ಗರುಡ ಗಮನ ವೃಷಭ ವಾಹನ ಚಿತ್ರ ಬಹಳ ಸದ್ದು ಮಾಡುತ್ತಿದೆ. ಟೀಸರ್ ಬಿಡುಗಡೆ ನಂತರ ಚಿತ್ರದ ಕುತೂಹಲ ಆಕಾಶದೆತ್ತರ ಏರಿದೆ. ಮುಂದಿನವಾರ, ಅಂದರೆ ನವೆಂಬರ್ 19ರಂದು ಚಿತ್ರ ಬಿಡುಗಡೆಗೆ ಸಿದ್ಧಗೊಂಡಿದೆ. ಹಾಗೆಯೇ, ಚಿತ್ರದ ಬಗ್ಗೆ ಕುತೂಹಲ ಕೂಡ ಮುಂದುವರೆದಿದೆ.
ಟೀಸರ್ನಲ್ಲಿ ರಾಜ್ ಬಿ. ಶೆಟ್ಟಿ ಹಾಗೂ ರಿಷಬ್ ಶೆಟ್ಟಿ ಮಾತ್ರ ಅದರಲ್ಲಿ ಕಾಣಿಸಿಕೊಂಡಿದ್ದರು. ಇಡೀ ಟೀಸರ್ ನಲ್ಲಿ ನಾಯಕಿಯ ನೆರಳು ಎಲ್ಲೂ ಕೂಡ ಕಾಣಿಸಿರಲಿಲ್ಲ. ಬಹುಶಃ ಕುತೂಹಲ ಮೂಡಿಸಲೋಸುಗ ಶೆಟ್ಟರ ತಂಡ ನಾಯಕಿಯನ್ನು ತೋರಿಸದೇ ಈ ರೀತಿ ಮಾಡಿರಬಹುದು ಅಂತ ಅಂದುಕೊಂಡಿದ್ದರು. ಆದರೆ, ಈ ನಿರೀಕ್ಷೆ ಸುಳ್ಳಾಗಿದೆ. ಸಾರ್, ನಿಮ್ಮ ಸಿನಿಮಾದಲ್ಲಿ ನಾಯಕಿ ಇಲ್ವಾ ಅಂತ ರಾಜ್ ಬಿ ಶೆಟ್ಟಿಯವರನ್ನು ಅವರನ್ನು ಕೇಳಿದಾಗ ಅವರ ಹೇಳಿದ್ದು ಇಷ್ಟು.
ನಾನು ಕಥೆ ಬರೆಯಲು ಕುಳಿತಾಗ ತಲೆಯಲ್ಲಿ ಹೀರೋಯಿನ್ ಇರಬೇಕು ಅಂತೆಲ್ಲ ಯೋಜನೆ ಮಾಡಿದ್ದಂತೂ ಸತ್ಯ. ಕಥೆ ಬರೆಯುತ್ತಾ, ಬರೆಯುತ್ತಾ ಕಥಾ ನಾಯಕಿಯ ಪಾತ್ರ ಎಲ್ಲೂ ಎದ್ದು ಬರಲಿಲ್ಲ. ಎಲ್ಲ ಮುಗಿದ ಮೇಲೆ, ಚಿತ್ರಕ್ಕೆ ಕಥಾ ನಾಯಕಿ ಬೇಕಲ್ಲ ಅನಿಸಿದ್ದು ಸುಳ್ಳಲ್ಲ. ಆದರೆ, ಬೇಕೇಬೇಕು ಅಂತ ಪಾತ್ರ ಸೃಷ್ಟಿಸಿದರೆ. ನಾವು ಅನಗತ್ಯವಾಗಿ ನಾಯಕಿಯನ್ನು ಸಿನಿಮಾದೊಳಗೆ ತುರುಕಿದಂತೆ ಆಗಿಬಿಡುತ್ತದೆ. ಇತರ ಪಾತ್ರಗಳಿಗೂ ಇದು ಮುಜುಗರವಾಗಬಹುದು ಅಥವಾ ಸಿನಿಮಾದ ಒಟ್ಟಾರೆ ಅಂದಕ್ಕೆ ತೊಂದರೆಯಾಗಬಹುದು. ಹೀಗಾಗಿ, ಇಡೀ ಚಿತ್ರದಲ್ಲಿ ನಾಯಕಿಯೇ ಇಲ್ಲ. ಹೀಗಂತ ಹೇಳುವ ಮೂಲಕ ಚಿತ್ರದ ಮೇಲಿನ ಕುತೂಹಲವನ್ನು ಮುಂದುವರಿಸಿದ್ದಾರೆ.
ಈ ಸಂದರ್ಭದಲ್ಲಿ ಅವರು ಆಡಿದ ಇನ್ನೊಂದು ಮಾತು- ಮಹಿಳಾ ಪಾತ್ರ ಅಥವಾ ಹೀರೋಯಿನ್ ಇಲ್ಲದೇ ಇದ್ದರು ಅದರ ಕೆಮಿಸ್ಟ್ರೀ ಅಂತ ಸೇರಿಸಿದ್ದೇವೆ ಎಂದು ಸಿನಿಮಾದ ಸಿಕ್ರೇಟಿನ ತುದಿಯನ್ನು ಕೇಳುಗರ ಕೈಗೆ ಕೊಟ್ಟರು. ಮುಂದಿನ ವಾರ ಬಿಡುಗಡೆಗೊಳ್ಳುವ ಗರುಡ ಗಮನ ವೃಷಭ ವಾಹನ ಚಿತ್ರ ಹೇಗೇಗೆಲ್ಲಾ ಇರಬಹುದು ಅನ್ನೋದು ಕುತೂಹಲ ಮಗದಷ್ಟು ಹೆಚ್ಚಾಗುತ್ತಿದೆ.
ಇದನ್ನೂ ಓದಿ: ರಾಜ್ಯೋತ್ಸವ ಪ್ರಶಸ್ತಿ ಪಡೆದ ನಿತ್ಯಶಿಲ್ಪಿ ಪ್ರಾಚಾರ್ಯ!
Discussion about this post