ಚಿಕ್ಕಮಗಳೂರು : ರೈಲ್ವೆ ಇಲಾಖೆಯ ಬೇಜವಾಬ್ದಾರಿಯಿಂದ ನಿನ್ನೆ ಸುರಿದ ಭಾರೀ ಮಳೆಗೆ 15 ಕುರಿ ಮರಿ ಹಾಗೂ 2 ಹಸುಗಳು ತೇಲಿ ಹೋಗಿರುವ ಘಟನೆ ಲಕ್ಯಾ ಪಂಚಾಯಿತಿ ವ್ಯಾಪ್ತಿಯ ಕಣಿವೆಹಳ್ಳಿಯಲ್ಲಿ ನಡೆದಿದೆ. ಕಳೆದ ವಾರದಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ಕಾಫಿ, ಅಡಕೆ ಸೇರಿದಂತೆ ಅನೇಕ ಬೆಳೆಗಳು ಹನಿಯಾಗಿದ್ದು ಈಗಾಗಲೇ ರೈತರ ಬದುಕು ಮೂರಾಬಟ್ಟೆಯಾಗಿದೆ.
ಇದನ್ನೂ ಓದಿ: Crop damage relief: ಚುನಾವಣಾ ಆಯೋಗದ ಅನುಮತಿ ಪಡೆದು ಬೆಳೆಹಾನಿ ಪರಿಹಾರ ವಿತರಣೆ
ಇದೀಗ ಲಕ್ಯಾದ ಕಣಿವೆಹಳ್ಳಿಯಲ್ಲಿ ಹಾನಿ ಸಂಭವಿಸಿದೆ. ಈ ಪ್ರದೇಶದಲ್ಲಿ ರೈಲ್ವೆ ಹಳಿಯನ್ನು ಹಾಕಿ, ನೀರು ಹೋಗಲು ಸಮರ್ಪಕ ಕಾಲುವೆ ನಿರ್ಮಿಸದೇ ಇದ್ದ ಹಿನ್ನೆಲೆಯಲ್ಲಿ ಈ ದುರ್ಘಟನೆ ಸಂಭವಿಸಿದೆ ಎಂಬುದು ಸಾರ್ವಜನಿಕರ ಆರೋಪ.
ಅಷ್ಟೇ ಅಲ್ಲದೆ ತೋಟದ ಮನೆಯ ಶೆಡ್ ಗೆ ನೀರು ನುಗ್ಗಿ 3 ಸಾವಿರ ತೆಂಗಿನಕಾಯಿ ಕೊಚ್ಚಿಹೋಗಿದೆ .
ಇದನ್ನೂ ಓದಿ: Kangana Ranaut: ಕಂಗನಾ ರಾಣಾವತ್ ಹೇಳಿಕೆ ಬೌದ್ಧಿಕ ದಿವಾಳಿತನದ ಹೇಳಿಕೆ
ಜತೆಗೆ ಜಮೀನಿಗೆ ನೀರು ನುಗ್ಗಿ ಫಸಲು ಹಾಳಾಗಿದೆ ಎಂದು ಪಂಚಾಯಿತಿ ಮಾಜಿ ಅಧ್ಯಕ್ಷ ಕಾಂತರಾಜ ಅರಸ್ ಆರೋಪಿಸಿದ್ದಾರೆ. ಕಾಂಗ್ರೆಸ್ ನಾಯಕಿ ರೇಖಾ ಹುಲಿಯಪ್ಪಗೌಡ ಸ್ಥಳಕ್ಕೆ ಭೇಟಿ ನೀಡಿ ಜಮೀನಿನ 1 ಬದಿಯಿಂದ ಇನ್ನೊಂದು ಬದಿಗೆ ಹೋಗಲು ಮಧ್ಯದಲ್ಲಿ ರೈಲ್ವೆ ಹಳಿ ಹಾದು ಹೋಗಿದೆ ,ಮೇಲು ಸೇತುವೆ ಇಲ್ಲದೆ ಜನರಿಗೆ ತೀವ್ರ ತೊಂದರೆಯಾಗಿದೆ.
ಸಚಿವರು ಸೇರಿದಂತೆ ಸಂಬಂಧಪಟ್ಟ ಜನಪ್ರತಿನಿಧಿಗಳಿಗೆ ಗ್ರಾಮಸ್ಥರು ಅನೇಕ ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನ ಆಗಿಲ್ಲ ಎಂದು ಆರೋಪಿಸಿದ್ದಾರೆ. ಕಡೂರು ಪಟ್ಟಣ ಸೇರಿದಂತೆ ಬಹುತೇಕ ಕಡೆ ಮಳೆಯಿಂದ ಜನ -ವಾಹನ ಸವಾರರು ತೀವ್ರ ಪರದಾಡಬೇಕಾಯಿತು.
15 lambs 2 cows washed away by heavy rain

























Discussion about this post