ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ವೀಕೆಂಡ್ ವಿಥ್ ರಮೇಶ್ ಮತ್ತೆ ಶುರುವಾಗುತ್ತಾ ಅನ್ನೋ ಕುತೂಹಲ ಮತ್ತಷ್ಟು ಹೆಚ್ಚಿದೆ. ಅದು ಹೇಗಿರುತ್ತದೆ ಅನ್ನೋದರ ಸುಳಿವು ನೀಡಿದ್ದಾರೆ ನಟ ರಮೇಶ್. ಅವರನ್ನು ಮನೆ ಮನೆಗೂ ತಲುಪಿಸಿದ ಈ ಕಾರ್ಯಕ್ರಮದ ಬಗ್ಗೆ ರಮೇಶ್ ಅರವಿಂದ್ ಅವರಿಗೆ ಹೆಮ್ಮೆ ಇದೆ. ಹೋದ ಬಂದ ಕಡೆಯಲ್ಲ ಮತ್ತೆ ವೀಕೆಂಡ್ ವಿಥ್ ರಮೇಶ್ ಯಾವಾಗ ಶುರು ಮಾಡ್ತೀರ ಅಂತ ಅಭಿಮಾನಿಗಳು ಕೇಳ್ತಾರಂತೆ.
ಹಾಗೆ ನೋಡಿದರೆ ಈಗಾಗಲೇ ವಿಕೆಂಡ್ ವಿಥ್ ರಮೇಶ್ ಆರಂಭಗೊಳ್ಳಬೇಕಿತ್ತು. ಶುರುವಾಗುತ್ತದೆ ಅನ್ನೋದು ಸುದ್ದಿಯಾಗಿ ಓಡಾಡುತ್ತಲೇ ಇದೆ. ಈ ಬಗ್ಗೆ ನಟ ರಮೇಶ್ ಹೇಳೋದು ಏನೆಂದರೆ,- ಈ ಕಾರ್ಯಕ್ರಮದ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇರ್ತವೆ. ಈ ಶೋ ಅನ್ನು ಮತ್ತಷ್ಟು ಚೆನ್ನಾಗಿ ಮಾಡೋದು ಹೇಗೆ ಎಂಬುದರ ಬಗ್ಗೆ ಚಿಂತನೆ ನಡೆಯುತ್ತಲೇ ಇದೆ. ಈಗಿನ ಹೊಸ ಆಲೋಚನೆ ಏನಪ್ಪ ಅಂದ್ರೆ, ಕಿರುತೆರೆ ಬಿಟ್ಟು, ಇದನ್ನು ಓಟಿಟಿಯಲ್ಲಿ ಪ್ರಸಾರ ಮಾಡಿದರೆ ಹೇಗೇ ಅನ್ನೋದು. ಇಷ್ಟೇ ಅಲ್ಲ, ವೀಕೆಂಡ್ ವಿಥ್ ರಮೇಶ್ ಅನ್ನು ಇಂಗ್ಲೀಷ್ ಭಾಷೆಯಲ್ಲಿ ಮಾಡಿದರೆ ಚೆನ್ನಾಗಿರುತ್ತಾ, ಆಗ ಬೇರೆ ಕಡೆಯಿಂದ ಸೆಲೆಬ್ರೆಟಿಗಳನ್ನು ಕರೆಸಬಹುದಲ್ಲಾ ಅನ್ನೋ ಸಾಧ್ಯತೆಗಳ ಬಗ್ಗೆಯೂ ಚಿಂತನೆ ನಡೆಸಿದ್ದೇವೆ. ಯಾವುದು ಇನ್ನು ತೀರ್ಮಾನ ಆಗಿಲ್ಲ. ಎಲ್ಲವೂ ಯೋಚನೆ ಹಂತದಲ್ಲಿದೆ ಅಂತಾರೆ ರಮೇಶ್.
ಅಂದರೆ, ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮ ಮತ್ತೆ ಪ್ರಸಾರವಾಗುವುದು ಸತ್ಯವಾದರೂ, ಅದೊಂದು ವಿಭಿನ್ನ ಕಾರ್ಯಕ್ರಮವಾಗಿ ಮೂಡಿ ಬರುವುದರಲ್ಲಿ ಅನುಮಾನವಿಲ್ಲ ಎನಿಸುತ್ತದೆ.
ಇದನ್ನೂ ಓದಿ: ಡಿಸೆಂಬರ್ 10 ರಿಂದ 17 ರವರೆಗೆ ಕೇರಳ ಅಂತಾರಾಷ್ಟ್ರೀಯ ಸಿನಿಮೋತ್ಸವ
Discussion about this post