ಯೋಗ, ಧ್ಯಾನ, ಪ್ರಾಣಾಯಾಮ ಹಾಗೂ ವ್ಯಾಯಾಮ ಮಾಡುವ ಮೂಲಕ ಸದಾ ಬಳುಕುವ ಬಳ್ಳಿಯಂತೆ ದೇಹಸಿರಿಯನ್ನು ಕಾಯ್ದುಕೊಂಡವರು ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ. ಇದೀಗ ಅಭಿಮಾನಿಗಳಿಗೂ ಸದಾ ಆರೋಗ್ಯವಾಗಿ ಹಾಗೂ ಕ್ಷೇಮವಾಗಿರಲು ಏನು ಮಾಡಬೇಕು ಎಂಬ ಬಗ್ಗೆ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂನಲ್ಲಿ ಸಲಹೆ ನೀಡಿದ್ದಾರೆ.
‘ನೀವು ಏನೇ ಸಾಧಿಸುವ ಕನಸು ಕಂಡರೂ, ಅದಕ್ಕೆ ಜೀವನದಲ್ಲಿ ಯಾವಾಗಲೂ ಶಿಸ್ತು, ಸಮರ್ಪಣಾ ಮನೋಭಾವ ಮತ್ತು ನಿರಂತರ ಪ್ರಯತ್ನ ಬೇಕಾಗುತ್ತದೆ. ನಿಮ್ಮ, ‘ಸ್ನಾಯು’ಗಳಿಗೂ ಇದು ಅನ್ವಯವಾಗುತ್ತದೆ! ನೀವೇ ನಿಮ್ಮನ್ನು ಮುಂದಕ್ಕೆ ತಳ್ಳದ ಹೊರತು, ಮುಂದೆ ಸಾಗುವುದು ಯಾವಾಗಲೂ ದೂರದ ಕನಸಿನಂತೆ ಗೋಚರಿಸುತ್ತದೆ. ಹೀಗಾಗಿ ವೇಳಾಪಟ್ಟಿಯನ್ನು ಸಿದ್ಧಪಡಿಸಿಕೊಂಡು ಸಮಯವನ್ನು ಸರಿಯಾಗಿ ನಿರ್ವಹಣೆ ಮಾಡಿ. ಹೆಚ್ಚುವರಿ ಸಕ್ಕರೆಯನ್ನು ತ್ಯಾಗ ಮಾಡಿ. ಚೆನ್ನಾಗಿ ನೀರು ಕುಡಿಯಿರಿ. ಸಮತೋಲಿತ ಪ್ರಮಾಣದಲ್ಲಿ ಶುಚಿಯಾದ ಆಹಾರ ಸೇವಿಸಿ. ನಿನ್ನೆಗಿಂತಲೂ ಹೆಚ್ಚು ಫಿಟ್ ಆಗಿರಿ. ಅದೊಂದೇ ಮುಂದಿರುವ ದಾರಿ. ನೀವು ಅದನ್ನು ಮಾಡಬಹುದು!’ ಎಂದು ಇನ್ಸ್ಟಾಗ್ರಾಂ ಸಂದೇಶದಲ್ಲಿ ಶಿಲ್ಪಾ ಬರೆದುಕೊಂಡಿದ್ದಾರೆ.
View this post on Instagram
ಆಹಾರ ಪದ್ಧತಿ ಬಗ್ಗೆ ಹೆಚ್ಚು ಗಮನವಿರಲಿ: ನೀವು ಎಷ್ಟೇ ಕಾರ್ಯನಿರತರಾಗಿದ್ದರೂ, ಸಮಯಕ್ಕೆ ಸರಿಯಾಗಿ ಊಟ ಮಾಡುವುದನ್ನು ಎಂದಿಗೂ ತಪ್ಪಿಸಬೇಡಿ. ಊಟ ತ್ಯಜಿಸುವುದು, ಹೊತ್ತಲ್ಲದ ಹೊತ್ತಲ್ಲಿ ತಿನ್ನುವುದು, ಅತಿಯಾದ ಆಹಾರ ಸೇವನೆ ಇತ್ಯಾದಿಗಳು ಚಯಾಪಚಯ ಕ್ರಿಯೆಯನ್ನು ನಿಧಾನಗೊಳಿಸುತ್ತವೆ. ಅಲ್ಲದೆ, ಒಂದೇ ರೀತಿಯ ಆಹಾರಕ್ಕೆ ಅಂಟಿಕೊಳ್ಳಬೇಡಿ. ನಿಮ್ಮ ಊಟದಲ್ಲಿ ವೈವಿಧ್ಯಗಳಿರಲಿ ಎಂದು ಆರೋಗ್ಯ ತಜ್ಞರೂ ಸಲಹೆ ನೀಡಿದ್ದಾರೆ.
ಎಷ್ಟು ನೀರು ಕುಡಿಯಬೇಕು?: ಒಬ್ಬ ವ್ಯಕ್ತಿಯು ದಿನಕ್ಕೆ ಸರಾಸರಿ 3 ಲೀಟರ್ ನೀರನ್ನು ಕುಡಿಯುವುದು ಆರೋಗ್ಯಕ್ಕೆ ಉತ್ತಮ ಎಂದಿದ್ದಾರೆ ತಜ್ಞರು.
ಇನ್ನಷ್ಟು…
ಅಣ್ಣಾಥೆ ಸಿನಿಮಾದ ಚಿತ್ರಕತೆ ಕೇಳಿ ಕಣ್ಣೀರಿಟ್ಟ ತಲೈವ
ಗರುಡ ಗಮನ ವೃಷಭ ವಾಹನಕ್ಕೆ ನಾಯಕಿಯೇ ಇಲ್ಲ!
Hamsalekha: ಪೇಜಾವರ ಶ್ರೀಗಳ ಹಾಗೂ ಬಿಳಿಗಿರಿ ರಂಗನ ಟೀಕೆಗೆ ವ್ಯಕ್ತವಾದ ತೀವ್ರ ಆಕ್ರೋಶ: ಕ್ಷಮಿಸಿ ಎಂದ ನಾದಬ್ರಹ್ಮ
Discussion about this post