ನವದೆಹಲಿ: ಆನ್ಲೈನ್ ಶಾಪಿಂಗ್ ವೇಳೆ, ಕ್ರೆಡಿಕ್ ಅಥವಾ ಡೆಬಿಟ್ ಕಾರ್ಡ್ಗಳ ಮೂಲಕ ಹಣ ಪಾವತಿ ಮಾಡಿ ಮೊಬೈಲ್, ಫ್ರಿಜ್, ಟಿವಿ ಇತ್ಯಾದಿ ವಸ್ತುಗಳನ್ನು ಖರೀದಿಸುವಾಗ ಕಂತುಗಳ ಮೂಲಕ (ಇಎಂಐ) ಪಾವತಿ ಮಾಡುವುದು ಸಾಮಾನ್ಯ. ಆದರೆ, ಇನ್ನು ಮುಂದೆ ಇದೇ ರೀತಿ ವಿಮಾನ ಪ್ರಯಾಣದ ಟಿಕೆಟ್ ದರವನ್ನೂ ಇಎಂಐ ಮೂಲಕ ಪಾವತಿಸಬಹುದು!
ಹೌದು, ವಿಮಾನ ಪ್ರಯಾಣದ ಟಿಕೆಟ್ ಮೊತ್ತವನ್ನು ಇಎಂಐ ಮೂಲಕ ಪಾವತಿಸುವ ಹೊಸ ಆಫರ್ ಅನ್ನು ವಿಮಾನಯಾನ ಸಂಸ್ಥೆ ಸ್ಪೈಸ್ ಜೆಟ್ ಘೋಷಿಸಿದೆ. ಹೊಸ ಯೋಜನೆಯಲ್ಲಿ ಉಲ್ಲೇಖಿಸಿರುವ ಪ್ರಕಾರ, ಮೂರು ಅಥವಾ 12 ತಿಂಗಳ ಕಂತುಗಳಲ್ಲಿ ಮೊತ್ತವನ್ನು ಪಾವತಿಸುವ ಅವಕಾಶವಿದೆ.
ಝೀರೋ ಕಾಸ್ಟ್ (ಶೂನ್ಯ ಬಡ್ಡಿ / ಶುಲ್ಕ) ಇಎಂಐ ಆಫರ್ ಇದಾಗಿದೆ. ಈ ಯೋಜನೆಯ ಲಾಭ ಪಡೆಯಲು ಪ್ರಯಾಣಿಕರು ಪಾನ್ ಕಾರ್ಡ್ ಸಂಖ್ಯೆ, ಆಧಾರ್ ಸಂಖ್ಯೆ ಅಥವಾ ಆಧಾರ್ನ ವರ್ಚುವಲ್ ಐಡಿ ನೀಡಬೇಕಾಗುತ್ತದೆ. ಒಂದು ಬಾರಿ ಬಳಸಬಹುದಾದ ಪಾಸ್ವರ್ಡ್ (ಒಟಿಪಿ) ಮೂಲಕ ದೃಢೀಕರಣ ಮಾಡಬೇಕಾಗುತ್ತದೆ.
ಯುಪಿಐ ಐಡಿ ಮೂಲಕ ಇಎಂಐ ಪಾವತಿಸಬಹುದಾಗಿದ್ದು, ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಮಾಹಿತಿ ನೀಡುವ ಅವಶ್ಯಕತೆಯೂ ಇಲ್ಲ ಎಂದು ಸ್ಪೈಸ್ ಜೆಟ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇನ್ನಷ್ಟು ಓದು…
ಬ್ರಿಟನ್ನಲ್ಲಿ ವಾಸ್ತವ್ಯವಿಲ್ಲ ಎಂದ ಅಂಬಾನಿ ಕುಟುಂಬ: 300 ಎಕರೆ ಆಸ್ತಿ ಖರೀದಿಸಿದ್ದೇಕೆ?
Discussion about this post