯ್ದ ಕಡೆಗಳಲ್ಲಿ ಚೆಕ್ಪೋಸ್ಟ್ ಗಳನ್ನು ತೆರೆದಿತ್ತು. ಆರೋಗ್ಯ ಇಲಾಖೆ ಬೆಟ್ಟ ಏರುವ ಭಕ್ತಾಧಿಗಳನ್ನು ಕೆಲವೆಡೆ ಕೋವಿಡ್ ತಪಾಸಣೆ ನಡೆಸಿತು. ಅಗ್ನಿಶಾಮಕ ದಳ ಒಳಗೊಂಡಂತೆ ಪೊಲೀಸ್ ಇಲಾಖೆ ಯಾವುದೇ ಅವಘಡಗಳು ಆಗದಂತೆ ಬಿಗಿ ಭದ್ರತೆ ಒದಗಿಸಿತ್ತು.
ತಾಯಿ ದೇವಿರಮ್ಮನ ದರ್ಶನ ಪಡೆದ ಬಳಿಕ ಶಾಸಕ ಸಿ.ಟಿ ರವಿ ಸುದ್ದಿಗಾರರೊಂದಿಗೆ ಮಾತನಾಡಿ ದೇಶ ಶಕ್ತಿಶಾಲಿಯಾಗಲಿ, ಹಿಂದೂಗಳ ಮೇಲಾಗುತ್ತಿರುವ ಪ್ರಹಾರಗಳು ಕಡಿಮೆಯಾಗಲಿ, ಇಡೀ ದೇಶವನ್ನು ಒಂದು ಕುಟುಂಬವಂತೆ ಬಲಪಡಿಸಲಿ ಎಂದು ದೇವಿಯಲ್ಲಿ ಪ್ರಾರ್ಥಿಸಿರುವುದಾಗಿ ತಿಳಿಸಿದರು.
ಕೋವಿಡ್ ಕಾರಣದಿಂದಾಗಿ ಜಿಲ್ಲಾಡಳಿತ ಹೆಚ್ಚು ಪ್ರವಾಸಿಗರು ಆಗಮಿಸದಂತೆ ನಿರ್ಬಂಧ ವಿಧಿಸಿದೆ ಆದರೆ ಯಾವುದೇ ಭಕ್ತಾಧಿಗಳ ಭಾವ ನೆಗೆ ಧಕ್ಕೆ ಮಾಡುವ ಉದ್ದೇಶ ಇಲ್ಲ. ಮುಂದಿನ ವರ್ಷಗಳಲ್ಲಿ ಎಲ್ಲರೂ ಬೆಟ್ಟ ಹತ್ತುವ ಮೂಲಕ ದೇವಿಯ ದರ್ಶನ ಪಡೆಯುವಂತಾಗಲಿ ಎಂದು ಆಶಿಸಿ ದರು. ನಾನು ಚಿಕ್ಕಂದಿನಿಂದ ನಿರಂತರವಾಗಿ ಬೆಟ್ಟ ಹತ್ತುವ ಮೂಲಕ ದೇವಿಯ ದರ್ಶನ ಪಡೆಯುತ್ತಿರುವುದಾಗಿ ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಹೆಚ್.ಅಕ್ಷಯ್ ಮಾತನಾಡಿ ದೇವಿರಮ್ಮ ಬೆಟ್ಟ ಏರುತ್ತಿರುವುದು ಮೊದಲ ಬಾರಿ ಹಾಗಾಗಿ ಖುಷಿಯನ್ನು ನೀಡಿದೆ. ಜಿಲ್ಲಾಡಳಿತ ಆರೋಗ್ಯ ಇಲಾಖೆ, ಅಗ್ನಿಶಾಮಕ ದಳ, ಪೊಲೀಸ್ ಒಳಗೊಂಡಂತೆ ಎಲ್ಲಾ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸುವ ಮೂಲಕ ಭಕ್ತಾಧಿಗಳ ಒಳಿತಿಗೆ ಅಗತ್ಯ ಮುಂಜಾಗ್ರತ ಕ್ರಮಗಳನ್ನು ಕೈಗೊಂಡಿದೆ ಎಂದು ತಿಳಿಸಿದರು.
ದೇವಿರಮ್ಮ ದೇವಸ್ಥಾನ ಸಮಿತಿ ಅಧ್ಯಕ್ಷ ಕುಲಶೇಖರ್ ಮಾತನಾಡಿ ಎಲ್ಲೆಡೆ ಕೋವಿಡ್ ಸೋಂಕು ಇರುವ ಭೀತಿಯ ಹಿನ್ನಲೆ ಜಿಲ್ಲಾಡಳಿತ ಹಾಗೂ ದೇವಸ್ಥಾನ ಸಮಿತಿ ಜಿಲ್ಲೆ ಹಾಗೂ ಗ್ರಾಮದ ಸುತ್ತಮುತ್ತಲಿನ ಗ್ರಾಮಸ್ಥರು ಭಕ್ತಾಧಿಗಳಿಗೆ ಮಾತ್ರ ಬೆಟ್ಟ ಏರಲು ಅವಕಾಶ ನೀಡಿತ್ತು. ಆದ ಕಾರಣ ಈ ಬಾರಿ ಭಕ್ತರ ಸಂಖ್ಯೆ ತುಸು ವಿರಳವಾಗಿದೆ. ಭಕ್ತಿ ಪೂರ್ವಕವಾಗಿ ದೇವಿಗೆ ಹರಕೆ ಹೊತ್ತವರು, ಕಡಿದಾದ ಕಲ್ಲು ಮುಳ್ಳುಗಳ ದಾರಿಯನ್ನು ಲೆಕ್ಕಿಸದೆ ಬೆಟ್ಟಹತ್ತಿದರು. ಈ ಮೂಲಕ ತಾಯಿ ದರ್ಶನ ಪಡೆದು ಪುನೀತರಾದರು. ಜಿಲ್ಲಾಡಳಿತ ಹಾಗೂ ದೇವಸ್ಥಾನ ಸಮಿತಿಯ ಮನವಿಗೆ ಭಕ್ತರು ಹಾಗೂ ಜನತೆ ಸ್ಪಂದಿಸಿದ್ದಾರೆ. ಮುಂದಿನ ವರ್ಷದಲ್ಲಿ ಯಾವುದೇ ರೋಗ ರುಜಿನಗಳು ಇಲ್ಲದೇ ಕೋವಿಡ್ ಮುಕ್ತವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಬರುವಂತಾಗಲಿ ಎಂದರು ಆಶಿಸಿದರು.
Deviramma deepotsva: ಶ್ರೀ ದೇವಿರಮ್ಮನವರ ದೀಪೋತ್ಸವ ಸರಳ ಆಚರಣೆಗೆ ಜಿಲ್ಲಾಡಳಿತ ನಿರ್ಧಾರ

























Discussion about this post