ಮುಂಬೈ: ಬಾಲಿವುಡ್ ಅಂದ್ರೆ ಸದಾ ಝಗಮಗಿಸೋ ಲೋಕ. ಅದರಲ್ಲೂ ಬಾಲಿವುಡ್ ನಟಿಯರು ಸದಾ ಒಂದಿಲ್ಲೊಂದು ಹೊಸ ಫ್ಯಾಷನ್ ಪ್ರದರ್ಶಿಸುವ ಅಥವಾ ಹೊಸ ವಿನ್ಯಾಸ ಉಡುಪು ಧರಿಸುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳನ್ನು ಸೆಳೆಯುತ್ತಾ ಇರುತ್ತಾರೆ.
ಇದೀಗ ವಿದ್ಯಾ ಬಾಲನ್ ಅವರು ವಿಭಿನ್ನವಾಗಿ ಸೀರೆ ಉಟ್ಟಿರುವ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ಅಂದಹಾಗೆ, ವಿದ್ಯಾ ಅವರು ಸರಳವಾದ ಕಪ್ಪು ರವಿಕೆಯೊಂದಿಗೆ ದುಪ್ಪಟ್ಟಾ ಧರಿಸುವ ಮಾದರಿಯಲ್ಲಿ ಸೀರೆ ಉಟ್ಟಿದ್ದಾರೆ. ಹಣೆಗೆ ಕಪ್ಪು ಬಣ್ಣದ ತಿಲಕ, ಆಕರ್ಷಕ ಕಿವಿಯೋಲೆಗಳು, ದಪ್ಪ ಬಣ್ಣದ ಲಿಪ್ಸ್ಟಿಕ್ ಹಚ್ಚಿಕೊಂಡಿರುವ ವಿದ್ಯಾ ಬಾಲನ್ ಲುಕ್ಗೆ ಅಭಿಮಾನಿಗಳಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ಇದನ್ನೂ ಓದಿ: ನಟಿ ರಾಗಿಣಿ ಫುಲ್ ಬ್ಯುಸಿ; ಸಿನಿ ಪಯಣದಲ್ಲೇ ಭಿನ್ನ ಪಾತ್ರದಲ್ಲಿ ತುಪ್ಪದ ಬೆಡಗಿ
ಅಂದಹಾಗೆ, ಆಧುನಿಕ ಸಂಬಂಧಗಳ ಕುರಿತಾದ ಹಾಸ್ಯ ಮಿಶ್ರಿತ ಸಿನಿಮಾವೊಂದರಲ್ಲಿ ನಟಿಸಲಿರುವುದಾಗಿ ವಿದ್ಯಾ ಬಾಲನ್ ಇನ್ಸ್ಟಾಗ್ರಾಂನಲ್ಲಿ ಪ್ರಕಟಿಸಿದ್ದಾರೆ. ವಿದ್ಯಾ ಜತೆ ಈ ಸಿನಿಮಾದಲ್ಲಿ ಸಹ ನಟ/ನಟಿಯರಾಗಿ ಇಲಿಯಾನಾ, ಪ್ರತೀಕ್ ಗಾಂಧಿ, ಸೆಂಥಿಲ್ ರಾಮಮೂರ್ತಿ ಮತ್ತಿತರರು ನಟಿಸಲಿದ್ದಾರೆ ಎನ್ನಲಾಗಿದೆ.
View this post on Instagram
View this post on Instagram
View this post on Instagram
View this post on Instagram
View this post on Instagram
View this post on Instagram
Discussion about this post