ಸ್ತನದ ಕ್ಯಾನ್ಸರ್ ಮಹಿಳೆಯರನ್ನು ಕಾಡುವ ಮಾರಣಾಂತಿಕ ರೋಗ. ಸೂಕ್ತ ಆಹಾರ ಕ್ರಮದಿಂದ ಇದು ತಗುಲುವ ಅಪಾಯವನ್ನು ಕಡಿಮೆ ಮಾಡಬಹುದು. ಆಹಾರವು ಮನುಷ್ಯನಿಗೆ ಶಕ್ತಿಯ ಮೂಲ ಅಷ್ಟೆಅಲ್ಲ. ಆರೋಗ್ಯವನ್ನು ಕಾಪಾಡುವ ಸಂಜೀವನಿ ಕೂಡ ಹೌದು. ಮಾರಣಾಂತಿಕ ಕಾಯಿಲೆಗಳಿಂದ ದೂರ ಇಡುವ ಆಹಾರ ಕ್ರಮಗಳು ಆಯುರ್ವೇದದಲ್ಲಿ, ದೇಶೀಯ ವೈದ್ಯಪದ್ಧತಿಯಲ್ಲಿ ದೊರೆಯುತ್ತವೆ. ಈಗ ಇಂಥದನ್ನು ಜಾಗತಿಕವಾಗಿಯೂ ಒಪ್ಪಲಾಗಿದೆ.
ಮಹಿಳೆಯರನ್ನು ಜೀವಂತ ಹಿಂಡುವ ಸ್ತನದ ಕ್ಯಾನ್ಸರ್ ತಗುಲುವ ಸಾಧ್ಯತೆಯನ್ನು ಕಡಿಮೆ ಮಾಡುವ ಆಹಾರ ಕ್ರಮದ ಬಗ್ಗೆ ಕೆಲವು ಸಲಹೆ ಇಲ್ಲಿದೆ. ಈ ಆಹಾರಗಳು ಸ್ತನದ ಕ್ಯಾನ್ಸರ್ಗೆ ಕಾರಣವಾಗುವ ಹಾಮರ್ಮೋನ್ ಈಸ್ಟ್ರೋಜನ್ ಮತ್ತು ರಕ್ತನಾಳಗಳಲ್ಲಿ ಗೆಡ್ಡೆಗಳಾಗುವಂತೆ ಮಾಡುವ ಆಂಜಿಯೋಜೆನೆಸಿಸ್ನನ್ನು ಹತೋಟಿಯಲ್ಲಿ ಇರಿಸುತ್ತದೆ.
ನಾರಿನಂಶ ಹೆಚ್ಚಿರುವ ಆಹಾರವನ್ನು ಹೆಚ್ಚಿಗೆ ಬಳಸಬೇಕು. ಇದರಿಂದ ರಕ್ತದಲ್ಲಿ ಸಕ್ಕರೆ ಅಂಶವನ್ನು ನಿಯಂತ್ರಿಸುತ್ತದೆ. ಆರೋಗ್ಯಪೂರ್ಣ ಹೃದಯಕ್ಕೂ ಸಹಕಾರಿ. ರಕ್ತನಾಳಗಳನ್ನು ಸ್ವಚ್ಛವಾಗಿ ಇರಿಸುತ್ತದೆ. ಆಹಾರ ಪಚನ ಕ್ರಿಯೆ ಸಲೀಸು. ದೇಹದಲ್ಲಿ ಈ ಪ್ರಕ್ರಿಯೆಗಳು ಕ್ಲಿಷ್ಟವಾದರೆ ಸ್ತನದ ಕ್ಯಾನ್ಸರ್ ಸೇರಿದಂತೆ ಅನೇಕ ರೋಗಗಳಿಗೆ ಮೂಲವಾಗುತ್ತದೆ. ಆದ್ದರಿಂದ ರೋಗ ಬಾರದಂತೆ ಮೂಲದಲ್ಲೇ ತಡೆಯುವುದು ಉತ್ತಮ.
ನಾರಿನಂಶ ಇರುವ ಆಹಾರಗಳು ಇಂತಿವೆ: ಕಿಡ್ನಿ ಬೀನ್ಸ್, ಕಡಲೆ, ಲಿಮಾ ಬೀನ್ಸ್, ಬಟಾಣಿ, ಅವರೆಕಾಳು, ಸೋಯಾಬೀನ್, ಹಸಿರು ಎಲೆಯ ತರಕಾರಿಗಳಾದ ಕೋಸು, ಹುರುಳಿ ಕಾಯಿ, ಹೀರೆಕಾಯಿ, ಬ್ರಸಲ್ಸ್, ಕ್ರೊಸಿಫೆರಸ್, ಹಣ್ಣುಗಳಲ್ಲಿ ಅಂಜೂರ, ಬಾಳೆಹಣ್ಣು, ಒಣದ್ರಾಕ್ಷಿ, ಬಾಳೆಹಣ್ಣು, ಸೇಬು, ಕಿತ್ತಲೆ, ಮೊಸಂಬಿ, ಪೇರಳೆ, ಏಪ್ರಿಕಾಟ್. ಗೋಧಿ, ಮಸೂರ, ಸಿರಿಧಾನ್ಯಗಳು.
ನಿತ್ಯ 30 ಗ್ರಾಂನಷ್ಟಾದರೂ ನಾರಿನಂಶ ತೆಗೆದುಕೊಂಡರೆ ಸ್ತನದ ಕ್ಯಾನ್ಸರ್ ತಗುಲುವ ರಿಸ್ಕ್ ಶೇ. 40 ಇಳಿಕೆಯಾಗುತ್ತದೆ ಎಂಬುದು ತಜ್ಞರ ಅಭಿಪ್ರಾಯ. 30 ಗ್ರಾಂ ನಾರಿನಂಶ ಆಹಾರಕ್ಕಾಗಿ ಒಂದು ಬಟಲು ಬೀನ್ಸ್, ಮಸೂರ ಧಾನ್ಯ, ಬಟಾಣಿಯ ಆಹಾರ 15 ಗ್ರಾಂ, 13 ಗ್ರಾಂನಷ್ಟು ಅಂದರೆ ಮಧ್ಯಮ ಗಾತ್ರದ ಅವಕಾಡೊ (ಬೆಣ್ಣೆ ಹಣ್ಣು), ಒಂದು ಬಟ್ಟಲಿನಷ್ಟು ಬೆರ್ರಿ ಮತ್ತು ಬಾರ್ಕೊಲಿ ತೆಗೆದುಕೊಳ್ಳುವುದು ಒಳಿತು.
Foods That Mitigate the Risk of Breast Cancer
ಇದನ್ನೂ ಓದಿ: ಆರೋಗ್ಯಕರ ಜೀರ್ಣಕ್ರಿಯೆ ನಿಮ್ಮದಾಗಬೇಕೇ? ಹಾಗಾದೆರೆ ಇಲ್ಲಿವೆ ಆಯುರ್ವೇದದ 9 ಸುಲಭೋಪಾಯಗಳು
Discussion about this post