ಕಾಬೂಲ್- ಪ್ರಾಂತೀಯ ಗವರ್ನರ್, ಪೊಲೀಸ್ ಮುಖ್ಯಸ್ಥರಂಥ ಹುದ್ದೆಗಳನ್ನು ಒಳಗೊಂಡಂತೆ ಆಡಳಿತದ ಪ್ರಮುಖ ಸ್ಥಾನಗಳಿಗೆ ತಾಲಿಬಾನ್ ತನ್ನ 44 ಸದಸ್ಯರನ್ನು ಭಾನುವಾರ ನೇಮಕ ಮಾಡಿದೆ. ದೇಶದ ಭದ್ರತೆ ಹಾಗೂ ಆರ್ಥಿಕ ಸ್ಥಿತಿಗತಿಯನ್ನು ಸುಧಾರಿಸುವ ನಿಟ್ಟಿನಲ್ಲಿ ಈ ನಿರ್ಧಾರ ಪ್ರಮುಖ ಪಾತ್ರ ವಹಿಸಲಿದೆ. ಸೆಪ್ಟೆಂಬರ್ ನಲ್ಲಿ ತಾಲಿಬಾನ್ ಸಂಪುಟ ಅಸ್ತಿತ್ವಕ್ಕೆ ಬಂದ ನಂತರದ ಅತಿ ದೊಡ್ಡ ನೇಮಕಾತಿಯ ಘೋಷಣೆ ಇದಾಗಿದೆ.
ತಾಲಿಬಾನ್ ಸಂಘಟನೆ ಹೊಸ ಸದಸ್ಯರ ಹೆಸರು, ಹುದ್ದೆಗಳು, ಕಾರ್ಯವೈಖರಿಯ ಪಟ್ಟಿಯನ್ನು ಭಾನುವಾರ ಬಿಡುಗಡೆ ಮಾಡಿದೆ. ಅದರಲ್ಲಿ ಕಾಬೂಲ್ ಗೌರ್ನರ್ ಹುದ್ದೆಗೆ ಖ್ವಾರಿ ಬರ್ಯಾಲ್ ಹಾಗೂ ಪೊಲೀಸ್ ಮುಖ್ಯಸ್ಥ ಹುದ್ದೆಗೆ ವಲಿ ಜಾನ್ ಹಮಾಜಾ ಅವರನ್ನು ಆಯ್ಕೆ ಮಾಡಿರುವ ಮಹತ್ವದ ವಿವರಗಳು ಪಟ್ಟಿಯಲ್ಲಿದೆ.
ಹಿಂದಿನ ಸರ್ಕಾರ ಕಾಬೂಲ್ ನ ಭದ್ರತಾ ಮುಖ್ಯಸ್ಥ ಸ್ಥಾನಕ್ಕೆ ನೇಮಿಸಿದ್ದ ಮಾವ್ಲಾವಿ ಹಮಾದುಲ್ಲಾ ಮುಖಿಲಸ್ ಅವರು ಕಾಬೂಲ್ ಮಿಲಿಟರಿ ಆಸ್ಪತ್ರೆಯಲ್ಲಿ ನಡೆದ ದಾಳಿಯಲ್ಲಿ ಮೃತಪಟ್ಟರು.
ತಾಲಿಬಾನ್ ಪಡೆಗಳು ನಡೆಸಿದ ಸುದೀರ್ಘ ಯುದ್ಧದ ನಂತರ 2021ರ ಆಗಸ್ಟ್ 15ರಂದು ದೇಶವನ್ನು ಹಿಡಿತಕ್ಕೆ ತೆಗೆದುಕೊಂಡವು. ಆದರೂ, ತಾನು ನೀಡಿದ್ದ ವಾಗ್ದಾನವನ್ನು ಜಾರಿಗೊಳಿಸಲು ಹಲವು ಏರುಪೇರುಗಳನ್ನು ಎದುರಿಸಬೇಕಾಯಿತು. ದೇಶದಲ್ಲಿ ಐಎಸ್ಐ ಸಂಘಟನೆ ನಡೆಸಿದ ಸರಣಿ ದಾಳಿಗಳಿಂದ ದೇಶದ ಆರ್ಥಿಕ ಪರಿಸ್ಥಿತಿ ಕುಸಿದು ಹೋಯಿತು.
ಇತರೆ ಮಹಿಳಾ, ಹಿಂದುಳಿದ ರಾಜಕೀಯ ನಾಯಕರ, ಪಕ್ಷದ ಜೊತೆ ಕೈಜೋಡಿಸಿ, ಆಫ್ಗಾನಿಸ್ಥಾನದಲ್ಲಿ ಒಂದು ಸ್ಥಿರ ಸರ್ಕಾರವನ್ನು ರಚಿಸುವಂತೆ ಅಂತಾರಾಷ್ಟ್ರೀಯ ಮಟ್ಟದಿಂದ ಒತ್ತಡ ಬರುತ್ತಿದೆ. ಆದರೆ, ಯಾವುದೂ ಕೂಡ ಸಾಂಸ್ಥಿಕ ರೂಪ ಪಡೆದಿಲ್ಲ ಎಂದು ತಾಲಿಬಾನ್ ಹೇಳಿಕೊಂಡಿದೆ.
ಇದನ್ನೂ ಓದಿ: ತಾಲಿಬಾನ್ ಎದುರು ಸಿಡಿದೆದ್ದ ಮತ್ತೊಬ್ಬಳು ಮಲಾಲಾ
Discussion about this post