ಹೊಸದಿಲ್ಲಿ: ಬೆಂಗಳೂರು ಭಾರತೀಯ ವಿಜ್ಞಾನ ಸಂಸ್ಥೆಯ ಡಾ. ಶ್ರೀಧರನ್ ದೇವರಾಜನ್ ಮತ್ತು ಡಾ. ಮಾಯಾಂಕ್ ಶ್ರೀವಾಸ್ತವ ಸಹಿತ ದೇಶದಾದ್ಯಂತ ವಿವಿಧ ವಿಜ್ಞಾನ ಸಂಸ್ಥೆಗಳ 17 ವಿಜ್ಞಾನಿಗಳು ತಮ್ಮ ನವೀನ ಸಂಶೋಧನಾ ಕಲ್ಪನೆಗಳು ಮತ್ತು ವಿವಿಧ ವಿಭಾಗಗಳಲ್ಲಿ ಪ್ರಭಾವವನ್ನು ಉಂಟುಮಾಡುವ ಸಾಮರ್ಥ್ಯಕ್ಕಾಗಿ ಸ್ವರ್ಣಜಯಂತಿ ಫೆಲೋಶಿಪ್ ಗಳನ್ನು ಪಡೆದಿದ್ದಾರೆ.
ಪ್ರಶಸ್ತಿಗೆ ಆಯ್ಕೆಯಾದ ವಿಜ್ಞಾನಿಗಳು ಸಂಶೋಧನಾ ಯೋಜನೆಯಲ್ಲಿ ಅನುಮೋದಿಸಿದಂತೆ, ವೆಚ್ಚದ ವಿಷಯದಲ್ಲಿ ಸ್ವತಂತ್ರ ಮತ್ತು ಹೊಂದಾಣಿಕೆಯೊಂದಿಗೆ ಅನಿಯಂತ್ರಿತ ಸಂಶೋಧನೆಯನ್ನು ಮುಂದುವರಿಸಲು ಅನುಮತಿಸಲಾಗುತ್ತದೆ. ದೃಢ ಟ್ರ್ಯಾಕ್ ರೆಕಾರ್ಡ್ ಹೊಂದಿರುವ ಮತ್ತು ಕಠಿಣವಾದ ಮೂರು ಹಂತಗಳ ಪರಿಶೀಲನಾ ಪ್ರಕ್ರಿಯೆಯ ಮೂಲಕ ಆಯ್ಕೆಯಾದ ವಿಜ್ಞಾನಿಗಳು ವಿಜ್ಞಾನ ಮತ್ತು ತಂತ್ರಜ್ಞಾನದ ಚೌಕಟ್ಟಿನಲ್ಲಿ ಮೂಲಭೂತ ಸಂಶೋಧನೆಯನ್ನು ಮುಂದುವರಿಸುತ್ತಾರೆ.
ಭಾರತದ ಸ್ವಾತಂತ್ರ್ಯದ 50ನೇ ವರ್ಷದ ನೆನಪಿಗಾಗಿ ಸ್ವರ್ಣಜಯಂತಿ ಫೆಲೋಶಿಪ್ ಯೋಜನೆಯನ್ನು ಭಾರತ ಸರಕಾರವು ಸ್ಥಾಪಿಸಿದೆ. ಈ ಯೋಜನೆಯಡಿಯಲ್ಲಿ ಪ್ರಶಸ್ತಿ ಪುರಸ್ಕೃತರಿಗೆ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಮೂಲಕ ಐದು ವರ್ಷಗಳ ಕಾಲ ಪ್ರತೀ ತಿಂಗಳು 25000 ರೂ.ಗಳ ಫೆಲೋಶಿಪ್ ನೀಡಲಾಗುತ್ತದೆ. ಸಂಶೋಧನೆಯನ್ನು ನಿರ್ವಹಿಸಲು ಎಲ್ಲಾ ಅಗತ್ಯತೆಗಳಿಗೆ ಹೆಚ್ಚುವರಿಯಾಗಿ ಐದು ವರ್ಷಗಳಲ್ಲಿ 5 ಲಕ್ಷ ರೂ. ಸಂಶೋಧನಾ ಅನುದಾನ ನೀಡುವ ಮೂಲಕ ಅವರನ್ನು ಬೆಂಬಲಿಸುತ್ತದೆ. ಅವರು ತಮ್ಮ ಮಾತೃ ಸಂಸ್ಥೆಯಿಂದ ಪಡೆಯುವ ವೇತನದ ಜೊತೆಗೆ ಫೆಲೋಶಿಪ್ ಅನ್ನು ಒದಗಿಸಲಾಗುತ್ತದೆ.
ಇದನ್ನೂ ಓದಿ: e Paper – November 9, 2021
ಇದನ್ನೂ ಓದಿ: Weekend with Ramesh: ಓಟಿಟಿಯಲ್ಲಿ ಬರುತ್ತಾ ವೀಕೆಂಡ್ ವಿಥ್ ರಮೇಶ್?
Swarna Jayanti Fellowship

























Discussion about this post