ಮುಂಬೈ: ಆಮೀರ್ ಖಾನ್ ಜತೆ ಎಲ್ಲಿ ಪ್ರೀತಿಯ ಬಲೆಯಲ್ಲಿ ಬಿಳುತ್ತೇನೋ ಎಂಬ ಭಯವಿತ್ತು. ಅದಕ್ಕಾಗಿ ಅವರ ಕಣ್ಣುಗಳನ್ನು ನೋಡಲೂ ನಿರಾಕರಿಸಿದ್ದೆ ಎಂದು ಖ್ಯಾತ ಬಾಲಿವುಡ್ ನಟಿ ರಾಣಿ ಮುಖರ್ಜಿ ಹೇಳಿದ್ದಾರೆ.
90ರ ದಶಕದ ಕೊನೆಯಲ್ಲಿ ಬಾಲಿವುಡ್ ಸಿನಿಮಾಗಳಲ್ಲಿ ಮಿಂಚಿದ್ದ ರಾಣಿ ಮುಖರ್ಜಿ ನಂತರದ ದಶಕದಲ್ಲಿ ಬಾಲಿವುಡ್ ಆಳಿದ್ದಾರೆ. ಸೋನಿ ಟಿವಿಯಲ್ಲಿ ಕಪಿಲ್ ಶರ್ಮಾ ಅವರ ಕಾಮಿಡಿ ಶೋದಲ್ಲಿ ಮಾತನಾಡಿದ ಅವರು, ಬಾಲಿವುಡ್ನಲ್ಲಿ ತಮ್ಮ ಆರಂಭದ ದಿನಗಳ ಬಗ್ಗೆ ಪ್ರಶ್ನೆಗಳನ್ನು ಕೇಳಲು ವೀಕ್ಷಕರಿಗೆ ಅವಕಾಶ ಮಾಡಿಕೊಟ್ಟಿದ್ದರು.
ಇದೇ ವೇಳೆ, ಹಿರಿಯ ನಟರೊಂದಿಗೆ ನಟಿಸುವಾಗ ಎಂದಾದರೂ ನರ್ವಸ್ ಆಗಿದ್ದೀರಾ ಎಂಬ ಪ್ರಶ್ನೆ ಅವರಿಗೆ ಎದುರಾಯಿತು. ಇದಕ್ಕುತ್ತರಿಸಿದ ಅವರು, ಘುಲಾಮ್ ಮತ್ತು ಕುಚ್ ಕುಚ್ ಹೋತಾ ಹೈ ಸಿನಿಮಾಗಳ ಪ್ರಣಯ ದೃಶ್ಯಗಳಲ್ಲಿ ಆಮೀರ್ ಖಾನ್ ಮತ್ತು ಶಾರುಖ್ ಖಾನ್ ಜತೆ ನಟಿಸುವಾಗ ನರ್ವಸ್ ಆಗಿದ್ದೆ ಎಂದು ಹೇಳಿದ್ದಾರೆ.
‘ನನಗಾಗ ಹದಿನಾರೋ ಹದಿನೇಳೋ ವಯಸ್ಸಿದ್ದಿರಬಹುದು. ಆಮೀರ್ ಖಾನ್ ಮತ್ತು ಶಾರುಖ್ ಖಾನ್ ಅವರನ್ನು ದೊಡ್ಡ ಸ್ಕ್ರೀನ್ನಲ್ಲಿ ನೋಡಿದ್ದೆ. ಖಯಾಮತ್ ಸೇ ಖಯಾಮತ್ನಲ್ಲಿ ಅವರನ್ನು ನೋಡಿದ ಮೇಲೆ ನನ್ನ ಹೃದಯ ಬಡಿತ ಹೆಚ್ಚಾಗಿತ್ತು. ದಿಲ್ವಾಲೆ ದುಲ್ಹಾನಿಯಾದಲ್ಲಿ ಶಾರುಖ್ ಅವರನ್ನು ನೋಡಿದ ಮೇಲೆ ಅವರು ನನ್ನ ಕ್ರಷ್ ಆಗಿದ್ದರು’ ಎಂದು ಅವರು ನೆನಪಿಸಿಕೊಂಡಿದ್ದಾರೆ.
‘ಘುಲಾಮ್ನಲ್ಲಿ ಆಮೀರ್ ಖಾನ್ ಜತೆ ಪ್ರಣಯ ದೃಶ್ಯದಲ್ಲಿ ನಟಿಸಿದ ಸಂದರ್ಭವನ್ನು’ ಅವರು ವೀಕ್ಷಕರ ಜತೆ ಹಂಚಿಕೊಂಡಿದ್ದಾರೆ.
ಇನ್ನಷ್ಟು ಸುದ್ದಿಗಳು…
ಬಾಡಿಗೆ ತಾಯ್ತನ ಮೂಲಕ ಅವಳಿ ಮಕ್ಕಳ ತಾಯಿಯಾದ ಪ್ರೀತಿ ಝಿಂಟಾ
ಆರೋಗ್ಯದ ಗುಟ್ಟು ಹಂಚಿಕೊಂಡ ಶಿಲ್ಪಾ ಶೆಟ್ಟಿ: ಸದಾ ಆರೋಗ್ಯವಾಗಿರಲು ಹೀಗೆ ಮಾಡಬೇಕಂತೆ ನೋಡಿ…
Discussion about this post